ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ

0
11

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಡಾ:ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿ ಆಚರಣೆ ಅಂಗವಾಗಿ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಬೌಧ್ಧ ಸಾಹಿತಿ ಬುದ್ಧಘೋಷ್ ದೇವೆಂದ್ರ ಹೆಗ್ಗಡೆ ಮಾತನಾಡಿ,ಬಾಬಾ ಸಾಹೇಬರ್ ಜಯಂತಿ ಅಂಗವಾಗಿ ಈ ರೀತಿಯ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿರುವುದು ತುಂಬಾ ಅರ್ಥಪೂರ್ಣವಾಗಿದೆ,ಈ ರೀತಿಯ ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ ಇಂದು 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸತೀಶ ಜಾರಕಿಹೊಳೆಯವರ ಅಭಿಮಾನಿಗಳು ಮಾದರಿ ಕಾರ್ಯವನ್ನು ಮಾಡಿದ್ದಾರೆ,ಈ ಮುಂದಿನಿಂದ ಪ್ರತಿ ವರ್ಷದ ಬೌಧ್ಧ ಪೌರ್ಣಿಮೆಗೆ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಇಂತಹ ಕಾರ್ಯಗಳು ಹೆಚ್ಚೆಚ್ಚು ನಡೆಯುವುದರಿಂದ ಜನರಿಗೆ ಅನುಕೂಲವಾಗುವುದರ ಜೊತೆಗೆ ನಮ್ಮ ಧರ್ಮದ ಕುರಿತು ಜನರಲ್ಲಿ ಜಾಗೃತಿಯೂ ಮೂಡಲಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಭಿಕ್ಕು ಸಂಘದ ಬಂತೇಜಿಯವರು ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮೇಣದ ಬತ್ತಿಯನ್ನು ಬೆಳಗಿ ಪಂಚಶೀಲ ತ್ರಿಸರಣ ಪಠಣದ ನಂತರ ಬೌದ್ಧ ಧರ್ಮದ ವಿಧಿ ವಿಧಾನಗಳಂತೆ ಹಾರ ವಿನಿಮಯಿಸುವ ಮೂಲಕ ಸರಳವಾಗಿ ವಿವಾಹ ಕಾರ್ಯವನ್ನು ನೆರವೇರಿಸಲಾಯಿತು.ಜೊತೆಗೆ ಕಾರ್ಯಕ್ರಮಕ್ಕೆ ನಿರಂತರವಾಗಿ ಶ್ರಮಿಸಿದ ಸತೀಶ ಜಾರಕಿಹೊಳೆ ಅಭಿಮಾನಿಗಳ ಸಂಘದ ಮುಖಂಡರಾದ ಸಾಹೇಬಗೌಡ ವಾಗಣಗೇರ,ಮಲ್ಲಿಕಾರ್ಜುನ ಕಟ್ಟಿಮನಿ ವಾಗಣಗೇರ ಸೇರಿದಂತೆ ಎಲ್ಲ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ದುರ್ಗಪ್ಪ ಗೋಗಿಕೇರ,ಶರಣಪ್ಪ ಗುಳಬಾಳ,ವೆಂಕಟೇಶ ಹೊಸ್ಮನಿ,ಸಾಹೇಬಗೌಡ ವಾಗಣಗೇರ,ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂದಗೇರಿ,ಆದಪ್ಪ ಹೊಸ್ಮನಿ,ರಾಹುಲ ಹುಲಿಮನಿ,ಹಣಮಂತ ಕಟ್ಟಿಮನಿ,ನಿಂಗಣ್ಣ ಗೋನಾಲ,ಗೋಪಾಲ ತಳವಾರ,ಅಪ್ಪಣ್ಣ ಗಾಯಕವಾಡ,ಮಹಾದೇವಪ್ಪ ಬೊಮ್ಮನಹಳ್ಳಿ,ಶಿವಲಿಂಗ ಹಸನಾಪುರ,ವೀರಭದ್ರ ತಳವಾರಗೇರ,ರಾಜು ಕಟ್ಟಿಮನಿ,ಧರ್ಮರಾಜ ಬಡಿಗೇರ,ರವಿ ನಾಯಕ,ಮಲ್ಲಿಕಾರ್ಜುನ ತಳ್ಳಳ್ಳಿ,ಶರಣಪ್ಪ ವಾಗಣಗೇರ,ಹಣಮಂತ ಹೊಸ್ಮನಿ,ಮಾಳಪ್ಪ ಕಿರದಳ್ಳಿ,ರಮೇಶ ಅರಕೇರಿ,ಶಿವಶಂಕರ ಹೊಸ್ಮನಿ,ರಾಜು ದೊಡ್ಮನಿ,ಮರೆಪ್ಪ ಕಟ್ಟಿಮನಿ ವಾಗಣಗೇರ,ಮಾನಪ್ಪ ಕಟ್ಟಿಮನಿ,ಶರಣು ಹಸನಾಪುರ,ವಿರೇಶ ಗುಳಬಾಳ,ತಿಪ್ಪಣ್ಣ ಶೆಳ್ಳಗಿ,ಹುಲಗಪ್ಪ ದೇವತ್ಕಲ್,ಶರಣಪ್ಪ ಪರಸನಹಳ್ಳಿ,ಪರಶುರಾಮ ಗೋವಾ,ಮಂಜುನಾಥ ಹೊಸ್ಮನಿ,ಶಿವಶರಣ ಯಾಳಗಿ,ಖಾಜಾ ಅಜ್ಮೀರ್,ಎಮ್.ಪಟೇಲ್,ಆಕಾಶ ಕಟ್ಟಿಮನಿ,ಗೋಪಾಲ ಬಡಿಗೇರ,ಹಣಮಂತ ಭದ್ರಾವತಿ,ಮಲ್ಲಪ್ಪ ದೊಡ್ಮನಿ ತಳವಾರಗೇರ,ಶೇಖರ ಮಂಗಳೂರ,ಮಾನಪ್ಪ ಭಂಡಾರಿ ಸೇರಿದಂತೆ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್‍ನ ಮಹಿಳಾ ಸದಸ್ಯರು ಹಾಗೂ ಸಾವಿರಾರು ಜನ ಉಪಾಸರ ಉಪಾಸಿಕಾರವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here