ಮೈಸೂರು: ಡಾ ರಾಜಕುಮಾರ್ ಕನ್ನಡದ ಮೌಲ್ಯ ಹೆಚ್ಚಿಸಿದವರು.ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಪ್ರಜ್ಞೆ ಯನ್ನು ಜಾಗೃತ ಗೊಳಿಸಿದವರು.ಆ ಮೂಲಕ ಕನ್ನಡ ನುಡಿಯ ಶಕ್ತಿ ಸಾಮರ್ಥ್ಯ ವನ್ನ ಇಂದಿನ ತಲೆಮಾರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮಹಾ ಕವಯಿತ್ರಿ ಡಾ ಲತಾ ರಾಜಶೇಖರ್ ಅಭಿಪ್ರಾಯ ಪಟ್ಟರು.
ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಗಾನ ವೈದ್ಯ ಲೋಕ ಸಂಸ್ಥೆ ಆಯೋಜಿಸಿದ್ದ ಡಾ ರಾಜ್ ಗಾನ ಸವಿಸಂಜೆ ಕಾರ್ಯಕ್ರಮ ದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಡಾ ರಾಜಕುಮಾರ್ ತಮ್ಮ ಪಾತ್ರ ಗಳಲ್ಲೇ ಕೌಟುಂಬಿಕ ಮೌಲ್ಯ ಗಳ ಕಡೆ ಹೆಚ್ಚು ಒತ್ತು ನೀಡಿದರು.ಹಾಗಾಗಿ ಬದುಕಿದರೆ ರಾಜಕುಮಾರ್ ತರಹ ಬದುಕಬೇಕು ಎನ್ನುವಷ್ಟರ ಮಟ್ಟಿಗೆ ನಾಡಿನ ಮನೆಮಾತಾದರು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ವಿಶ್ರಾಂತ ಪ್ರಾಂಶುಪಾಲ ಬಿ ಮನೋಹರ್ ಮಾತನಾಡಿ ರಾಜಕುಮಾರ್ ಬದುಕೇ ನಮಗೆ ಮಾದರಿ.ಅನುಕರಣೀಯ ಎಂದರು.
ಅವರಿಗೆ ಕನ್ನಡದ ಬಗ್ಗೆ ಅತೀವ ಪ್ರೇಮ ವಿತ್ತು.ನಮ್ಮ ಕನ್ನಡ ಜಗತ್ತು ವಿಶ್ವವ್ಯಾಪಿಯಾಗಬೇಕು ಎಂಬ ಹಂಬಲವಿತ್ತು. ತಮ್ಮ ಬದುಕು ಮತ್ತು ಕಲೆಯ ಮೂಲಕ ನಾಡಿನ ಕೋಟ್ಯಾಂತರ ಕನ್ನಡಿಗರ ಗಮನಸೆಳೆದರು. ಅವರು ಕನ್ನಡ ನುಡಿ ಇರುವಷ್ಟು ಕಾಲವೂ ಇರುತ್ತಾರೆ ಎಂದು ಅರ್ಥೈಸಿದರು.ಗಾನ ವೈದ್ಯ ಲೋಕದ ಗೌರವಾಧ್ಯಕ್ಷ ಡಾ ವೈ ಡಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ ಟಿ ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮ ದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಎಡೆಯೂರು ಸಮೀಉಲ್ಲಾ ಉಪಸ್ಥಿತರಿದ್ದರು.
ನಂತರ ನಡೆದ ಡಾ ರಾಜ್ ಗಾನ ಸವಿ ಸಂಜೆಯಲ್ಲಿ ಡಾ ರಾಜಕುಮಾರ್ ಹಾಡುಗಳ ಗಾಯನ ಕಾರ್ಯಕ್ರಮ ದಲ್ಲಿ ಗಾನ ವೈದ್ಯ ಲೋಕ ತಂಡದ ಗಾಯಕರಾದ ಡಾ ವೈ ಡಿ ರಾಜಣ್ಣ.ಡಾ ಟಿ ರವಿಕುಮಾರ್ ಡಾ. ಎ ಎಸ್ ಪೂರ್ಣಿಮಾ ಲತಾ ಮನೋಹರ್ ಡಾ ಶ್ಯಾಮ್ ಪ್ರಸಾದ್ ಸಿ ಎಸ್ ವಾಣಿ ಪಾರ್ಥಸಾರಥಿ ಡಾ ಚಿನ್ನ ನಾಗಪ್ಪ ಡಾ ಸುರೇಂದ್ರನ್ ಗೀತ ಗಾಯನ ನಡೆಸಿಕೊಟ್ಟರು. ಶ್ರೀಲತಾ ಮನೋಹರ್ ಪ್ರಾರ್ಥಿಸಿದರು.