ಕಸಾಪದಿಂದ ಬಸವ ಉತ್ಸವ 21 ರಂದು

0
221

ಕಲಬುರಗಿ: ಪ್ರಸ್ತುತ ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಪರಿಹಾರವಿದೆ. ಈ ಕಾರಣದಿಂದ ಸರ್ವ ಸಮಾನತೆಯ ತತ್ವಗಳನ್ನು ಒಳಗೊಂಡಿರುವ ಬಸವ ತತ್ವಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು `ಬಸವ ಉತ್ಸವ-2023′ ವಚನ ಸಾಂಸ್ಕøತಿಕ ಸಂಭ್ರಮವನ್ನು ಏಪ್ರೀಲ್ 21 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ರವಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ತೇಗಲತಿಪ್ಪಿ, 12ನೇ ಶತಮಾನದ ಬಸವಾದಿ ಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿದರು. ಜಾತಿ ವರ್ಣಗಳ ಕಟ್ಟಳೆಗಳ ಮೂಲಕ ಹಾಕಿದ್ದ ನಿಗೂಢ ದಿಗ್ಭಂಧನವನ್ನು ವಚನಗಳ ಮೂಲಕ ಕಿತ್ತೆಸಿದರು. ಇಡೀ ಮಾನವ ಕುಲ ಒಂದಾಗಿ ಸಕಲ ಜೀವಾತ್ಮರಿಗೂ ಲೇಸೆಸುವ ಹಾಗೆ ಬದುಕಿಗೆ ಮುನ್ನುಡಿ ಹಾಕಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಹಾಗಾಗಿ, ವಚನಗಳಲ್ಲಿನ ತಿರುಳನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ.

Contact Your\'s Advertisement; 9902492681

ಸ್ತ್ರೀ ಗೌರವಕ್ಕೊಂದು ಗರಿ ಮೂಡಿಸುವ ನಿಟ್ಟಿನಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬುವ ಇನ್ನೊಂದು ಪಕ್ಕಾ ವೈಚಾರಿಕ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ ಮತ್ತು ಬಸವ ಉತ್ಸವದಂಗವಾಗಿ ಮಕ್ಕಳು-ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಕನ್ನಡ ಭವನದಲ್ಲಿ ಏ.20 ರಂದು ಬೆಳಗ್ಗೆ 10.45  ಕ್ಕೆ  ಏರ್ಪಡಿಸಲಾಗಿದೆ.

ಕಳೆದ ಐದಾರು ದಶಕಗಳಿಂದ ಶರಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಳಂದ ತಾಲೂಕಿನ ಜಾವಳಿ ಗ್ರಾಮದವರಾದ ಶರಣಬಸಪ್ಪ ಬಿ ಪಾಟೀಲ ಜಾವಳಿ ಅವರನ್ನು `ಬಸವಜ್ಯೋತಿ’ ವಿಶೇಷ ಗೌರವ ಪುರಸ್ಕಾರವನ್ನು ನೀಡಲಾಗುವುದು.

ಅಂದು ಬೆಳಗ್ಗೆ 10.45 ಕ್ಕೆ ಜರುಗುವ ಉತ್ಸವಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಚಾಲನೆ ನೀಡಲಿದ್ದು, ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ಕುರಿತು ಚಿಂತಕ ಬಸಣ್ಣಾ ಸಿಂಗೆ, ವಚನ ವೈಚಾರಿಕ ದರ್ಶನ ಕುರಿತು ಜಯಶ್ರೀ ಚಟ್ನಳ್ಳಿ ವಿಚಾರ ಮಂಡನೆ ಮಾಡಲಿದ್ದಾರೆ. ಕಸಾಪ ದ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ. ಬಾಬುರಾವ ಶೇರಿಕಾರ, ಸಂತೋಷ ಪಾಟೀಲ, ಪೂರ್ಣಿಮಾ ಜಾನೆ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.

