ಸಂವಿಧಾನ, ಅಭಿವೃದ್ಧಿ ವಿರೋಧಿಗಳಿಗೆ ಸೋಲಿಸಿ ನನಗೊಂದು ಅವಕಾಶ ಕೊಡಿ; ಅಲ್ಲಂಪ್ರಭು ಪಾಟೀಲ್

0
27

ಕಲಬುರಗಿ;  ಶಾಸಕರಾಗಿ ಸಂವಿಧಾನ ರೀತ್ಯಾ ಪ್ರಮಾಣ ಮಾಡಿ ಮೋಸ- ವಂಚನೆ ಮಾಡೋದಿಲ್ಲವೆಂದವರು ಮೋಸದಿಂದ ನಗರದಲ್ಲಿ ನಿವೇಶನ ಪಡೆದು ಸರ್ಕಾರದ ಖಜಾನೆಗೆ ಬಹುಕೋಟಿ ರುಪಾಯಿ ವಂಚಿಸಿದ್ದಾರೆ, ಅಭಿವೃದ್ಧಿ ಅನುದಾನ ಬಂದರೂ ವೆಚ್ಚ ಮಾಡಲಾಗದೆ ಕಾಲಹರಣ ಮಾಡುವ ಮೂಲಕ ಈ ಭಾಗದ ಹಿಂದುಳಿದಿರುವಿಕೆ ಹೋಗಲಾಡಿಸಲು ಮುಂದಾಗದೆ ಅಸಮರ್ಥತೆ ಪ್ರದರ್ಶನ ಮಾಡಿರುವವರಿಗೆ ಮತ ಹಾಕದೆ ಪ್ರಗತಿಗೆ ಮಿಡಿಯುವ ಸಾಮಾನ್ಯ ಜನರ ಧ್ವನಿಯಾಗುವ ಬಯಕೆಯ ತಮಗೆ ಮತ ಹಾಕಿ ಗೆಲ್ಲಿಸಿ ಸೇವೆಗೆ ಈ ಬಾರಿ ಅವಕಾಶ ನೀಡುವಂತೆ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ಮನವಿ ಮಾಡಿದ್ದಾರೆ.

ಇಲ್ಲಿನ ಜಿಲ್ಲಾ ವಕೀಲರ ಸಂಘದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಿಯಮಗಳನ್ನು ಉಲ್ಲಂಘಿಸಿ ಬೆಲೆಬಾಳುವ ನಿವೇಶನ ನುಂಗಿದ್ದಾರೆಂದು ಶಾಸಕ ದತ್ತಾತ್ರೇಯ ಪಾಟೀಲರ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ ಕೆಕೆಆರ್‍ಡಿಬಿ ಅಧ್ಯಕ್ಷರಾಗಿದ್ದರೂ ಬಂದಿರುವ ಅನದಾನದಲ್ಲಿ ಶೇ. 27 ರಷ್ಟು ವೆಚ್ಚ ಮಾಡಲಾಗದೆ ಎಡವಿದ್ದಾರೆಂದು ದೂರಿದರು.

