ಸುರಪುರ : ವಕೀಲರ ಸಂಘ ಅಂಬೇಡ್ಕರ ಜಯಂತಿ ಆಚರಣೆ

0
12

ಸುರಪುರ: ನಗರದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷ ಎನ್.ಜೆ.ಬಾಕ್ಲಿ ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿ ಅಂಬೇಡ್ಕರ್ ಅವರು ಸಾಮಾಜಿಕ ಅಸಮಾನತೆ, ಅಸ್ಪ್ರಷ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದಾರೆ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ರಚಿಸಿ ಕೊಟ್ಟು ದಲಿತ, ಹಿಂದುಳಿದ ಹಾಗೂ ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರು ಪ್ರತಿಯೊಬ್ಬರಿಗೂ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಕ್ಕನ್ನು ನೀಡಿದ್ದಾರೆ ಹಾಗೂ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದ್ದಾರೆ ಅಂಬೇಡ್ಕರ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಹಿರಿಯ ನ್ಯಾಯವಾದಿಗಳಾದ ದೇವಿಂದ್ರಪ್ಪ ಬೇವಿನಕಟ್ಟಿ, ಮಹ್ಮದ ಹುಸೇನ, ಅಪರ ಸರಕಾರಿ ವಕೀಲ ಎನ್.ಎಸ್.ಪಾಟೀಲ ಮಾತನಾಡಿದರು. ವಕೀಲರಾದ ರಮಾನಂದ ಕವಲಿ, ಜಿ.ಆರ್.ಬನ್ನಾಳ, ವೆಂಕಟೇಶ ನಾಯಕ, ಮಾನಪ್ಪ ಕವಡಿಮಟ್ಟಿ, ಸುರೇಂದ್ರ ದೊಡ್ಡಮನಿ, ಸಂತೋಷ ಗಾಯಕವಾಡ, ಎ.ಎನ್.ಗಾಯಕವಾಡ, ಭೀಮಣ್ಣ ಹೊಸ್ಮನಿ, ನಾಗರಾಜ ಚವಲ್ಕರ್, ಮಲ್ಲಣ್ಣ ಬೋವಿ, ಮಲ್ಲಿಕಾರ್ಜುನ ತಳ್ಳಳ್ಳಿ, ಇತರರಿದ್ದರು. ಗೋಪಾಲ ತಳವಾರ ಸ್ವಾಗತಿಸಿದರು ಆದಪ್ಪ ಹೊಸ್ಮನಿ ನಿರೂಪಿಸಿದರು ಹಾಗೂ ಸಂಘದ ಕಾರ್ಯದರ್ಶಿ ಮಂಜುನಾಥ ಹುದ್ದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here