ಜಮ್ಮು ಕಾಶ್ಮೀರದಲ್ಲಿ ಶೂನ್ಯ ಮತದಾನ

1
289

ನವದೆಹಲಿ: ದೇಶದ ವಿವಿಧ 14 ರಾಜ್ಯಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ಎಲ್ಲಾ ರಾಜ್ಯಗಳಲ್ಲಿ ಪ್ರತಿಶತ ಮತದಾನ ನಡೆದರೆ ಜಮ್ಮು-ಕಾಶ್ಮೀರದ ನೀರಾಶೆ ದಾಯಕ ಮತದಾನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಈದ್ಗಾ, ಖನ್ಯಾರ್‌, ಹಬ್ಬಾ ಕದಲ್‌ ಸೇರಿದಂತೆ 90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನವಾಗಿದೆ. ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಶ್ರೀನಗರದಲ್ಲಿ  ಮತಗಟ್ಟೆ ಕೇಂದ್ರಗಳು ತೆರೆದಿದ್ದರೂ ಜನ ಮತ ಹಾಕಲು ಹಿಂದೇಟು ಹಾಕಿದ್ದರು ಎನ್ನಲಾಗುತ್ತಿದೆ.  ಜಮ್ಮು-ಕಾಶ್ಮೀರದ ಎರಡು ಲೋಕಸಭಾ ಕ್ಷೇತ್ರಗಳಿಗೆ ಮತಾದನ ನಡೆದಿದೆ.

Contact Your\'s Advertisement; 9902492681

ಬೆಳಗ್ಗೆ 8 ಗಂಟೆಗೆ ಮತಚಲಾವಣೆ ಪ್ರಾರಂಭವಾಗಿದ, ಮತದಾನ ಬಿಗಿ ಭದ್ರತೆಯಲ್ಲಿತ್ತು.  ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್ ಮತ ಚಲಾಯಿಸಿದ್ದಾರೆ. ಸೋನವಾರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಇನ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನದ ಶೇಕಡಾವಾರು ಪ್ರಮಾಣ ಒಂದಕ್ಕಿಂತ ದಾಟಿರಲಿಲ್ಲ ಎನ್ನಲಾಗಿದೆ. ಮತದಾನದ ಅಂತ್ಯದ ವೇಳೆಗೆ ಈದ್ಗಾದಲ್ಲಿ ಶೇ.3.3 ರಷ್ಟು, ಸೋನಾವರ್‌ನಲ್ಲಿ ಶೇ. 12 ರಷ್ಟು ಮತದಾನ ದಾಖಲಾಗಿದೆ.

 

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here