ಶಹಾಬಾದ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಳಾ(ಕೆ) ಗ್ರಾಮದ ಮೂರು ಮನೆಗಳ ಗೋಡೆ ಕುಸಿತದಿಂದಾಗಿ ಭಯಭಿತರಾಗಿ ಜನರು, ಮನೆ ತೊರೆದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಪ್ರತಿದಿನ ಸತತ ತುಂತುರು ಮಳೆ ಬೀಳುತ್ತಿದ್ದು, ಮನೆ ಚಾವಣಿ ಹಾಗೂ ಗೋಡೆಗಳು ನೆಲಕ್ಕುರುಳಿ ಆತಂಕದಲ್ಲಿಜೀವನ ಸಾಗಿಸುವಂತಾಗಿದೆ ಸುತ್ತಮುತ್ತಲಿನ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ರವಿವಾರ ಸುರಿದ ಮಳೆಯಿಂದಾಗಿ ಗೋಳಾ(ಕೆ) ಗ್ರಾಮದ ನಿವಾಸಿಗಳಾದ ಬಸಮ್ಮ ಕಲ್ಯಾಣಪ್ಪ ಹೂಗಾರ, ರಾಮಲಿಂಗ ಹೊಸಮನಿ, ಶಂಭುಲಿಂಗ ನಾಯ್ಕಲ್ ಎಂಬುವರ ಮನೆ ಗೋಡೆ ಕುಸಿದು ಆತಂಕವನ್ನುಂಟು ಮೂಡಿಸಿದೆ.
ಗೋಡೆ ಕುಸಿದ ಪರಿಣಾಮ ಕೆಲವರು ಪಕ್ಕದವರ ಮನೆಯಲ್ಲಿ ಕುಟುಂಬ ಆಶ್ರಯ ಪಡೆದಿದೆ. ಗೋಡೆ ಕುಸಿತದಿಂದ ಮನೆಯಲ್ಲಿ ದವಸ, ಧಾನ್ಯಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಮಳೆಗೆ ಆಹುತಿಯಾಗಿವೆ.ಅಲ್ಲದೇ ಗೋಡೆ ಕುಸಿತದಿಂದ ವಿದ್ಯುತ್ ತಂತಿ ಕಡಿದು ಬಿದ್ದಿದೆ.ತಕ್ಷಣವೇ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ವಿದ್ಯುತ್ ಕಡಿತಗೊಳಿಸಿದ್ದಾರೆ.ಅಲ್ಲದೇ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಬೇಟಿ ನೀಡಿ ಪರಿಶೀಲಿಸಿದ್ದಾರೆ.
ಶಾಸಕ ಬಸವರಾಜ ಮತ್ತಿಮಡು ಅವರು ಈ ಬಗ್ಗೆ ಗಮನಹರಿಸಿ ಮಳೆಯಿಂದಾಗಿ ಹಾನಿಗೊಳಗಾದ ಫಲಾನುಭವಿಗಳತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಿಸುವತ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.