ಸಮಸ್ತ ಲಿಂಗಾಯತರ ಪ್ರಗತಿಗೆ ಲಿಂಗಾಯತ ಸ್ವತಂತ್ರ ಧರ್ಮ ಅಗತ್ಯ: ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು

0
49

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ ಮೇಲೆ ಒತ್ತಡ ತರುವ ಕೆಲಸವಾಗಬೇಕೆಂದು ಹಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನದ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಶಿವಾನಂದ ಮಹಾಸ್ವಾಮಿಗಳು ಒತ್ತಾಯಿಸಿದರು.

ಅವರು ರವಿವಾರ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದ ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಿದ್ದಾಗ ಮಾತ್ರ ಲಿಂಗಾಯತ ಧರ್ಮಕ್ಕೆ ಸ್ವತಂತ್ರವಾಗಿ ಬೆಳೆಯಲು ಸಾಧ್ಯ ಇದರಿಂದ ಲಿಂಗಾಯತರು ಸಮಗ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಅವರು ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತ ನಾಯಕ ಎಂದು ಘೋಷಣೆಗೆ ವಹಿಸಿರುವ ಶ್ರಮವನ್ನು ಸ್ವತಂತ್ರ ಧರ್ಮ ಘೋಷಣೆಗೂ ನೀಡಬೇಕೆಂದು ಕೇಳಿಕೊಂಡರು.

ಲಿಂಗಾಯತರು ವಚನಗಳು ಓದಬೇಕು, ಇಷ್ಟಲಿಂಗ ಪೂಜೆ, ರುದ್ರಾಕ್ಷಿ ಹಾಕಿಕೊಂಡು ಏಕದೇವ ಉಪಾಸನೆಯನ್ನು ಪಾಲಿಸಬೇಕೆಂದು ಕಿವಿ ಮಾತು ಹೇಳಿದರು. ಶರಣರ ವಚನಗಳು ಒಂದು ಜಾತಿ ಧರ್ಮಕ್ಕೆ ಸಿಮಿತವಲ್ಲ. ಸಕಲ ಜೀವಿಗಳಿಗೆ ಒಳೆತನ್ನು ಬಳಸುವುದನ್ನು ಕಲಿಸುವುದೆ ವಚನಗಳಾಗಿವೆ. ಪ್ರತಿ ದಿನನಿತ್ಯದ ಜೀವನದಲ್ಲಿ ವಚನಗಳ ಅರ್ಥವನ್ನು ಅಳವಡಿಸಿಕೊಂಡು ಬದುಕುನ್ನು ಶರಣರು ಹಾಕಿರುವ ದಾರಿಯ ಮೇಲೆ ಸಾಗಬೇಕೆಂದು ಭಾಲ್ಕಿ ಸಂಸ್ಥಾನ ಮಠದ ಪೂಜ್ಯ ಶ್ರೀ. ಮ.ಘ.ಚ ಡಾ. ಬಸವಲಿಂಗ ಪಟ್ಟದ್ದೆವರು ತಿಳಿ ಹೇಳಿದರು.

