ಕಾರಂಜಾ ಸಂತ್ರಸ್ಥರಿಗೆ ಪರಿಹಾರಕ್ಕೆ ಒತ್ತಾಯಿಸಿ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ

0
10

ಬೀದರ: ಕಾರಂಜಾ ಮುಳುಗಡೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿಯ ವತಿಯಿಂದ ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಂiÀiವರ ನೆತೃತ್ವದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಮನೆಯ ಮುಂದೆ ಮತ್ತು ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ ಹಾಗೂ ವಿಧಾನಸಭೆ ಸದಸ್ಯರಾದ ರಹೀಂ ಖಾನರಾರ ಮನೆಯ ಮುಂದೆ ಪ್ರತಿಭಟನೆ ಮತ್ತು ಧರಣಿ ನಡೆಸಿ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ನ್ಯಾಯಬದ್ಧವಾಗಿ ಸಮರ್ಪಕ ಪರಿಹಾರ ಹಣ ದೊರಕಿಸಿಕೊಡಲು ಹಾಗೂ ಗೋದಾವರಿ ಕಣಿವೆ ಪ್ರದೇಶದ ನಮ್ಮ ಪಾಲಿನ ನೀರು ಕಾಲಮಿತಿಯಲ್ಲಿ ಬಳಸಿಕೊಳ್ಳಲು ತಕ್ಷಣ ಸಂಘಟಿತವಾಗಿ ಪಕ್ಷಭೇದ ಮರೆತು ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು.

ಮನವಿಯಲ್ಲಿ ಕೋರಿರುವಂತೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬೀದರ ಜಿಲ್ಲೆಯ ಸಚಿವರು, ಶಾಸಕರುಗಳು ಒಗ್ಗೂಡಿ ಬಲವಾದ ಒತ್ತಡ ತಂದು ನ್ಯಾಯ ದೊರಕಿಸಿಕೊಡಬೇಕೆಂದು ವಿವರಿಸಲಾಗಿದೆ. ಈ ಸಂದರ್ಭದಲ್ಲಿ ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಮುಖಂಡರಾದ ವಿನಯ ಮಾಳಗೆ, ಸಂತೋಷ ಚಟ್ಟಿ, ಸಾಗರ ಖೇಣಿ, ರೋಹನಕುಮಾರ, ಭೀಮರೆಡ್ಡಿ, ಮಹೇಶ ಮಡಕೆ, ಹಾವಂಗಿ ಸ್ವಾಮಿ, ರಾಜಶೇಖರ ಮಡಗೋಳ, ಸೂರ್ಯಕಾಂತ ಸಂಗೋಳಗಿ ಸೇರಿದಂತೆ ಅನೇಕರು ಈ ಹೋರಾಟದಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here