Contact Your\'s Advertisement; 9902492681

ಸಂವಿಧಾನ ರೀತ್ಯಾ ಪ್ರಮಾಣ ಮಾಡಿದರೂ ಕೂಡಾ ಅದನ್ನೆಲ್ಲ ಬದಿಗೊತ್ತಿ ಮೋಸ ಮಾಡುವ, ಅನುದಾನ ಇದ್ದರೂ ಬಳಸಲಾಗದೆ ಪ್ರಗತಿ ವಿರೋಧಿಯಾಗಿರುವ ಜನನಾಯಕರು ಬೇಕೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಶೇ. 40 ಕಮಷನ್ ದಂಧೆ ಸಾಗಿದರೆ  ಕೆಕೆಆರ್‍ಡಿಬಿಯಲ್ಲಿ ಶೇ. 55 ರಷ್ಟು ಕಮೀಷನ್ ದಂಧೆ ಇತ್ತು ಎಂದು ಗುತ್ತಿಗೆದಾರರ ಸಂಘದವರೇ ಕಲಬುರಗಿಗೆ ಬಂದು ಹೋರಾಟ ಮಾಡಿ ಜನಮನ ಸೆಲೆದಿದ್ದಾರೆ. ಸಾವಿರಾರು ಕೋಟಿ ರುಪಾಯಿ ಅನುದಾನ ಬಂದರೂ ಸರಿಯಗಿ ವೆಚ್ಚವಾಗದೆ, ಕೀಷನ್‍ನನಲ್ಲೇ ಕಳೆದು ಹೋಗಿದೆ. ಅನುದಾನ ಅಭಿವೃದ್ಧಿಗೆ ಬಳಸುವ ಅವಕಾಶವಿದ್ದರೂ ಅದನ್ನು ಮಾಡಲಾಗದೆ ಅಸಮರ್ಥತೆ ಪ್ರದರ್ಶಿಸಿದ್ದಾರೆಂದು ಶಾಸಕ ದತ್ತಾತ್ರೇಯ ರೇವೂರ್ ವಿರುದ್ಧ ಅಲ್ಲಂಪ್ರಭು ವಾಗ್ದಾಳಿ ಮಾಡಿದರು.

ತಾವು ಕಳೆದ 4 ದಶಕದಿಂದ ರಾಜಕೀಯದಲ್ಲಿದ್ದರೂ ಒಂದೂ ಕಪ್ಪು ಚುಕ್ಕೆ ಇಲ್ಲದವರು, ಅವಕಾಶ ಸಿಕ್ಕಾಗ ಜನಸೇವೆ ಪ್ರಾಮಾಣಿಕವಾಗಿ ಮಾಡಿದವ ಎಂದು ಹೇಳಿದರಲ್ಲದೆ ಜನತೆ ಮತ್ತೊಮ್ಮೆ ಅವಕಾಶ ನೀಡಿದಲ್ಲಿ ನಿಮ್ಮೆಲ್ಲರ ಮನೆ ಬಾಗಿಲಿಗೇ ಬಂದು ಸೇವೆ ಮಾಡುವೆ ಎಂದರು.

ನೆರೆ ಬಂದಾಗ, ಮಳೆ ಬಂದಾಗ, ರೈತರ ಹೊಲಗದ್ದೆಯಲ್ಲಿನ ಬೆಳೆ ಹಾಳಾದಾಗ, ತೊಗರಿಗೆ ನೆಟೆ ರೋಗ ಬಂದಾಗ ತಾವು ರೈತರ ಪರವಾಗಿ ಬೀದಿಗಿಳಿದು ಆಳುವವರ ಗಮನ ಸೆಳೆದಿದ್ದಾಗಿ ಹೇಳಿದ ಅಲ್ಲಂಪ್ರಭು ಪಾಟೀಲ್ ವಕೀಲರು ನ್ಯಾಯಕ್ಕಾಗಿ ಹೋರಾಟ ಮಾಡುವವರು ನೀವೆಲ್ಲರೂ ಸಮಾಜದಲ್ಲಿ ಮುಂದಾಗಿ ಕಾಂಗ್ರೆಸ್ ಪರ ಅಲೆ ಮೂಡುವಂತೆ ಮಾಡಬೇಕು. ಆ ಮೂಲಕ ಪ3ಆಮಾಣಿಕರಿಗೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.

ಕಪಿಸಿಸಿ ಪ್ರ. ಕಾರ್ಯದರ್ಶಿ ಶರಣಕುಮಾರ್ ಮೋದಿ, ಕಾಂಗ್ರೆಸ್ ಮುಖಂಡ ಸಂತೋಷ ಪಾಟೀಲ್ ದುಧನಿ, ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಶಾಂತ ಕೋರಳ್ಳಿ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ, ಕಿರಿಯ ವಕೀಲರು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರುರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here