ಭಾರತದ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳ ಪ್ರಮುಖ ಪಾತ್ರ

0
45

ಕಲಬುರಗಿ: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಹಳಷ್ಟಿದ್ದು, ಸದ್ಯ ಭಾರತದ ಆರ್ಥಿಕ ಪರಿಸ್ಥಿತಿಯೇ ಬದಲಾಗಿದೆ. ಇಂದು ಖಾಸಗಿ ಹಣಕಾಸು ಸಂಸ್ಥೆಗಳು ಉದ್ಯೋಗ ಒದಗಿಸುತ್ತಿವೆ ಎಂದು ವಾಣಿಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ವಿ.ಎಂ. ಹಿರೇಮಠ ಹೇಳಿದರು.

ನಗರದ ಎಂ.ಎನ್. ದೇಸಾಯಿ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಐಸಿಸಿ ಬ್ಯಾಂಕ್‍ನ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಬ್ಯಾಂಕ್‍ಗಳಿಂದ ಆಧುನಿಕÀ ಬೃಹತ್ ಉತ್ಪಾದನಾ ವಿಧಾನಗಳು ಅನುಷ್ಠಾನಕ್ಕೆ ಬರುತ್ತಿದ್ದು, ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಯಶÀಸ್ಸಿಗೆ ಆ ದೇಶಗಳಲ್ಲಿರುವ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಕಾರಣವಾಗಿದೆ. ಮುಂದುವರಿದಿರುವ ರಾಷ್ಟ್ರಗಳ ಸಾಲಿಗೆ ಸೇರಬೇಕೆಂದು ಹವಣಿಸುತ್ತಿರುವ ಪ್ರತಿಯೊಂದು ದೇಶವೂ ಸುವ್ಯವಸ್ಥಿತ ಬ್ಯಾಂಕಿಂಗ್ ವ್ಯವಸ್ಥೆ ಹೊಂದುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಐಸಿಸಿಐಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಶ್ರೀನಿಧಿಯವರು ಬ್ಯಾಂಕ್£ಲ್ಲಿರುವ ಉದ್ಯೋಗಾವಕಾಶಗಳ ಸದುಪಯೋಗಕ್ಕೆ ಕರೆ ನೀಡಿದರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಸಂದೀಪ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯದರ್ಶೀ ಜಗನ್ನಾಥ ನಾಗೂರ ಅತಿಥಿಯಾಗಿ ಭಾಗವಹಿಸಿದ್ದರು.

ವಿರೇಶ ಎಂ. ತೆಗ್ಗೆಳ್ಳಿ ನಿರೂಪಿಸಿದರು. ನಾಗರಾಜ ಪಟ್ಟಣಕರ ಸ್ವಾಗತಿಸಿದರು. ಡಿ.ಪಿ. ಸಜ್ಜನ್ ವಂದಿಸಿದರು. ಪ್ರಿಯಾಂಕ ಕರಣಿಕ, ಅನಸೂಯಾರೆಡ್ಡಿ, ಶಿವಶರಣಪ್ಪ ಪೂಜಾರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here