ಚುನಾವಣಾ ಪ್ರಚಾರದ ಕರಪತ್ರ, ಫ್ಲೆಕ್ಸ್ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯ

0
16

ಕಲಬುರಗಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಲಾಗುವ ಕರಪತ್ರ, ಪ್ಲೇ ಕಾರ್ಡ್, ಹ್ಯಾಂಡ್ ಬಿಲ್, ಬ್ಯಾನರ್, ಬಂಟಿಂಗ್, ಫ್ಲೆಕ್ಸ್, ಪೋಸ್ಟರ್ ಏನೇ ಮುದ್ರಿಸಿದ್ದರು ಅದನ್ನು ಮುದ್ರಕರು 10 ದಿನದೊಳಗೆ 4 ಪ್ರತಿಗಳನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಮತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಮೇಲ್ಕಂಡ ಪ್ರಚಾರ ಸಾಮಗ್ರಿ ಮುದ್ರಣ ನಂತರ ನಿಗಧಿತ ನಮೂನೆ ಭರ್ತಿ ಮಾಡಿ ಅದರೊಂದಿಗೆ ಪ್ರಕಾಶಕರ ಘೋಷಣಾ ಪತ್ರ, ಮುದ್ರಣಕ್ಕೆ ತಗುಲಿದ ವೆಚ್ಚ, ಮುದ್ರಿತ ಸಂಖ್ಯೆಗಳೊಂದಿಗೆ ಪ್ರಚಾರ ಸಾಮಗ್ರಿಗಳನ್ನು ಸಲ್ಲಿಸುವುದು ಮುದ್ರಕರ ಜವಾಬ್ದಾರಿಯಾಗಿರುತ್ತದೆ.

Contact Your\'s Advertisement; 9902492681

ಪ್ರತಿ ಚುನಾವಣಾ ಪ್ರಚಾರದ ಮುದ್ರಣ ಸಾಮಗ್ರಿ ಮೇಲೆ ಮುದ್ರಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು, ಪ್ರತಿಗಳ ಸಂಖ್ಯೆ ಹಾಗೂ ದಿನಾಂಕ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಇದನ್ನು ಉಲ್ಲಂಘಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 127ಎ ಪ್ರಕಾರ 6 ತಿಂಗಳ ಸಜೆ ಮತ್ತು 2,000 ರೂ. ದಂಡ ಅಥವಾ ಎರಡು ವಿಧಿಸಲಾಗುವುದು. ಇದಲ್ಲದೆ ಇತರೆ ಕಾಯ್ದೆಯಲ್ಲಿ ಮುದ್ರಣ ಲೈಸೆನ್ಸ್ ಸಹ ವಾಪಸ್ ಪಡೆಯಲು ಸಹ ಅವಕಾಶವಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಆದೇಶದ ಉಲ್ಲಂಘನೆಯಿಂದ ಯಾರಿಗಾದರೂ ಅಡಚಣೆ, ಹಾನಿ, ಕಿರಿಕಿರಿ ಅಥವಾ ಗಾಯ ಇತ್ಯಾದಿಗಳನ್ನು ಉಂಟುಮಾಡಿದರೆ ಅಥವಾ ಮಾನವನ ಜೀವನ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಗಲಭೆ ಅಥವಾ ಗಲಭೆಗೆ ಬೆದರಿಕೆಯನ್ನು ಉಂಟುಮಾಡುವ ಪ್ರವೃತ್ತಿಗಳನ್ನು ಸೆಕ್ಷನ್ 188 ಐ.ಪಿ.ಸಿ ಅಡಿಯಲ್ಲಿ ಪ್ರತ್ಯೇಕವಾಗಿ ಅಪರಾಧವನ್ನು ಪರಿಗಣಿಸಲಾಗುತ್ತದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here