ಮಣ್ಣೂರ ಆಸ್ಪತ್ರೆಯಿಂದ ಶಾಂತಿ- ಸಹಬಾಳ್ವೆಯ ಇಫ್ತಾರ್ ಕೂಟ

0
22

ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ಜಾತಿ ಜನಾಂಗದ ಪ್ರಮುಖರನ್ನು ಒಂದೆಡೆ ಸೇರಿಸಿ ಕೋಮು ಸೌಹರ್ದತೆ ಪ್ರತೀಕವಾಗಿ ಇಫ್ತಾರ್‍ಕೂಟ ಆಯೋಜಿಸುವ ಮೂಲಕ ಶಾಂತಿ-ಸೌಹಾರ್ದತೆ ಸಾರಲಾಯಿತು. -ಡಾ. ಫಾರುಕ್ ಮಣ್ಣೂರ, ನಿರ್ದೆಶಕರು ಮಣ್ಣೂರ ಆಸ್ಪತ್ರೆ ಕಲಬುರಗಿ.

ಕಲಬುರಗಿ: ಕಲಬುರಗಿಯ ಪ್ರತಿಷ್ಠಿತ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕ ಡಾ. ಫಾರುಕ್ ಅಹ್ಮದ ಮಣ್ಣೂರ ಆಯೋಜಿಸಿದ್ದ ರಂಜಾನ ಪ್ರಯುಕ್ತ ಇಫ್ತಾರ್‍ಕೂಟ ಜರುಗಿತು.

Contact Your\'s Advertisement; 9902492681

ಹಿಂದೂ ಮುಸ್ಲಿಂ ಎನ್ನದೆಎಲ್ಲಾಜಾತಿಜನಾಂಗದ ಪ್ರಮುಖರನ್ನು ಒಂದೇಡೆ ಸೇರಿಸಿ ಕೋಮು ಸೌಹರ್ದತೆ ಪ್ರತೀಕವಾಗಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಶಾಂತಿ ಸಹಬಾಳ್ವೆ ಸಾಮರಸ್ಯ ಸಂದೇಶ ಸಾರಲಾಯಿತು.

ಸೈಯದ ಆಕಿಬಲ್ ಹುಸೇನಿ ಸಾಹೇಬ್ ಮಾತನಾಡಿ ಮನ್ನೂರ ಆಸ್ಪತ್ರೆ ಕಳೆದ 2 ವರ್ಷಗಳಿಂದ ನಿರಂತರ ಸಮಾಜಿಕ ಕೇಲಸ ಮಾಡಿಕೊಂಡು ಬರುತ್ತಿದ್ದು ಕಳೆದ ವರ್ಷ ಬೆಸಿಗೆ ಕಾಲದಲ್ಲಿ ಕಲಬುರಗಿ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅರವಟಿಗೆ ಮೂಲಕ ಪೂರೈಸಿದ್ದರು, ಕಲಬರಗಿ, ಬೀದರ, ಯಾದಗಿರಿ ಜಿಲ್ಲಾದ್ಯಂತ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿ ಉಚಿತ ಔಷದಿ ವಿತರಣೆ ಮಾಡಿದ್ದರು, ಕಲಬುರಗಿ ಜಿಲ್ಲೆಯ 500 ಕ್ಷಯ ರೋಗಿಗಳಿಗೆ ದತ್ತು ಪಡೆದು ರಾಜ್ಯದ ರಾಜ್ಯಪಾಲರಿಂದ ಪ್ರಶಸ್ತಿ ಪಡೆದಿದ್ದಾರೆ, ರಸ್ತೆ ಬದಿಯ ವ್ಯಾಪಾರಿಗಳಿಗೆ ಛತ್ರಿ ವಿತರಣೆ , ಟ್ಯಾಫಿಕ್ ಪೋಲಿಸರಿಗೆ ಹೆಲ್ಮೆಟ್ ವಿತರಣೆ ಸೇರಿದಂತೆ ಅನೇಕ ಜನಪರಸಮಾಜಿಕPಕಾರ್ಯಮಾಡಿಕೊಂಡು ಬರುತ್ತಿದ್ದು ಮಣ್ಣೂg Àಆಸ್ಪತ್ರೆಯ ಕಾರ್ಯ ಶಾಘ್ಲನಿಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕಿ ಖನಿಜ್ ಫಾತಿಮಾ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕಡಾ. ಫಾರುಕ್‍ಅಹ್ಮದ ಮಣ್ಣೂರ, ಬಾಬುಮಿಯ್ಯಾ ಮಣ್ಣೂರ, ಸಜ್ಜದ ಅಲಿ ಇನಾಂದಾರ, ಅಲಿಂ ಇನಾಂದಾರ, ರವಿ ದೇಗಾಂವ, ದತ್ತು ಭಾಸಗಿ, ಸಚಿನ ಫರತಾಬಾದ, ಸತೀಶ ಚವ್ಹಾಣ, ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here