ಹಿಂದಿ ಹೇರಿಕೆ ನಿರಂಕುಶ ನಿರ್ಧಾರ: ವೀರಭದ್ರಪ್ಪ

0
46

ವಾಡಿ: ಭಾರತದಂತಹ ಬಹುಭಾಷಾ ದೇಶದಲ್ಲಿ ಹಿಂದಿ ಹೇರಿಕೆ ಎಂಬುದು ನ್ಯಾಯ ಸಮ್ಮತವಲ್ಲದ ನಿರಂಕುಶ ನಿರ್ಧಾರವಾಗುತ್ತದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ ಆರ್.ಕೆ.ವೀರಭದ್ರಪ್ಪ ಟೀಕಿಸಿದ್ದಾರೆ.

ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿರ್ಧಾರವನ್ನು ಖಂಡಿಸಿದ್ದಾರೆ. ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಬಳಸುವ ದುರಹಂಕಾರದ ಘೋಷಣೆ ಮಾಡಿದೆ. ಸಂಸದೀಯ ಸಮಿತಿಯ ಪ್ರಸ್ತಾವನೆ ಗಮನಿಸಿದರೆ ಕಾನೂನು ಪ್ರಕ್ರಿಯೆಗಳನ್ನೂ ಸಹ ಹಿಂದಿಯಲ್ಲೇ ನಡೆಸಬೇಕು ಎನ್ನುತ್ತದೆ. ಇದು ಕಾರ್ಯರೂಪಕ್ಕೆ ಬಂದರೆ, ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ಭಾಷೆಗಳು ಕಡೆಗಣಿಸಲ್ಪಡುತ್ತವೆ. ಆಗ ನಾವು ಹಿಂದಿಯನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತಿಯೊಬ್ಬ ಸಂವೇದನಾಶೀಲ ವ್ಯಕ್ತಿಯು ತನ್ನ ಮಾತೃಭಾಷೆಯ ಬಗ್ಗೆ ಬಲವಾದ ಭಾವನೆ ಹೊಂದಿರುತ್ತಾನೆ. ಹಾಗಾಗಿಯೇ ಸ್ವಿಟ್ಜರ್ಲೆಂಡ್ ಮತ್ತು ಕೆನಡಾ ದೇಶಗಳು ಯಾವುದೇ ಒಂದು ರಾಜ್ಯ ಅಥವ ರಾಷ್ಟ್ರೀಯ ಭಾಷೆಯನ್ನು ಹೊಂದಿಲ್ಲ. ಸಂಪರ್ಕ ಭಾಷೆಯಾಗಿ ಮತ್ತು ಐತಿಹಾಸಿಕ ಕಾರಣಗಳಿಗಾಗಿ ಅನೇಕ ದೇಶಗಳಲ್ಲಿ ಇಂಗ್ಲೀಷ್ ಬಳಕೆಯಾಗುತ್ತಿದೆ. ಆದರೆ ವಿಭಿನ್ನ ಭಾಷೆಗಳನ್ನು ಹೊಂದಿರುವ ಭಾರತೀಯರ ಮೇಲೆ ಹಿಂದಿ ಹೇರುವುದು ಸರಿಯಲ್ಲ. ಭಾಷಾ ಅಂದಾಭಿಮಾನವನ್ನು ಹುಟ್ಟುಹಾಕಿ ಜನರನ್ನು ವಿಭಜಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ದೂರಿದ್ದಾರೆ.

ಹಿಂದಿಯೇತರ ಭಾಷಿಕ ರಾಜ್ಯಗಳು ಅಥವ ಪ್ರದೇಶಗಳ ಜನರು ಇದನ್ನು ಹಿಂದಿಯ ಪ್ರಾಬಲ್ಯವನ್ನು ಸ್ಥಾಪಿಸುವ ಜಿಂಗೊಯಿಸ್ಟಿಕ್ ಪ್ರಯತ್ನವಾಗಿ ತೆಗೆದುಕೊಳ್ಳುತ್ತಾರೆ. ಇಚ್ಚೆಯುಳ್ಳವರಿಗೆ ಹಿಂದಿ ಒಂದು ಭಾಷೆಯಾಗಿ ಕಲಿಸುವುದಕ್ಕೆ ಯಾವೂದೇ ತಕರಾರಿಲ್ಲ. ಆದರೆ ಹಿಂದಿಯನ್ನು ಕನ್ನಡ ಒಳಗೊಂಡಂತೆ ಇತರ ಭಾಷೆಗಳ ಮೇಲಿನ ಹೇರಿಕೆಯನ್ನು ಶಿಕ್ಷಣ ಉಳಿಸಿ ಸಮಿತಿ ಒಪ್ಪುವುದಿಲ್ಲ ಎಂದು ಸರ್ಕಾರವನ್ನು ಎಚ್ಚರಿಸಿರುವ ಹೋರಾಟಗಾರ ಆರ್.ಕೆ.ವೀರಭದ್ರಪ್ಪ, ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಮುಂದಾಗಬಾರದು. ನಿರ್ಲಕ್ಷ್ಯ ವಹಿಸಿ ಜನತೆಯ ಮನಸ್ಸಿನ ವಿರುದ್ಧ ನಿರ್ಣಯಕೈಗೊಂಡರೆ ಹೋರಾಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here