ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಬಂಧನಕ್ಕೆ ಹೆಚ್ಚಿದ ಒತ್ತಡ: ಶಹಾಬಾದನಲ್ಲಿ ಪ್ರತಿಭಟನೆ

2
126

ಶಹಾಬಾದ: ಪ್ರವಾದಿ ಮಹಮ್ಮದ್ ಅವರನ್ನು ಅವಹೇಳಿಸಿದ ಬಿಜೆಪಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಆಶಿಕಾನೆ ರಸೂಲ್ ಕಮಿಟಿ ವತಿಯಿಂದ ಶನಿವಾರ ನಗರದ ಮಜ್ಜಿದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಾಧ್ಯಮವೊಂದರ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಕಾರಿ ನಿಂದನೆ ಮಾಡಿದಬಿಜೆಪಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲರನ್ನು ಕೂಡಲೇ ಬಂಧಿಸಬೇಕು. ದೇಶದಲ್ಲಿ ಅಲ್ಪಸಂಖ್ಯಾತ, ದಲಿತ,ಹಿಂದುಳಿದ ವರ್ಗಗಳ ಮೇಲೆ ನಿರಂತರ ಹಲ್ಲೆ, ದಾಳಿ ಮತ್ತು ಮುಸ್ಲಿಂ ಸಮುದಾಯವನ್ನು ಗುರಿ ಮಾಡುತ್ತಿರುವ ಆರ್‌ಎಸ್‌ಎಸ್ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ದೇಶದಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮೌನ ಸಮ್ಮತಿಯನ್ನು ನೀಡುತ್ತಿರುವುದಲ್ಲದೇ, ಎಲ್ಲಾ ದುಷ್ಕರ್ಮಿಗಳಿಗೆ ಆಡಳಿತಾತ್ಮಕ ನೆರವನ್ನೂ ನೀಡುತ್ತಿದೆ ಎಂದು ಕಿಡಿಕಾರಿದರು. ಹಿಜಾಬ, ಹಲಾಲ, ವ್ಯಾಪಾರ ಬಹಿಷ್ಕಾರ, ಆಝಾನ,ಈದ್ಗಾಗಳ ವಿವಾದ ಸೃಷ್ಟಿ ಹೀಗೆ ನಿರಂತರ ಮುಸಲ್ಮಾನರ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಸುತ್ತಿದ್ದು ಬಿಜೆಪಿ ಹಾಗೂ ಹಿಂದುತ್ವ ನಾಯಕರು ದ್ವೇಷ ಭಾಷಣಗಳನ್ನು ಮತ್ತು ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಲೇ ಇದ್ದಾರೆ.ಇವರ ವಿರುದ್ಧ ಸರಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾನೂನಾತ್ಮಕ ಕ್ರಕಗಳನ್ನು ಕೈಗೊಳ್ಳು ಅಥವಾ ಖಂಡಿಸುವ ಮಾತುಗಳನ್ನಾಡಲು ಮುಂದಾಗದ ಬಿಜೆಪಿ ಸರಕಾರ ಪ್ರವಾದಿ ನಿಂದನೆಯ ಈ ಪ್ರಕರಣದಲ್ಲಿ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ ಅವರನ್ನು ಪಕ್ಷದಿಂದ ವಜಾಗೊಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸರಕಾರ ನಮ್ಮ ಜತೆ ಚೆಲ್ಲಾಟವಾಡುತ್ತಿದೆ.

ಇದನ್ನೂ ಓದಿ: ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ

ಪ್ರವಾದಿ ನಿಂದನೆಯನ್ನು ಯಾವ ಕಾರಣಕ್ಕೂ ಮುಸ್ಲಿಂ ಸಮುದಾಯ ಸಹಿಸಲು ಸಾಧ್ಯವಿಲ್ಲ.ಕೂಡಲೇ ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ ಅವರನ್ನು ಬಂಧಿಸಬೇಕು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಜಾತ್ಯಾತೀತ ಪರಂಪರೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ಜಾಗತಿಕ ಮಟ್ಟದಲ್ಲಿ ದೇಶವನ್ನು ತಲೆತಗ್ಗಿಸುವಂತೆ ಮಾಡಿರುವ ಬಿಜೆಪಿ ಸರಕಾರ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲದೇ ದೇಶದ ಮಾನವನ್ನು ಹರಾಜುಗೊಳಿಸುತ್ತಿರುವ ಸಂಘಟಕರನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದರು.ನಂತರ ಜಿಲ್ಲಾ ಎಸ್‌ಪಿ ಇಶಾ ಪಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಮತ್ತು ಪಿಐ ಸಂತೋಷ ಹಳ್ಳೂರ್ ಅವರಿಂದ ಸೂಕ್ತ ಬಂದೋಬಸ್ತ ಮಾಡಲಾಗಿತ್ತು.

ಇದನ್ನೂ ಓದಿ: ಮೈಸೂರು ವಿವಿ ಸಂಶೋಧಕರ ಸಂಘದ ವಿಧ್ಯಾರ್ಥಿಗಳಿಂದ ಪ್ರಸನ್ನ ಎನ್ ಗೌಡಗೆ ಬೆಂಬಲ

ಅಬ್ದುಲ್ ಖಾದಿರ್ ಸಾಬ್,ಮಹಮ್ಮದ ಮಸ್ತಾನ,ಮತೀನ ಪಟೇಲ, ಸೈಯದ್ ಲಾಡ್ಲೆ ಹುಸೇನಿ, ಅಪ್ಸರ ಸೇಠ್,ರಫೀಕ್ ಬಾಗಬಾನ್,ಮೌಲನ ಹಿದಾಯತ ಅಲಿ,ಮುಬಿನ್ ಅಲಿ, ಅಕ್ಬರ್ ಚಿಟ್,ಮೆಹಬೂಬ್ ಪಟೇಲ್,ಹಾಷಮ್ ಖಾನ,ಮಹಮ್ಮದ ಉಬೆದುಲ್ಲಾಹ್,ಡಾಕ್ಟರ್ ಅಹ್ಮದ್ ಪಟೇಲ,ಮಹಮ್ಮದ್ ಫಾರೂಕ್,ಮಹಮ್ಮದ್ ಜೀಲಾನಿ ಶಾಹ್ ,ನದೀಮ್ ಶಾಂತ ನಗರ,ಜಾವೀದ್ ಮಡ್ಡಿ,ನೋರೋದ್ದಿನ್ ಪಟೇಲ ಸೇರಿದಂತೆ ಅನೇಕರು ಇದ್ದರು.

ಇದನ್ನೂ ಓದಿ: ನಕಲಿ ಬೀಜ ಗೊಬ್ಬರಗಳ ಬಗ್ಗೆ ಎಚ್ಚರ ವಹಿಸಿ: ಮಲ್ಲಿಕಾರ್ಜುನ ಸತ್ಯಂಪೇಟೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here