ಕಲಬುರಗಿ: ನಗರದ ರಾಮತಿರ್ಥ ನಗರದಲ್ಲಿಜ್ಞಾನ ಸರಸ್ವತಿ ವಿದ್ಯಾ ಮಂದಿರ ಆವರಣದಲ್ಲಿ ಗಡಿನಾಡ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಾದ ಸುನಾದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.
ಹಿರಿಯ ಸಂಗೀತ ಕಲಾವಿದ ಮಡಿವಾಳಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾದವು ಪ್ರತಿಯೊಬ್ಬನಲ್ಲಿಯೂ ಇದೆ ಮನುಷ್ಯನ ನಾಡಿ ಮಿಡಿತವೂ ಕೂಡಾ ಒಂದು ನಾದವನ್ನು ತಿಳಿಸುತ್ತದೆ ನಾದಮಯಂ ಇದಂ ಜಗತ್ತ ಸರ್ವಂ ಎನ್ನುವಂತೆ ಸರ್ವದಲ್ಲೂ ನಾದವನ್ನು ಕಾಣಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿರೇವಣಸಿದ್ದಪ್ಪ ಬಿರಾದಾರಸಿದ್ದಲಿಂಗಪ್ಪ ಹಡಪದ ಡಾ.ಬಸವರಾಜ ಪಾಟೀಲಚಂದ್ರಕಾಂತ ಮೇತ್ರೆ ಸಂಸ್ಥೆಯ ಅಧ್ಯಕ್ಷವೀರಭದ್ರಯ್ಯ ಸ್ಥಾವರಮಠ ಉಪಸ್ಥಿತರಿದ್ದರು.
ನಂತರ ಸಂಗೀತ ಕಾರ್ಯಕ್ರಮದಲ್ಲಿ ಹಿರಿಯ ಆಕಾಶವಾಣಿ ಕಲಾವಿದಸಂಗಣ್ಣ ಬೆಣ್ಣೂರಶಿವಶರಣಯ್ಯ ಮಠ, ಮಲ್ಲಯ್ಯ ಮಠಪತಿ, ಚಂದ್ರಕಾಂತ ರಾಜೋಳಾ, ಸುಧಾಕರ ಸಂಗೋಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪವಿತ್ರಾ ವಿಶ್ವನಾಥ ನಿರೂಪಿಸಿದರು.