ಕಲಬುರಗಿ: ನಿರ್ಣಾಯಕರು ನಿಷ್ಪಕ್ಷಪಾತ ಆಯ್ಕೆ ಮಾಡಿದ್ದಾಗ ಮಾತ್ರ ಮಕ್ಕಳ ಪ್ರತಿಭೆ ಕಾರಂಜಿಯಾಗಿ ಹೊರಬರಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಯ ನಳಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಉದ್ಪಾಟಿಸಿ ಅವರು ಮಾತನಾಡಿದರು.
ಮಕ್ಕಳು ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸರ್ಧೆಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ತುಂಬಾ ಮುಖ್ಯ. ಮಕ್ಕಳು ಇದನ್ನರಿತು ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಕಲೆಯಲ್ಲಿ ಮಕ್ಕಳ ಶಕ್ತಿ ಮತ್ತು ಸಾಮಥ್ರ್ಯ ಅಡಗಿದೆ ಎಂದರು.
ಪ್ರತಿಭಾ ಕಾರಂಜಿ ಅಂಗವಾಗಿ ಆಯೋಜಿಸಿದ ಪರಿಸರ ಸಂರಕ್ಷಣೆ ಕುರಿತ ಭಾಷಣ ಸ್ಪರ್ಧೆ, ಕನ್ನಡ-ಇಂಗ್ಲೀಷ ಶಿಕ್ಷಣದಲ್ಲಿ ಮೊಬೈಲ್ ಬಳಕೆ, ಆಶು ಭಾಷಣ, ಭರತನಾಟ್ಯ, ಜಾನಪದ, ಡೊಳ್ಳ ಕುಣಿತ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಕಣ್ಣಿ, ನೋಡಲ್ ಅಧಿಕಾರಿ ಕರಬಸಯ್ಯ ಮಠ, ಶಿಕ್ಷಣಾಧಿಕಾರಿಗಳ ಸಂಘ ಅಧ್ಯಕ್ಷ ಚನ್ನಬಸಪ್ಪ ಮುಧೋಳ, ನಳಂದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಿಬೂಬ ಪಾಷಾ, ಗೊಬ್ಬರ (ಬಿ) ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಜಿ.ಜಿ. ವಣಿಕ್ಯಾಳ ಸೇರಿದಂತೆ ಶಾಲಾ ಕಾಲೇಜುಗಳು ಮುಖ್ಯಸ್ಥರಗಳು ಹಾಗೂ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.