ಸಕಲ ಜೀವರಾಶಿಗಳಲ್ಲಿ ದೇವರನ್ನು ಕಂಡವರು

0
56

ಮಹಾದಾಸೋಹಿ ಶರಣಬಸವೇಶ್ವರರು ಸಕಲ ಜೀವ ರಾಶಿಗಳಲ್ಲಿ ದೇವರನ್ನು ಕಂಡಿದ್ದರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕಿ ಪ್ರೊ. ಸಾವಿತ್ರಿ ಜಂಬಲದಿನ್ನಿ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ತೊನ್ನು ರೋಗಿಯೊಬ್ಬನನ್ನು ಊರ ಜನರು ಅವಮಾನ ತಾಳಲಾರದೆ ಆತ ಊರನ್ನೆ ಬಿಡುತ್ತಾನೆ. ಊಟ, ನೀರು ಇಲ್ಲದೆ ಅಳುತ್ತಿರುತ್ತಾನೆ. ಅವನಲ್ಲಿಗೆ ಒಬ್ಬ ಮುದುಕಿಯೊಬ್ಬಳು ಬಂದು ಕಲಬುರಗಿಯ ಶರಣರ ಹತ್ತಿರ ಹೋಗು ಎಂದು ತಿಳಿಸುತ್ತಾಳೆ. ಅವನು ಮಹಾಮನೆಯ ಎದುರಿಗೆ ಬಂದು ’ ಯಪ್ಪಾ ಎಂದು ಅಳಲು ಪ್ರಾರಂಭಿಸಿದ. ಮಲಗಿದ್ದ ಶರಣರಿಗೆ ಅವನ ಆರ್ತನಾದ ಎಚ್ಚರಿಸಿತು. ಎದ್ದವರೇ ಭಸ್ಮವನ್ನು ಹಿಡಿದು ಅವನ ಹತ್ತಿರ ಬಂದು ಹಣೆ-ಮೈಗೆ ಭಸ್ಮವನ್ನು ಹಚ್ಚುತ್ತಾರೆ. ಪ್ರಸಾದ ಮಾಡಿಸುತ್ತಾರೆ. ಕಾಳಜಿ ತೋರುತ್ತಾರೆ. ಅವನು ರೋಗದಿಂದ ಮುಕ್ತಿ ಹೊಂದುತ್ತಾನೆ. ಶರಣರಿಗೆ ನಮಸ್ಕರಿಸಿ ಶರಣರ ಸೇವೆಯಲ್ಲಿ ನಿರತನಾಗುತ್ತಾನೆ.

ಶರಣರ ದರ್ಶನಕ್ಕೆ ಬಂಡಿ ಕಟ್ಟಿಕೊಂಡು ಜನ ರಾತ್ರಿಯೆಲ್ಲ ಹೊರಟಾಗ ಕೆಲ ದುಷ್ಟರು ಗಾಡಿ ತಡೆದು ಜನರಿಗೆ ಹೊಡೆಯುತ್ತಾರೆ. ಭಕ್ತರೆಲ್ಲ ’ಯಪ್ಪಾ ಶರಣಾ’ ಎಂದು ಕೂಗಲು ಪ್ರಾರಂಭಿಸಿದಾಗ ಶರಣರು ಜಟ್ಟಂತ ಎದ್ದು ಕೈ ಎತ್ತಿದ್ದಾರೆ. ಆ ಕಟುಕರು ಕಲ್ಲಿನ ಹಾಗೇ ನಿಂತಲಿಯೇ ನಿಂತಿದ್ದಾರೆ. ನಾಲ್ಕೈದು ದಿನ ಕಳೆದು ಅವರು ಹಾಗೇ ನಿಂತಿದ್ದಾರೆ. ಐದನೇ ದಿನಕ್ಕೆ ಶರಣರು ತಮ್ಮ ಕೈಯನ್ನೆತ್ತಿ ಅವರನ್ನು ಮುಕ್ತಗೊಳಿಸುತ್ತಾರೆ. ಭಕ್ತರಿಗೆ ಗೊತ್ತಾಗಿ ಆ ದುಷ್ಟರು ಓಡಿ ಶರಣರಲ್ಲಿಗೆ ಹೋಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಮುಂದೆ ಹೊಸ ಮನುಷ್ಯರಾಗಿ ಬಾಳುತ್ತಾರೆ.

