ಪಿ.ಡಿ.ಎ. ಕಾಲೇಜಿನಲ್ಲಿ ಐದು ದಿನಗಳ ಕಾರ್ಯಾಗಾರಕ್ಕೆ ಚಾಲನೆ

0
39

ಕಲಬುರಗಿ: ಸಮಾಜಕ್ಕೆ ಅನುಕೂಲವಾಗುವಂತಹ ಸಂಶೋಧನೆ ಹಾಗೂ ನೂತನ ಆವಿಷ್ಕಾರಗಳತ್ತ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ, ಸಮಸ್ಯಗಳ ಪರಿಹಾರಕ್ಕೆ ತಾಂತ್ರಿಕ ಯೋಜನೇಗಳನ್ನು ರೂಪಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಕರಗತಮಾಡಿಕೊಳ್ಳಬೇಕಾಗಿದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಅತ್ಮ ವಿಶ್ವಾಸ ಹೆಚ್ಚಿಸಿ ಅವರ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲು ಅನುವು ಮಾಡಿಕೊಡುವುದು, ಅವರಿಗಾಗಿ ಕಾರ್ಯಾಗಾರಗಳನ್ನು ಏರ್ಪಡಿಸುವುದು ಹಾಗೂ ಅವರ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಬಹಳ ಅನಿವಾರ್ಯವಾಗಿದೆ ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನ ವಿಶ್ವವಿದ್ಯಾಲಯದ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಸ್ಟ್ರಿಬ್ಯೂಟೆಡ್ ಸಿಸ್ಟಮ್ ಪ್ರಯೋಗಾಲಯದ ನಿರ್ದೇಶಕರಾದ ಡಾ. ರಾಜಕುಮಾರ ಬುಯ್ಯಾ ಅವರು ತಿಳಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರ ಹಾಗೂ ಭಾರತಿಯ ತಾಂತ್ರಿಕ ಶಿಕ್ಷಣ ಸಂಸ್ಥೆ, ನವದೇಹಲಿಯ ಐದು ದಿನಗಳ ಜಂಟಿ ಕಾರ್ಯಾಗಾರವನ್ನು ಉದ್ಘಟಿಸಿ ಮಾತನಾಡಿದರು. “ರೀಸಂಟ್ ಟ್ರೆಂಡ್ಸ್ ಇನ್ ರೀಸರ್ಚ ಆಂಡ್ ಇನ್ನೋವ್ಹೇಶನ್ ಫಾರ್ ಫೋರ್‍ಫ್ರಂಟ್ ಟೆಕ್ನಾಲಜೀಸ್” ಎಂಬ ವಿಷಯದ ಮೇಲೆ ನಡೆಯುವ ಐದುದಿನಗಳ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗವಮಿಸಿದ ಅವರು ವಿಶೇಷ ಉಪನ್ಯಾಸವನ್ನು ನೀಡಿದಲ್ಲದೇ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ  “ಚಾಲೇಂಜೆಸ್ ಇನ್ ಕ್ಲೌಡ್ ಕಂಪ್ಯೂಟಿಂಗ್” ಎಂಬ ವಿಷಯದ ಮೇಲೆ ತಮ್ಮ ಉಪನ್ಯಾಸವನ್ನು ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಜಗನ್ನಾಥ ಬಿಜಾಪೂರೆ ಅವರು ಮಾತನಾಡಿ ಸಂಶೋಧನೆ ಮತ್ತು ಆವಿಷ್ಕಾರಗಳು ವಿದ್ಯಾರ್ಥಿ ಜೀವನದ ಎರಡು ಬಹುಮುಖ್ಯ ಅಂಗವಾಗಿದ್ದು ಶಿಕ್ಷಕರು ಕೂಡ ಮೌಲ್ಯವರ್ಧಿತ ಪಠ್ಯ ಹಾಗೂ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ತಾಂತ್ರಿಕ ಶಿಕ್ಷಣ ಸಮಾಜದ ಎಲ್ಲ ಕ್ಷೇತ್ರದಲ್ಲಿ ವ್ಯಾಪಿಸಿದ್ದು ವ್ಯದ್ಯಕೀಯ ಕ್ಷೇತ್ರದ ಎಲ್ಲಾ ರೀತಿಯ ಉಪಕರಣಗಳು ತಾಂತ್ರಿಕ ಕೌಶಲ್ಯಹೊಂದಿವೆ. ಅದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ರೀತಿಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅದರ ಅನುಕೂಲತೆಗಳನ್ನು ಪಡೆದುಕೊಳ್ಳಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ಎಲ್ಲರಿಗೂ ಸ್ವಾಗತಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀದೇವಿ ಸೋಮಾ ಅವರು ಕಾರ್ಯಾಗಾರದ ಮಹತ್ವ ಹಾಗೂ ಸಂಸೋಧನಾ ಕೇಂದ್ರದ ಮುಂದಿನ ಗುರಿಯನ್ನು ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಿದರು.

ಕಾರ್ಯಕ್ರಮದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಜೆ. ಖಂಡೇರಾವ, ಡಾ. ಅನೀಲಕುಮಾರ ಪಟ್ಟಣ, ಡಾ. ಕೈಲಾಶ ಪಾಟೀಲ, ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಉಪಪ್ರಾಚಾರ್ಯರಾದ ಡಾ. ಭಾರತಿ ಹರಸೂರ(ಅಕ್ಯಾಡೆಮಿಕ್ಸ್) ಮತ್ತು ಡಾ. ಕಲ್ಪನಾ ವಾಂಜರಖೇಡ (ಅಡ್ಮಿನಿಷ್ಟ್ರೇಶನ್) ಇವರು ಉಪಸ್ಥಿತರಿದ್ದರು.

ಈ ಐದು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಡಾ. ರಾಜಕುಮಾರ ಬುಯ್ಯಾ, ಡಾ. ಶಿವಾನಂದ ಪೂಜಾರ, ಡಾ. ಶಾಂತಾಕುಮಾರ ಬಿ. ಪಾಟೀಲ, ಡಾ. ಪ್ರಕಾಶ ಪಟ್ಟಣ, ಡಾ. ಭಾರತಿ ಹರಸೂರ, ಪ್ರೊ. ಅಶೋಕ ಪಾಟೀಲ, ಪವನರಾಜ ರಂಗೇಗೌಡ ಹಾಗೂ ಸುನೀಲ ಶಾಂಭತನವರ ಅವರು ಪಾಲ್ಗೊಂಡು ವಿವಿಧ ವಿಷಯಗಳ ಮೇಲೆ ಉಪನ್ಯಾಸವನ್ನು ನೀಡುವರು.

ಕಾರ್ಯಕ್ರಮದ ಸಹ-ಸಂಚಾಲಕರಾದ ಪ್ರೊ. ಜ್ಯೋತಿ ಪಾಟೀಲ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸಂಚಾಲಕರಾದ ಡಾ. ಸೈಯದಾ ಫಾಹ್ಮಿದಾ ಅವರು ವಂದಿಸಿದರು, ಪ್ರೊ. ಪೂರ್ವಿಕಾ ಹರಸೂರ ಅವರು ಕಾರ್ಯುಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here