ನಂತರ ನಡೆಯುವ ಪೊರೆ ಕಳಚುವ ಪರಿ ಎಂಬ ವಿಶೇಷ ಕವಿಗೋಷ್ಠಿಗೆ ಹಿರಿಯ ಲೇಖಕ ಬಸವ ಪಾಟೀಲ ಜಾವಳಿ ಚಾಲನೆ ನೀಡಲಿದ್ದು, ಪ್ರಾಧ್ಯಾಪಕ ಪ್ರೊ ವೆಂಕಣ್ಣ ಡೊಣ್ಣೇಗೌಡರ್ ಅಧ್ಯಕ್ಷತೆ ವಹಿಸಲಿದ್ದಾರೆ. ದೇವೇಂದ್ರಪ್ಪ ಕಪನೂರ, ರವಿಕುಮಾರ ಸರಸಂಬಿ, ಮಲ್ಲಿನಾಥ ಪಾಟೀಲ ಕಾಳಗಿ,  ಗಂಗಾಧರ ಮುನ್ನೋಳ್ಳಿ ವೇದಿಕೆ ಮೇಲಿರುವರು.

ಶ್ರೀಮಂತ ಚಿಂಚನಸೂರ, ಶಿವಾನಂದ ಅಣಜಗಿ, ಶ್ರೀಮಂತ ಅಟ್ಟೂರ, ಡಾ. ಕೆ.ಗಿರಿಮಲ್ಲ, ಡಾ. ರಾಜಶೇಖರ ಮಾಂಗ್, ವಿಶಾಲಾಕ್ಷಿ ಮಾಯಣವರ್, ಎಂ.ಎನ್.ಸುಗಂಧಿ, ರೇಣುಕಾ ಹಿರೇಗೌಡರ್, ಸುವರ್ಣಾ ಪೊದ್ದಾರ, ರವೀಂದ್ರ ಬಿ.ಕೆ., ಕಸ್ತೂರಿಬಾಯಿ ರಾಜೇಶ್ವರ, ಶಾಂತಾ ಮಾಲೆ, ಶಕುಂತಲಾ ಪಾಟೀಲ, ಡಾ. ಗೀತಾ ಪಾಟೀಲ ಸೇರಿ ಅನೇಕ ಕವಿಗಳು ವೈಚಾರಿಕ ಜಾಗೃತಿಯ ಕವನಗಳನ್ನು ವಾಚಿಸಲಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೂರ್ಯಕಾಂತ ಡುಮ್ಮಾ, ಶಾರದಾ ಬುಕ್ಕೇಗಾರ, ಡಾ. ಸುಜಾತಾ ಎಸ್. ಮಾಳಗಿ, ಬಸವರಾಜ ಜಮಾದಾರ, ಸೋಮಣ್ಣ ಕೊಳಾರ, ಸಂಗೀತಾ ಕಿಣಗಿ, ಸೈಯದ್ ಗೆಸುದರಾಜ್ ಖಾದ್ರಿ, ಬಸವರಜ ಭಾವಿ, ಬಸವರಜ ಕುಮಸಿ (ಪಾಸ್ವಾನ್) ವಿಶ್ವನಾಥ ಮಂಗಲಗಿ, ಮಹಾದೇವಿ ಕೆಸರಟಗಿ, ಬಾಬುರಾವ ಜನಕಟ್ಟಿ ಡೊಂಗರಗಾಂವ ಅವರನ್ನು ಸತ್ಕರಿಸಲಾಗುವುದು.

ಕಲಾವಿದರಾದ ಕಲ್ಯಾಣಪ್ಪ ಬಿರಾದಾರ, ಬಾಬುರಾವ ಪಾಟೀಲ, ಸಿದ್ಧರಾಮ ಹಂಚನಾಳ ಅವರಿಂದ ವಚನ ವೈಭವ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್. ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪದಾಧಿಕಾರಿಗಳಾದ ಕಲ್ಯಾಣಕುಮಾರ ಶೀಲವಂತ, ಶಿಲ್ಪಾ ಜೋಶಿ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here