ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಸಿದ್ಧಗಂಗಾಶ್ರೀ

0
13

ಕಲಬುರಗಿ: ಬಸವಾದಿ ಶರಣರ ತತ್ವಾದರ್ಶಗಳನ್ನು ಆಚರಣೆಯಲ್ಲಿ ತಂದು ಜ್ಞಾನದಾಸೋಹ -ಅನ್ನದಾಸೋಹದ ಮೂಲಕ ಲಕ್ಷಾನುಲಕ್ಷ ಭಕ್ತರ ಪಾಲಿಗೆ ಬೆಳಕಾದವರು ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳು ಆಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಜನ್ಮದಿನಾಚರಣೆಯ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮ, ಮತ-ಪಂಥಗಳ ಬೇಧ-ಭಾವವಿಲ್ಲದೆ ಮಾನವೀಯ ನೆಲೆಯಲ್ಲಿ ಮನಸ್ಸುಗಳನ್ನು ಕಟ್ಟಿದ ಮಹಾನ್ ಸಂತ ಡಾ. ಶಿವಕುಮಾರ ಮಹಾಸ್ವಾಮಿಗಳು ಆಗಿದ್ದಾರೆ. ನಾಡಿನ ಇಂಥ ಶ್ರೇಷ್ಠ ಸಂತರ ವಿಚಾರಗಳನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಹಿರಿಯ ಸಾಹಿತಿ ಪ್ರೊ ಶಿವರಾಜ ಪಾಟೀಲ, ಡಾ. ಶರಣಪ್ಪ ಮಾಳಗಿ, ಪ್ರಕಾಶಕ ಬಸವರಾಜ ಕೋನೆಕ್, ಡಾ. ನಾಗವೇಣಿ ಪಾಟೀಲ, ರಮೇಶ ಧುತ್ತರಗಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಡಾ. ಕೆ.ಗಿರಿಮಲ್ಲ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಶರಣಬಸಪ್ಪ ನರೂಣಿ, ಪ್ರಮುಖರಾದ ರೇವಣಸಿದ್ದಪ್ಪ ಜೀವಣಗಿ, ನಾಗರಾಜ ಜಮದರಖಾನಿ, ಡಾ. ಸಿದ್ಧಲಿಂಗ ಡಬ್ಬಾ, ಜಗದೀಶ ಮರಪಳ್ಳಿ, ಶಕುಂತಲಾ ಪಾಟೀಲ ಜಾವಳಿ, ಶಿಲ್ಪಾ ಜೋಶಿ, ವಿಶಾಲಾಕ್ಷಿ ಮಾಯಣ್ಣವರ, ವಿಜಯಲಕ್ಷ್ಮೀ ಹಿರೇಮಠ, ಎಸ್ ಎಂ ಪಟ್ಟಣಕರ್, ಹೆಚ್.ಎಸ್.ಬರಗಾಲಿ, ಶಿವಶರಣಪ್ಪ ಹಡಪದ, ಪ್ರಭವ ಪಟ್ಟಣಕರ್, ತ್ರಿವೇಣಿ ಜಾಧವ, ಸೋಮಶೇಖರಯ್ಯಾ ಹೊಸಮಠ, ಮಲ್ಲಿಕಾರ್ಜುನ ಇಬ್ರಾಹಿಂಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here