ಸುರಪುರ: ನಗರದ ಸ್ವಾಮಿ ವಿವೇಕಾನಂದ ಕಾಲೋನಿಯಲ್ಲಿ ವಿದ್ಯುತ್ ಇಲ್ಲದ ಕಾರಣ ನಿವಾಸಿಗಳು ಶಾಸಕ ರಾಜೂಗೌಡ ಹತ್ತಿರ ಮನವಿ ಮಾಡಲಾಗಿತ್ತು. ಅದರಂತೆ ಶಾಸಕರ ಮಾರ್ಗದರ್ಶನದಲ್ಲಿ ಬೆಳಕು ಒದಗಿಸುವ ಕೆಲಸ ನಡೆಯುತ್ತಿದೆ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಹಳಿಚಂಡಿ ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಬಂಧನಕ್ಕೆ ಹೆಚ್ಚಿದ ಒತ್ತಡ: ಶಹಾಬಾದನಲ್ಲಿ ಪ್ರತಿಭಟನೆ
ನಗರದ ರಂಗಂಪೇಟೆಯ ಸ್ವಾಮಿ ವಿವೇಕಾನಂದ ಕಾಲೋನಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿ, ತಾಲೂಕಿನ ಶಖಾಪುರ, ರತ್ತಾಳದ ಕತಲ್ ಸಾಬ್ ದರ್ಗಾ, ದೇವಾಪುರ, ದೇವಿಕೇರಾ, ದೇವತ್ಕಲ್, ಶೆಳ್ಳಗಿ ಕ್ರಾಸ್, ಹಾಲಗೇರಾ, ಭೈರಿಮಡ್ಡಿ, ಶಾಂತಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.ಗುಣಮಟ್ಟದ ಕಾಮಗಾರಿಯನ್ನು ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ
ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಕಾಲೋನಿಯ ನಿವಾಸಿಗಳಾದ ಕಲ್ಯಾಣಯ್ಯ ಸ್ವಾಮಿ, ವೆಂಕಪ್ಪ ನಾಯಕ, ಮುರಳಿ ಅಂಬುರೆ, ಶಿವು ಖಾದಿ, ಮಲ್ಲು ಬಡಿಗೇರ್, ಶಿವರಾಜ ಸಗರ, ಜಂಗಲಯ್ಯ, ಅಮರೇಶ್ ತಂಬಾಕಿ, ರಫೀಕ್, ಅಧಿಕಾರಿಗಳಾದ ಬಷೀರ್ ಅಹ್ಮದ್, ಅಬ್ಬಾದುಲ್ಷಾ ಭಾಷಾ ಒಂಟಿ, ಹಣಮಂತ ಯಾದವ, ಬಸವಂತ್ರಾಯ, ನೀಲಕಂಠರಾಯ, ರಮೇಶ ಕಂಬ ಇತರರಿದ್ದು ತ್ವರಿತಗತಿಯ ಕಾಮಗಾರಿಯ ಕುರಿತು ಸಂತಸ ವ್ಯಕ್ತಪಡಿಸಿದರು.