ಪೊಲೀಸರು ಶಾಸಕರ ಕೈಗೊಂಬೆಯಾಗಿದ್ದರಿಂದ ಗಲಾಟೆ ನಡೆದಿದೆ

0
15

ಸುರಪುರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಕೊಡೇಕಲ್‍ನಲ್ಲಿ ನಡೆದ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕೊಡೇಕಲ್‍ನಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಮುಖಂಡರು ಯಾವುದೇ ರೀತಿಯ ಗಲಾಟೆಗೆ ಮುಂದಾಗಿರಲಿಲ್ಲ,ಬಿಜೆಪಿಯವರೆ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ಎರಡು ದಿನಗಳ ಹಿಂದೆ ಬಿಜೆಪಿಯ ಕೆಲ ಮುಖಂಡರು ಹೇಳಿಕೆಯನ್ನು ನೀಡಿ,ಕಾಂಗ್ರೆಸ್‍ನವರು ತಾವೆ ತಮ್ಮ ವಾಹನಗಳ ಮೇಲೆ ಕಲ್ಲು ಎಸೆದುಕೊಂಡಿದ್ದಾರೆ ಎಂದು ಹೇಳುತ್ತಾರೆ.

Contact Your\'s Advertisement; 9902492681

ಆದರೆ ಲಕ್ಷಾಂತರ ರೂಪಾಯಿಯ ವಾಹನಗಳ ಮೇಲೆ ನಾವೇ ಕಲ್ಲು ಎಸೆಯುವುಸು ಸಾಧ್ಯವೆ ಎಂದರು.ಅಲ್ಲದೆ ನಾವು ಚನ್ನಪಟ್ಟಣದಲ್ಲಿ ಶಾಂತಗೌಡರ ಸೇರ್ಪಡೆ ಮುಗಿಸಿಕೊಂಡು ಕಕ್ಕೇರಾ ಕಾಂಗ್ರೆಸ್ ಕಚೇರಿಗೆ ಹೋಗಿ ನಂತರ ನಾರಾಯಣಪುರ ಕಚೇರಿಯಲ್ಲಿ ಕೆಲ ತಾಂಡಾದವರ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಹೋಗುತ್ತಿದ್ದಾಗ,ಕೊಡೇಕಲ್ ಬಸವೇಶ್ವರ ಚೌಕ್ ಬಳಿಯಲ್ಲಿ ಕೆಲ ಬಿಜೆಪಿ ಯುವಕರು ಬೈಕ್ ಅಡ್ಡ ಹಾಕಿ ದಾಂಧಲೆ ಮಾಡಿದರು.

ಆದರೂ ನಾವು ಸುಮ್ಮನಾಗಿ ನಾರಾಯಣಪುರಕ್ಕೆ ಹೋಗಿದ್ದೇವು,ನಾರಾಯಣಪುರಕ್ಕೆ ಡಿವೈಎಸ್ಪಿ ಮತ್ತು ಪೊಲೀಸ್ ಇನ್ಸ್ಪೇಕ್ಟರ್ ಆಗಮಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ಕರೆದುಕೊಂಡು ಹೋಗುತ್ತೇವೆ,ಒಂದು ಗಂಟೆ ತಡೆಯಿರಿ ಎಂದು ಹೇಳಿದರು.ನಾವು ಪೊಲೀರ್ ಅಧಿಕಾರಿಗಳು ಹೇಳಿದಂತೆ ಕೇಳಿ ಒಂದು ಗಂಟೆಯ ನಂತರವೇ ಬಂದರು ಕೊಡೇಕಲ್ ದೇವಸ್ಥಾನದ ಸಮೀಪ ಆಗಮಿಸುತ್ತಿದ್ದಂತೆ ನಮ್ಮ ವಾಹನಗಳ ಮೇಲೆ ಪೊಲೀಸರ ಸಮ್ಮುಖದಲ್ಲಿಯೇ ವಾಹನಗಳ ಮೇಲೆ ಕಲ್ಲು ಹಾಕಿದ್ದಾರೆ.ಇದರಿಂದ ಪೊಲೀಸರ ವೈಫಲ್ಯ ಮೇಲ್ನೋಟಕ್ಕೆ ಗೊತ್ತಾಗುತ್ತದೆ,ಪೊಲೀಸರು ಶಾಸಕರ ಕೈಗೊಂಬೆಯಾಗಿದ್ದರಿಂದಲೇ ಗಲಾಟೆ ನಡೆದಿದೆ ಎಂದರು.

