ಸಿಕ್ಕಿ ಬಿದ್ದಿರುವ ಸಾರಾಯಿ ಬಗ್ಗೆ ಬಿ ಆರ್ ಪಾಟೀಲ ಬಾಯಿ ಬಿಡುತ್ತಿಲ್ಲೇಕೆ?

0
16

ಆಳಂದ; ಮತಕ್ಷೇತ್ರದ ವ್ಯಾಪ್ತಿಯ ಸರಸಂಬಾ ಗ್ರಾಮದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 1 ಲಕ್ಷ ಮೌಲ್ಯದ 754 ಲೀ. ಅಕ್ರಮ ಸಾರಾಯಿಯನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸಾರಾಯಿ ಮಾಜಿ ಶಾಸಕ ಬಿ ಆರ್ ಪಾಟೀಲ ಅವರ ಕಟ್ಟಾ ಬೆಂಬಲಿಗ ಹಾಗೂ ಗ್ರಾ.ಪಂ ಸದಸ್ಯ ಸಂತೋಷ ಭಕರೆ ಇವರ ಹೊಲದಲ್ಲಿ ಸಿಕ್ಕಿರುತ್ತದೆ. ಈ ಕುರಿತು ಮಾಜಿ ಶಾಸಕ ಬಿ ಆರ್ ಪಾಟೀಲ ಚಕಾರವೆತ್ತುತ್ತಿಲ್ಲ ಏಕೆ? ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಪ್ರಶ್ನಿಸಿದ್ದಾರೆ.

ಮಂಗಳವಾರ ಆಳಂದ ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಅಕ್ರಮ ಸಾರಾಯಿ ಹಂಚುವುದು, ಆಮಿಷ ಒಡ್ಡುವುದು, ಮತದಾರರನ್ನು ಸೆಳೆಯುವುದು ಅವರ ತಂತ್ರವಾಗಿದೆ ಅಲ್ಲದೇ ಚುನಾವಣೆಯಲ್ಲಿ ಮಾಡಬಾರದ್ದನ್ನೆಲ್ಲ ಮಾಡಿ ಅದನ್ನು ನಮ್ಮ ತಲೆಗೆ ಕಟ್ಟುವುದು ಅವರ ಚಾಳಿಯಾಗಿದೆ ಎಂದು ಛೇಡಿಸಿದರು.

Contact Your\'s Advertisement; 9902492681

ಕಳೆದ 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಬಿ ಆರ್ ಪಾಟೀಲ ಬೆಂಬಲಿಗ ರುದ್ರವಾಡಿ ಗ್ರಾಮದ ಸಂಗಯ್ಯ ಸ್ವಾಮಿಯವರ ಹೊಲದಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಸಾರಾಯಿ ದೊರಕಿತ್ತು ಅದನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಈಗ ಮತ್ತೆ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿಯೇ ಅವರದೇ ಸ್ವಗ್ರಾಮದ ಅವರ ಬೆಂಬಲಿಗರ ಹೊಲದಲ್ಲಿ ಅಕ್ರಮ ಸಾರಾಯಿ ದೊರಕಿದೆ ಇದಕ್ಕೆ ಬಿ ಆರ್ ಪಾಟೀಲರು ಏನು ಹೇಳುತ್ತಾರೆ?. ಎಂದು ಪ್ರಶ್ನಿಸಿದ್ದಾರೆ.

ಸರಸಂಬಾ ಗ್ರಾಮದಲ್ಲಿ ದೊರಕಿರುವ ಅಕ್ರಮ ಸಾರಾಯಿಯು ಕೇವಲ ಒಂದು ಸ್ಯಾಂಪಲ್ ಮಾತ್ರ. ಬಿ ಆರ್ ಪಾಟೀಲ ಮತ್ತು ಅವರ ಬೆಂಬಲಿಗರು ಮತಕ್ಷೇತ್ರದ ಅನೇಕ ಕಡೆ ಎರಡು ಲಾರಿಯಷ್ಟು ಅಕ್ರಮ ಸಾರಾಯಿಯನ್ನು ಶೇಖರಿಸಿ ಇಟ್ಟುಕೊಂಡಿದ್ದಾರೆ ಅದನ್ನು ಚುನಾವಣೆ ಸಮಯದಲ್ಲಿ ಹಂಚಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ.

ಈಗ ದೊರಕಿರುವ ಸಾರಾಯಿ ಕೇವಲ ಅಲ್ಪ ಪ್ರಮಾಣದ್ದು. ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ಮುಂಚೆಯೂ ಮಾಹಿತಿ ನೀಡಿದ್ದರೂ ಅವರು ತಡವಾಗಿ ಹೋಗಿ ಕಾರ್ಯಾಚಾರಣೆ ನಡೆಸಿದ್ದಾರೆ ಇದರಿಂದ ಅಲ್ಪ ಪ್ರಮಾಣದ ಸಾರಾಯಿ ದೊರಕಿದೆ ಇದಕ್ಕಿಂತ ಹೆಚ್ಚಿನ ಸಾರಾಯಿಯನ್ನು ಅವರು ಬೇರೆ ಕಡೆ ಬಚ್ಚಿಟ್ಟಿದ್ದಾರೆ ಅದನ್ನು ಪತ್ತೆ ಹಚ್ಚಲು ಇಲಾಖೆ ಅಧಿಕಾರಿಗಳು ಮುಂದಾಗಬೇಕು ಅಲ್ಲದೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಕಾರಣರಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸಾರಾಯಿ ಬಗ್ಗೆ ಮಾತನಾಡುವ ಮಾಜಿ ಶಾಸಕ ಬಿ ಆರ್ ಪಾಟೀಲ ಈಗ ಯಾವ ಮುಖ ಇಟ್ಟುಕೊಂಡು ಸಾರಾಯಿ ಬಗ್ಗೆ ಮಾತನಾಡುತ್ತಾರೆ. ಬಿ ಆರ್ ಪಾಟೀಲ ಪ್ರತಿ ಚುನಾವಣೆಗಳಲ್ಲಿ ಅಕ್ರಮ ಸಾರಾಯಿ ಹಂಚುವುದು ಸೇರಿದಂತೆ ಅನೇಕ ಚುನಾವಣಾ ಅಕ್ರಮಗಳನ್ನು ಎಸಗುತ್ತಲೇ ಬಂದಿದ್ದಾರೆ ಆದರೆ ಮಾಡುವುದೆಲ್ಲವನ್ನು ತಾವೇ ಮಾಡಿ ನಮ್ಮ ಮೇಲೆ ಹಾಕುವುದು ಅವರ ಪದ್ಧತಿಯಾಗಿದೆ.

ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಅವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೇಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಶಿವಪುತ್ರಪ್ಪ ಬೆಳ್ಳೆ, ಮಹಾಂತಪ್ಪ ಆಲೂರೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here