ಮಹಿಳೆಯರನ್ನು ಜೀವಂತ ದಹಿಸುವ ಅನಿಷ್ಟ ಪದ್ದತಿಯನ್ನು ವಿರೋಧಿಸಿ ಮಹಿಳೆಯರನ್ನು ಸಮಾನತೆ ಬದುಕಿನೊಂದಿಗೆ ವೈಚಾರಿಕ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಿಂಚೋಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ರಾಠೋಡ್, ಬಸವ ಸಮಿತಿಯ ಅಧ್ಯಕ್ಷ ಬಸವರಾಜ್ ಚೋಕಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ, ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಗೌರಿಶಂಕರ್ ಕಿಣ್ಣಿ, ಭೀಮರಾವ ತೇಗಲತಿಪ್ಪಿ, ಶರಣು ಮೊತಕ್ಪಳ್ಳಿ, ಮಹೇಮೂದ್ ಸಾಸರಗಾಂವ, ರಾಜೇಶ್ ಗುತ್ತೇದಾರ್, ದೀಪಕನಾಗ ಪುಣಶೆಟ್ಟಿ, ಗೋಪಾಲರಾವ ಕಟ್ಟಿಮನಿ, ರೈತ ಮುಖಂಡ ಶರಣಬಸಪ್ಪ ಮಮಶೇಟ್ಟಿ, ವಿರಶೈವ ಸಮಾಜದ ಅಧ್ಯಕ್ಷರಾದ ರೇವಣಸಿದ್ದಪ್ಪ ಬಡಾ, ಶಿವಾರಜ್ ಚೋಕಾ, ಶ್ರಿವರಾಜಪ್ಪ ಭೀಮಳ್ಳಿ , ಶರಣಸಬಪ್ಪಾ ಸಿಗಿ, ನಾಗಯ್ಯ ಬುಕಟಗಿ, ಚಂದ್ರಕಾಂತ ಸಿಗಿ, ಸಂತೋಷ ಹಂದ್ರೊಳಿ, ವಿನೊದ್ ಸಿಗಿ, ನಗರಾಜ ಏರಿ, ರಾಚಯ್ಯ ಕಿಣ್ಣಿ, ಸಜುಕುಮಾರ್ ಪಡಶೆಟ್ಟಿ, ಚಂದ್ರಕಾಂತ ರಾಮಾ, ರಾಜಪ್ಪ ಬುಕುಟಗಿ, ಮುರಗೇಶ ಗೊಣಗಿ, ರೇವಣಸಿದ್ದ ಅರಣಕಲ್, ಹಣಮಂತ ವಳಕಿಂಡಿ, ಕಲ್ಯಾಣಿ ತೇಳಕೇರಿ, ಮಲ್ಲು ಮರಗುತ್ತಿ, ಅಜೀತ್ ಭೈರಾಮಡಗಿ, ರಾಜಪ್ಪ ಸೊಂತ, ವೀರಣ್ಣ ಗಂಗಾಣಿ, ಪ್ರಕಾಶ್ ಬಡಿಗೇರ್, ನಾಗಣ್ಣ ಮಾಮನಿ, ನಾಗಣ್ಣ ತಾರಾಚಂದ್ ರಾಠೋಡ್, ಪ್ರಕಾಶ್ ಮಹೆಂದ್ರಕರ್, ಹುಚ್ಚೇಶ್ವರ ಧುತ್ತರಗಿ, ಜಗನ್ನಾಥ್ ಮಳ್ಳಪ, ರವಿ ಕಿಣ್ಣಿ, ಗುಂಡಪ್ಪ ಅರಣಕಲ್, ಬಸವರಾಜ್ ಮೊಳಕೇರಿ, ರೇವಣಸಿದ್ದ ಬಿರಾದಾರ್, ಅನೀಲಕುಮಾರ್ ಹುಳಿಗೇರಿ, ರಾಜಪ್ಪ ಕಿಣ್ಣಿ, ವಿಜ್ಜು ಸರಡಗಿ, ಸುನೀಲ್ ಭೈರಾಮಡಗಿ, ಭಾಗೇಶ್, ಶರಣು ಹಣಕುಣಿ, ಶರಣು ಎಮ್.ಸಿಗಿ, ಶರಣಬಸಪ್ಪಾ ಭೈರಪ್ಪ, ಮಲ್ಲಿನಾಥ್ ಮುಚ್ಚಟಿ, ವಿರಸಂಗಪ್ಪ ಪೊಲೀಸ್ ಪಾಟೀಲ್, ಸಂಗಮೇಶ್ ಏರಿ,ಶಾಂತಪ್ಪ ಮುಚಟ್ಟಿ, ಚನ್ನು ಶಿಲವಂತ, ನಿಲಕಂಠ ಕೊಡದೂರ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here