ಒಂದು ಸಲ ಒಬ್ಬ ಮಠದ ಅಯ್ಯ ಶರಣರಲ್ಲಿಗೆ ಬಂದು ’ ಪವಾಡ ಮಾಡಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಿ’ ಎಂದು ಒದರತೊಡಗಿದ. ಶಾಂತಚಿತ್ತದಿಂದ ಶರಣರು ’ಪವಾಡ ಮಾಡಲು ನಾನೇನು ಶಿವನಲ್ಲ, ವಿಭೂತಿ ಲಿಂಗದ ಹೊರತು ನನ್ನಲೇನು ಇಲ್ಲ’ ಎನ್ನುತ್ತಾರೆ. ’ವಿಭೂತಿ, ಲಿಂಗ ನಮ್ಮ ಬಳಿಯು ಇವೆ. ಅದಕ್ಕಿಂತ ಹೆಚ್ಚೀನದೇನು ನಿನ್ನ ವಿಭೂತಿ ಎಂದು ಪ್ರಶ್ನಿಸುತ್ತಾನೆ. ಆಗ ಶರಣರು ತಮ್ಮ ಕೈಯಲ್ಲಿದ್ದ ವಿಭೂತಿ ಆತನಿಗೆ ಕೊಡುತ್ತಾರೆ. ಕೈ ಹಚ್ಚಿದ ಕೂಡಲೇ ’ ಅಯ್ಯೋ’ ಎನ್ನುತ್ತಾ ಆ ವಿಭೂತಿ ಬಿಡುತ್ತಾನೆ. ವಿಭೂತಿ ಹೋಗಿ ಶರಣರ ಕೈ ಸೇರುತ್ತದೆ. ವಿಭೂತಿಯ ಮಹಿಮೆಯನ್ನು ಮಠದ ಅಯ್ಯನಿಗೆ ಶರಣರು ತಿಳಿಸುತ್ತಾರೆ.

ಶರಣಬಸವರು ಜೀವಸಂಕುಲದಲ್ಲಿ ದಯೆಯನ್ನು ಇರಿಸಿ ಹಾಗೆ ನಡೆದುಕೊಂಡವರು. ಮಾನವರಿಗೂ , ಪಶು ಪ್ರಾಣಿಯೊಳಗೆ ಅವರು ಭೇದವನ್ನೆ ಮಾಡಿರಲಿಲ್ಲ. ಎಲ್ಲರ ಒಳಗೆ ಶಿವನಿದ್ದಾನೆಂದು ತಿಳಿದು ಅವರನ್ನು ಗೌರವದಿಂದ ಕಾಣುತ್ತಿದ್ದರು. ಒಮ್ಮೆ ಶರಣಬಸವರು ಈ ವಿಷಯವನ್ನು ಕುರಿತು ಹೇಳುತ್ತಿರುವಾಗ ಒಬ್ಬ ಮೂರ್ಖ ಎದ್ದು ನಿಂತು ’ ಅದು ಹೇಗೆ ಸಾಧ್ಯ, ಪ್ರಾಣಿ ಪ್ರಾಣಿ, ಮನುಷ್ಯ ಮನುಷ್ಯನೇ ಎಂದು ವಾದ ಮಾಡುತ್ತಾನೆ. ಆಗ ಅಲ್ಲಿಯೇ ಕುಳಿತ ಒಂದು ಆಕಳನ್ನು ಕರೆತರಲು ಹೇಳುತ್ತಾರಲ್ಲದೆ ಭಸ್ಮವನ್ನು ಅದರ ಹಣೆಗೆ ಹಚ್ಚಿ ಮೈಮೇಲೆ ಕೈ ಆಡಿಸುತ್ತಾರೆ. ತಕ್ಷಣವೇ ಆ ಆಕಳು ’ ನಿಮ್ಮ ಮಾತು ಕೇಳಬಾರದೆಂದು ನಾವು ಸುಮ್ಮನಾಗಿದ್ದೇವೆ ದಿನಾಲೂ ಅಪ್ಪ ಶರಣರ ಸಂಗಡ ನಾವು ಮಾತಾಡುವೆವು. ನಮ್ಮ ಕಷ್ಟ ಅವರಿಗೆ ಮಾತ್ರ ಗೊತ್ತು ಎಲೇ ಮೂರ್ಖ ಮಾನವಾ’ ಎಂದು ಹೇಳಿ ಸುಮ್ಮನಾಗುತ್ತದೆ. ಕುಳಿತ ಜನರೆಲ್ಲ ದಿಗ್ಬ್ರಾಂತರಾಗುತ್ತಾರೆ. ಒಂದು ಶರಣರ ದೊಡ್ಡ ಲೀಲೆಯೇ ಎಂದು ಹೇಳಿದರು.

ಪ್ರೊ.ಸಾವಿತ್ರಿ ಜಂಬಲದಿನ್ನಿ, ಪ್ರಾಧ್ಯಾಪಕಿ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here