ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಕಾಶ ಫುಲಾರಿ ಹರ್ಷ

0
90

ಕಲಬುರಗಿ: ರಾಜ್ಯ ಸರ್ಕಾರ ಅತ್ಯಂತ ಹಿಂದುಳಿದ ಹೂಗಾರ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯದಲ್ಲಿ ಮುಂದೆ ಬರಲು ಹಲವು ಅವಕಾಶಗಳನ್ನು ಮಾಡಿಕೊಟ್ಟ ಸರ್ಕಾರಕ್ಕೆ ಹೂಗಾರ ಸಮಾಜದ ಕಲಬುರಗಿ ಜಿಲ್ಲಾ ಅಧ್ಯಕ್ಷ ಪ್ರಕಾಶ ಫುಲಾರಿ ಸಂತಸ ವ್ಯಕ್ತಪಡಿಸಿದ್ದಾರೆ.

ಮಾತನಾಡಿದ ಅವರು ಹೂಗಾರ ಸಮುದಾಯವು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಈ ಹಿನ್ನೆಲೆ ಹಲವು ಪ್ರತಿಭಟನೆ ಮತ್ತು ಧರಣಿ ಸತ್ಯಗ್ರಹವನ್ನು ಹಮ್ಮಿಕೊಂಡು ಇತ್ತೀಚೆಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದೆ. ಹೂಗಾರ ಸೇರಿದಂತೆ ಸಮಾಜದ ಇನ್ನುಳಿದ ಪರ್ಯಾಯ ಪದಗಳನ್ನು ಸೇರ್ಪಡೆ ಮಾಡಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೇರಣೆಯಾಗಿದೆ.

Contact Your\'s Advertisement; 9902492681

ನಿಗಮ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜದ ಗುರುಗಳಾದ ನದಿಸಿನ್ನೂರಿನ ಗುರುದೇವ ಶರಣರು ಮತ್ತು ರಾಜ್ಯ ಅಧ್ಯಕ್ಷ ಬಸವರಾಜ ಹೂಗಾರ ರಾಯಚೂರು ಇವರ ನೇತೃತ್ವದ ತಂಡದಲ್ಲಿ ಸಮಾಜದ ಏಳಿಗೆಗೆ ಕೈ ಜೋಡಿಸಿದ ಸಮಸ್ತ ಹೂಗಾರ ಸಮಾಜದ ಬಂಧುಗಳ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಇನ್ನುಳಿದ ಶಾಸಕ ಸಚಿವರಿಗೆ ಅಭಿನಂದಿಸಿದ ಅವರು ಹೂಗಾರ ಸಮಾಜಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸಾಮಾಜಿಕ ವಲಯದಲ್ಲಿ ಮುನ್ನಲೆಗೆ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪೆÇ್ರ.ಬಿ.ಪಿ.ಹೂಗಾರ, ದತ್ತು ಹೂಗಾರ ಬಾದನಳ್ಳಿ, ಬಸವರಾಜ ಹೂಗಾರ ಮೇಳಕುಂದಿ, ಶಂಭಣ್ಣ ಹೂಗಾರ, ಬಸವರಾಜ ಹೂಗಾರ ಕೋಟನೂರ, ಶಾಂತಪ್ಪ ಹೂಗಾರ, ಚೆನ್ನಬಸಪ್ಪ ಹೂಗಾರ ಅಲ್ಲದೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here