ಏಕಜ್ಞಾನ ಶಿಸ್ತಿನಿಂದ ಬಹು ಶಿಸ್ತಿನ ಕಡೆಗೆ

1
172

ಕಲಬುರಗಿ: ಗುಲ್ಬರ್ಗ ವಿವಿಯಕನ್ನಡಅಧ್ಯಯನ ಸಂಸ್ಥೆಯಲ್ಲಿಕನ್ನಡ ಸ್ನಾತಕ ಪಠ್ಯಪುಸ್ತಕ ಸಿದ್ಧತೆಯ ಕುರಿತು ಸೋಮವಾರದುಂಡುಮೇಜಿನ ಸಭೆ (ಪಠ್ಯಪುಸ್ತಕ ಸಿದ್ಧತೆಯ ಪೂರ್ವಭಾವಿ ಕಾರ್ಯಗಾರ) ಜರುಗಿತು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶಅವರು ಮಾತನಾಡುತ್ತ, ಪಠ್ಯಪುಸ್ತಕಗಳು ವ್ಯಕ್ತಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಮತ್ತುಜ್ಞಾನದ ವಿಸ್ತಾರಕ್ಕೆ ಪೂರವಕವಾಗಿವೆ. ಅದಕ್ಕಾಗಿ ಪಠ್ಯಪುಸ್ತಕರಚಿಸುವಾಗ ವೈಜ್ಞಾನಿಕಕ್ರಮವನ್ನುಅನುಸರಿಸಬೇಕು.

Contact Your\'s Advertisement; 9902492681

ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸತನವನ್ನುಉಂಟುಮಾಡಬೇಕು.ಬೋಧನೆ ಮಾಡುವುವರಿಗೆ ಹೆಚ್ಚಿನ ಆಕರಗಳ ಮಾಹಿತಿ ಲಭ್ಯವಿರಬೇಕು.ಸಂಶೋಧನೆ ಹೆಚ್ಚಿನಒತ್ತನ್ನು ನೀಡಬೇಕು.ಪಾಠ್ಯ-ಬೋಧನೆಯಿಂದ ಶೋಧನ ಸಂಶೋಧನಕ್ರಮಉಂಟಾಗಬೇಕು.ಇತಿಹಾಸ ಮತ್ತು ಸಾಮಾಜಿಕದೃಷ್ಟಿಕೋನ ಹೊಂದಿರಬೇಕು.

ವಿದ್ಯಾರ್ಥಿಗಳ ಮನೋವೈಜ್ಞಾನಿಕ ಹಿತದೃಷ್ಟಿಯನ್ನು ಪೋಷಿಸಬೇಕು.ಸಮೂಹ ಮಾಧ್ಯಮಗಳ ಬಳಕೆಯಿಂದ ವಸ್ತು-ನಿಷ್ಟತೆಉಂಟಾಗಬೇಕು.ಶಿಕ್ಷಕರು ಸೂಕ್ಷ್ಮಮದೃಷ್ಟಿಯಿಂದ ತಂತ್ರಾಂಶಗಳ ಬಳಕೆ ಮಾಡಬೇಕು.ಪಠ್ಯಕ್ರಮರಚನೆಯಲ್ಲಿ ಹೆಚ್ಚಿನ ಉಪಕ್ರಮಗಳನ್ನು ಅನುಸರಿಸಬೇಕು.ಸಂಪಾದಿತ ಕೃತಿಗಳನ್ನು ರಚಿಸುವಾಗ ಮೂಲಭೂತ ಪಠ್ಯಗಳನ್ನು ಗಮನಿಸಬೇಕು ಎಂದು ಹೇಳಿದರು.

ಕನ್ನಡಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ. ಪೋತೆಅವರುಅಧ್ಯಕ್ಷತೆ ವಹಿಸಿಮಾತನಾಡುತ್ತ ಪಠ್ಯಪುಸ್ತಕರಚನಾ ಸಂಪಾದಕರುಎಲ್ಲ ದೃಷ್ಟಿಕೋನಗಳಿಂದ ಪಠ್ಯವನ್ನು ಗಮನಿಸಿ ಸೂಕ್ತವಾದ ಪಠ್ಯಗಳನ್ನು ತಯಾರಿಸಬೇಕು.ಯಾವುದೇಒಂದು ಪಠ್ಯಪುಸ್ತಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರಬೇಕು.

ರಾಷ್ಟ್ರೀಯ ಹೆಸ ಶಿಕ್ಷಣ ನೀತಿ-೨೦೨೦ ರ ಪ್ರಕಾರಏಕಜ್ಞಾನ ಶಿಸ್ತಿನಿಂದ ಬಹುಜ್ಞಾನ ಶಿಸ್ತಿನ ಕಡೆಗೆ ಸಾಗಬೇಕು ಎಂದರು.ಡಾ. ವಿಜಯಕುಮಾರಿಕರಿಕಲ, ಡಾ. ಶ್ರೀಶೈಲ ನಾಗರಾಳ, ಡಾ.ಶಾರದಾದೇವಿ ಎಸ್. ಜಾಧವ, ಡಾ.ಅಮೃತಾಕಟಕೆ, ಡಾ. ರಾಜಕುಮಾರಅಲ್ಲೂರೆ, ಡಾ. ಶಾಮಲಾ ಎಸ್. ಸ್ವಾಮಿ, ಶ್ರೀ ರಮೇಶ ಬಕ್ಕಪ್ಪ ಬುಳ್ಳಾ ಅವರು ಭಾಗವಹಿಸಿ ಹಲವಾರು ವಿಷಯಗಳನ್ನು ಕುರಿತು ಚರ್ಚಿಸಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here