ನಾವು ಯಾವುದೇ ರೀತಿಯ ಗಲಾಟೆಯನ್ನು ಬಯಸುವುದಿಲ್ಲ ಆದರೆ ಬಿಜೆಪಿಯವರು ಹಾಲುಮತ ಸಮುದಾಯದ ರವಿ ಸಾಹುಕಾರ ಮೇಲೆ,ವಾಲ್ಮೀಕಿ ಸಮುದಾಯದ ರಾಮು ನಾಯಕ,ಬಸ್ಸಪ್ಪ ಎನ್ನುವವರ ಮೇಲೆ,ಲಿಂಗಾಯತ ಸಮುದಾಯದ ಮಲ್ಲಣ್ಣ ಸಾಹುಕಾರ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ.ಕ್ಷೇತ್ರದ ಜನರಲ್ಲಿ ಭಯ ಹುಟ್ಟಿಸಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದರು.ಅಲ್ಲದೆ ಇಂತಹ ಘಟನೆ ನಡೆಯಲು ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಬೇರೆಡೆಗೆ ವಾರ್ಗಾವಣೆ ಮಾಡಬೇಕು,ಶಾಂತಿಯುತ ಚುನಾವಣೆ ನಡೆಯಲು ಕ್ರಮ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ವಾಹನಗಳನ್ನು ತೆಗೆದುಕೊಂಡು ನಾರಾಯಣಪುರ ಕಾರ್ಯಾಲಯದಲ್ಲಿ ಸೇರ್ಪಡೆ ಕಾರ್ಯಕ್ರಮಕ್ಕೆ ಹೋಗುವವರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಯಾಕೆ ಪರವಾನಿಗೆ ಪಡೆದಿಲ್ಲ ಎನ್ನುವದಕ್ಕೆ ಸರಿಯಾಗಿ ವಿವರಿಸದ ಮುಖಂಡರು,ನಾರಾಯಣಪುರ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಸೇರ್ಪಡೆ ಕಾರ್ಯಕ್ರಮ ನಡೆಯಿತಾ ಎನ್ನುವುದಕ್ಕೆ ಗಲಾಟೆಯಿಂದಾಗಿ ಸೇರ್ಪಡೆ ನಡೆಯಲಿಲ್ಲ ಎಂದರು.ಅಲ್ಲದೆ ಎಸ್ಪಿಯವರು ನಾರಾಯಣಪುರ ದಿಂದ ಬೇರೆ ಮಾರ್ಗದಲ್ಲಿ ಹೋಗುವಂತೆ ಹೇಳಿದರು ಕಾಂಗ್ರೆಸ್ ಮುಖಂಡರು ಹಠಮಾಡಿ ಕೊಡೇಕಲ್ ಮಾರ್ಗದಲ್ಲಿ ಬಂದಿದ್ದಾರೆ ಎನ್ನುವ ಪ್ರಶ್ನೆಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಯ್ಯ ಕಮತಗಿ,ಮಲ್ಲಣ್ಣ ಐಕೂರ,ಭೀಮರಾಯ ಮೂಲಿಮನಿ,ನಿಂಗಯ್ಯ ಮೂಲಿಮನಿ ಕಕ್ಕೇರಾ,ಕಾಳಪ್ಪ ಕವಾತಿ ಸೇರಿದಂತೆ ಹಾಲುಮತ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here