ವಾಜಪೇಯಿ ನಮಗೆಲ್ಲಾ ಆದರ್ಶಮಯ

0
23

ಶಹಾಬಾದ: ವಾಜಪೇಯವರ ಜೀವನವೇ ನಮಗೆಲ್ಲಾ ಆದರ್ಶಮಯ. ಅವರ ನಡೆ,ನುಡಿ,ಪ್ರಾಮಾಣಿಕತೆ, ರಾಜಕೀಯ ಚಾಣಾಕ್ಷತೆ, ಅವರ ಮಾತಿನ ಮೋಡಿಯಲ್ಲದೇ ಸರಳ ವ್ಯಕ್ತಿತ್ವ ಇಂದಿನ ಯುವಕರಿಗೆ ಮಾದರಿ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ್ ಹೇಳಿದರು.

ಅವರು ರವಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಅಟಲಜೀ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಂತಹ ಯೋಜನೆಗಳು, ರೂಪಿಸಿದ ವಿದೇಶಾಂಗ ನೀತಿಗಳು ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಎಲ್ಲಾ ರಾಜಕೀಯ ಮುಖಂಡರಿಗೆ ಪ್ರೇರಣಾದಾಯಕ. ಅವರ ಸತ್ಯ ಶುದ್ಧ ಕಾಯಕಕ್ಕೆ ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರಕರ ಹಾಗೂ ಶಹಾಭಾದ ಮಂಡಲ ಪ್ರಭಾರಿ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಭಾರತ ಬಿಟ್ಟು ತೊಲಗಿ ಚಳುವಳಿಯಿಂದ ಸ್ವಾತಂತ್ರ್ರ್ಯ ಹೋರಾಟಕ್ಕೆ ಧುಮುಕಿ ಸಂಸದರಾಗಿ,ಸಚಿವರಾಗಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರೂ ಭ್ರಷ್ಟಾಚಾರದಿಂದ ದೂರವಿದ್ದು, ನಿಸ್ವಾರ್ಥಿ, ಮೌಲ್ಯಧಾರಿತ ಅಪರೂಪದ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬಡಜನರ ಕಲ್ಯಾಣಗೋಸ್ಕರ 108 ಅಂಬುಲೆನ್ಸ, ಮಹಿಳೆಯರಿಗೆ ಉಚಿತ ಶಿಕ್ಷಣ, ಸರ್ವಶಿಕ್ಷಣ ಅಭಿಯಾನ ಜಾರಿಗೆ ತಂದ ಶ್ರೇಯಸ್ಸು ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ , ಉಪಾಧ್ಯಕ್ಷರಾದ ಶ್ರೀಧರ್ ಜೋಶಿ, ಮಹಾದೇವ ಗೊಬ್ಬೂರಕರ, ಬಸವರಾಜ ತರನಳ್ಳಿ, ದುರ್ಗಪ್ಪ ಪವಾರ, ಶಶಿಕಲಾ ಸಜ್ಜನ, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಕಾರ್ಯದರ್ಶಿ ಶರಣು ಕವಲಗಿ, ಪ್ರಮುಖರಾದ ಕನಕಪ್ಪ ದಂಡಗುಲಕರ, ಬಸವರಾಜ ಬಿರಾದಾರ, ಯಲ್ಲಪ್ಪ ದಂಡಗುಲಕರ, ರಾಜು ದಂಡಗುಲಕರ, ತಿಮ್ಮಣ್ಣ ಕುರಡೆಕರ, ಬಸವರಾಜ ಸಾತ್ಯಾಳ, ರಾಮು ಕುಸಾಳೆ, ಬಸವರಾಜ ಹುಗ್ಗಿ, ನಾರಾಯಣ ಕಂದಕೂರ, ದಾಮೋದರಭಟ್ಟ, ಹಣಮಂತ ಕೇತ್ರೆÉ್ರ, ಸಂತೋಷ ಪಾಟೀಲ, ಸಂಜಯ ವಿಟಕರ, ದೀನೇಶ ಗೌಳಿ, ಶಿವಶರಣಪ್ಪ ಸುಬೆದಾರ, ರಾಜು ಕುಂಬಾರ, ಜಯಶ್ರೀ ಸೂಡಿ, ಸೀಮಾ ಸುಬೆದಾರ, ಪಲ್ಲವಿ ಕಟಗಿ, ಭೀಮಯ್ಯ ಗುತ್ತೆದಾರ, ದತ್ತಾ ಫಂಡ್, ಜಗದೇವ ಸುಬೆದಾರ, ಚಂದ್ರಕಾಂತ ಸುಬೆದಾರ, ಸುಭಾಷ ಕುಸಾಳೆ, ಅಪ್ಪಾರಾವ ನಾಗಶೆಟ್ಟಿ, ಉಮೇಶ ನಿಂಬಾಳಕರ, ಸಚೀನ ಹಂಚಾಟೆ ಹಾಗೂ ಕಾರ್ಯಕರ್ತರು ಉಪಸ್ಥಿತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here