ಎಸ್‍ಯುಸಿಐ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ

0
30

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ನಿಂದ ರಾಜ್ಯದ ಆಯ್ದ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಎಸ್‍ಯುಸಿಐಸಿ ರಾಜ್ಯ ಸಮಿತಿ ಸದಸ್ಯ ಹೆಚ್. ವಿ. ದಿವಾಕರ ಹೇಳಿದರು.

ರಾಜ್ಯದಲ್ಲಿ ಪರ್ಯಾಯ ರಾಜಕೀಯ ರಂಗ ಬೆಳೆಯುತ್ತಿರುವಾಗಲೇ ಎಡಪಕ್ಷಗಳು ಒಂದೊಂದು ಪಕ್ಷದ ಜೊತೆಗೆ ಹೊಂದಾಣಿಕ ಮಾಡಿಕೊಂಡಿವೆ. ಸಿಪಿಐ, ಸಿಪಿಐಎಂ ಎರಡೂ ಪಕ್ಷಗಳು ಕಾಂಗ್ರೆಸ್, ಜೆಡಿಎಸ್ ಜತೆ ಮೈತ್ರಿ ಬೆಳೆಸಿವೆ. ಆದರೆ ಎಸ್‍ಯುಸಿಐ ಮಾತ್ರ ತನ್ನ ನಿಲುವಿನಲ್ಲಿ ರಾಜಿಯಾಗಿಲ್ಲ. ಹೀಗಾಗಿ, ಸ್ವಂತ ಬಲದ ಮೇಲೆ ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚಳವಳಿಯ ಅಸ್ತಿತ್ವ ಕಾಪಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಕ್ಷೇತ್ರ (ಗಣಪತರಾವ್ ಕೆ), ಕಲಬುರಗಿ ದಕ್ಷಿಣ ಕ್ಷೇತ್ರ (ಮಹೇಶ ಎಸ್,ಬಿ), ಬೆಂಗಳೂರಿನ ರಾಜಾಜಿನಗರ ಕ್ಷೇತ್ರ (ರಮಾ ಟಿಸಿ), ರಾಜರಾಜೇಶ್ವರಿ ನಗರ ಕ್ಷೇತ್ರ (ವೇಣುಗೋಪಾಲ ಭಟ್), ದಾವಣಗೆರೆ ದಕ್ಷಿಣ ಕ್ಷೇತ್ರ (ಭಾರತಿ), ಧಾರವಾಡ ಗ್ರಾಮೀಣ ಕ್ಷೇತ್ರ (ಮಧುಲತಾ ಗೌಡರ್), ಬಳ್ಳಾರಿ ನಗರ ಕ್ಷೇತ್ರ (ಆರ್. ಸೋಮಶೇಖರ ಗೌಡ), ಕಂಪ್ಲಿ ಕ್ಷೇತ್ರ (ಎ. ದೇವದಾಸ್), ಮೈಸೂರಿನ ಕೃಷ್ಣರಾಜ ಕ್ಷೇತ್ರ (ಸಂಧ್ಯಾ ಪಿಎಸ್), ರಾಯಚೂರು ನಗರ ಕ್ಷೇತ್ರ (ಎನ್.ಎಸ್. ವೀರೇ±)À, ತುಮಕೂರ ನಗರ ಕ್ಷೇತ್ರ (ಎಸ್. ಎಸ್. ಸ್ವಾಮಿ), ವಿಜಯಪುರ ನಗರ ಕ್ಷೇತ್ರ (ಮಲ್ಲಿಕಾರ್ಜುನ ತಳವಾರ), ಯಾದಗಿರಿ ಕ್ಷೇತ್ರ (ಕೆ. ಸೋಮಶೇಖರ), ಚಾಮರಾಜನಗರ ಕ್ಷೇತ್ರ (ಸೀಮಾ ಜಿ.ಎಸ್) ಸ್ಪರ್ಧಿಸಲಿದ್ದಾರೆ ಎಂದು ವಿವರಿಸಿದರು.

ಪ್ರಮುಖರಾದ ವಿ.ಜಿ. ದೇಸಾಯಿ, ಜಗನ್ನಾಥ ಎಸ್.ಎಚ್, ರಾಘವೇಂದ್ರ ಎಂ.ಜಿ, ಸ್ನೇಹಾ ಕಟ್ಟಿಮನಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here