Tuesday, July 16, 2024
ಮನೆಬಿಸಿ ಬಿಸಿ ಸುದ್ದಿಮಕ್ಕಳ ಪ್ರತಿಭೆಗೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಸಿದ್ದವೀರಯ್ಯ ರುದ್ನೂರ

ಮಕ್ಕಳ ಪ್ರತಿಭೆಗೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಸಿದ್ದವೀರಯ್ಯ ರುದ್ನೂರ

ಶಹಾಬಾದÀ: ಓದಿನ ಜೊತೆಗೆ ಮಕ್ಕಳ ಪ್ರತಿಭೆ ಅನಾವರಣವಾಗಬೇಕು ಅಂದಾಗ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸವಾಗಲು ಸಾದ್ಯ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತವೆ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಹೇಳಿದರು.

ಅವರು ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ರಾವೂರ ವತಿಯಿಂದ ಹಮ್ಮಿಕೊಂಡಿದ್ದ ರಾವೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವುದರ ಮೂಲಕ ಉಧ್ಘಾಟಿಸಿ ಮಾತನಡಿದರು.

ಕೇವಲ ಓದು ಬರಹ ಮಾಡುವುದಷ್ಟೆ ಅಲ್ಲದೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಶಿಕ್ಷಣ ಇಲಾಖೆ ಶಾಲಾಹಂತ,ಕ್ಲಸ್ಟರ್ ಹಂತ, ತಾಲೂಕ ಹಂತ, ಜಿಲ್ಲಾ ಹಂತ, ರಾಜ್ಯ ಹಂತದ ವರೆಗೆ ಸ್ಪರ್ಧೆಗಳನ್ನು ನಡೆಸಿ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದೆ. ಆದ್ದರಿಂದ ತೀರ್ಪುಗಾರರರು ಯಾವುದೇ ಪಕ್ಷಪಾತ ತೋರದೆ ನಿಷ್ಪಕ್ಷಪಾತವಾಗಿ ಮಕ್ಕಳನ್ನು ಆಯ್ಕೆ ಮಾಡುವ ಕೆಲಸ ಮಾಡಬೇಕು. ಸೋಲು ಗೆಲುವು ಸ್ಪರ್ಧೆಗಳಲ್ಲಿ ಸಾಮಾನ್ಯ ಆದರೆ ಪ್ರತಿಯೊಬ್ಬರೂ ಭಾಗವಹಿಸುವುದನ್ನು ಕಲಿಯಬೇಕು ಕಲಿಯಬೇಕು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು,ಆಡಳಿತ ಮಂಡಳಿ,ಪೊಷಕರು ಪ್ರೊತ್ಸಾಹ ಕೊಟ್ಟಾಗ ಮಾತ್ರ ಉನ್ನತ ಹಂತಕ್ಕೆ ಹೋಗಲು ಸಾಧ್ಯವೆಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಮಾತನಾಡಿ ಪ್ರತಿಯೊಂದು ಮಗುವುನಲ್ಲಿ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅವರ ಪ್ರತಿಭೆ ಅವರಿಗೆ ಅರಿವಾಗುವಂತೆ ಮಾಡಲು ಇಂಹತ ವೇದಿಕೆಗಳು ಬೇಕು. ತಾಲೂಕ ಸರಕಾರಿ ನೌಕರರ ಸಂಘದ ಅದ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು.

ವೇದಿಕೆ ಮೇಲೆ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೊಡಿ, ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರಪ್ಪ ಬಾಳಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಬ್ದುಲ್ ಸಲೀಂ ಪ್ಯಾರೇ, ಸಂಘಟನಾ ಸಹಕಾರ್ಯದರ್ಶಿ ಹುಸೇನ ಪಾಷಾ, ಸಿ.ಆರ್.ಪಿ ಕವಿತಾ ಸಾಲೂಕಿ ಮನೋಹರ, ಮಹೇಶ ಬಾಳಿ, ರವಿ ಘೋಳಿ , ಮಂಜುನಾಥ ಜಡಿ, ಬಾಲಾಜಿ, ಶೋಭಾ, ರುಕ್ಮಿಣಿ, ಜಯಶ್ರೀ, ಚಂದ್ರಾವತಿ, ಮಾರುತಿ, ಛತೃ ರಾಠೋಡ, ಸಾಯಬಣ್ಣ ನಾಟೇಕರ, ಮಹಾದೇವ ಕಾಟ್ಕರ, ವಿದ್ಯಾಧರ ಖಂಡಾಳ, ಶಿವಕುಮಾರ ಸರಡಗಿ, ಶರಣು ಸಜ್ಜನ, ಚನ್ನಬಸಪ್ಪ ಬಂಡೇರ, ಶಿವಾನಂದ ಡೋನಮಾಳ ಸೇರಿದಂತೆ 12 ಪ್ರಾಥಮಿಕ 4 ಪ್ರೌಢ ವಿಭಾಗದಿಂದ 50 ಕ್ಕೂ ಹೆಚ್ಚು ಶಿಕ್ಷಕರು 250 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡರು.
ಕಾರ್ಯಕ್ರಮಕ್ಕೆ ಮುಂಚೆ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಅತಿಥಿಗಳನ್ನು ಗ್ರಾಮದ ಹನುಮಾನ ದೇವಸ್ಥಾನದಿಂದ ಮಕ್ಕಳ ಡೊಳ್ಳಿನ ತಂಡ, ಎನ್.ಸಿ.ಸಿ ತಂಡ ಅದ್ದೂರಿ ಸ್ವಾಗತ ನೀಡುವುದರೊಂದಿಗೆ ಜನರ ಗಮನ ಸೆಳೆಯಿತು.

ಶಿಕ್ಷಕ ಸಿದ್ಧಲಿಂಗ ಬಾಳಿ ನಿರೂಪಿಸಿದರು, ಬಸಪ್ಪ ಮುಗುಳಕೋಡ ಪ್ರಾರ್ಥಿಸಿದರು, ಸಿ.ಆರ್.ಪಿ ಕವಿತಾ ಸಾಲೂಕಿ ಸ್ವಾಗತಿಸಿದರು. ಉದಯಕುಮಾರ ಇಂಗಳೆ ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular