ಕಲಬುರಗಿ: ರಾಜ್ಯದಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಭ್ರμÁ್ಟಚಾರ ಹಾಗೂ ರಾಜಕೀಯ ದಿವಾಳಿತನದಿಂದಾಗಿ ಇಡೀ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಕಲುಷಿತ ವಾತಾವರಣ ನಿರ್ಮೂಲನೆ ಮಾಡಲು ಜನತಾದಳ (ಸಂಯುಕ್ತ) ಕರ್ನಾಟಕ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಜನತಾದಳ (ಸಂಯುಕ್ತ) ಕರ್ನಾಟಕ ಹಿರಿಯ ಉಪಾಧ್ಯಕ್ಷ ಸುಭಾಷ್ಚಂದ್ರ ಕಪಾಟೆ ಹೇಳಿದರು.
ಕಲಬುರಗಿ ಉತ್ತರ ಮತ ಕ್ಷೇತ್ರದಿಂದ ಶರಣು ಐಟಿ ಜನತಾದಳ (ಸಂಯುಕ್ತ) ಕರ್ನಾಟಕದಿಂದ ಸ್ಪರ್ಧಿಸಿದ್ದು, ಕ್ಷೇತ್ರದ ಜನತೆ ಅವರನ್ನು ಬೆಂಬಲಿಸಬೇಕು. ನಮ್ಮನ್ನಾಳುವ ಸರ್ಕಾರಗಳು ಸರಿಯಿರಬೇಕಾದರೆ ಮತದಾರರು ಪ್ರಜ್ಞಾವಂತರಾಗಬೇಕು. ಜನರು ಎಲ್ಲಿಒಯವರೆಗೆ ಪ್ರಜ್ಞಾವಂತರಾಗುವುದಿಲ್ಲವೋ ಅಲ್ಲಿಯವರೆಗೆ ಸುಸ್ಥಿರ ಸಮಾಜದ ನಿರ್ಮಾಣ ಅಸಾಧ್ಯ ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ಆಡಳಿತದಲ್ಲಿ ಮೊಟ್ಟ ಮೊದಲಿಗೆ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದು, ಜಿಪಂ, ತಾಪಂ, ಗ್ರಾಂ ಹೀಗೆ ಅಧಿಕಾರ ವಿಕೇಂದ್ರೀಕರಣ, ವಿಧವಾ ವೇತನ, ವೃದ್ಧಾಪ್ಯ ವೇತನ ಜಾರಿಗೆ ತಂದಿದ್ದು, ಬಡ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಉಚಿತ ಬಸ್‍ಪಾಸ್ ವ್ಯವಸ್ಥೆ, ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲಾಗಿತ್ತು ಎಂದರು.
ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಪಡಿಸಿದ ನಮ್ಮ ಪಕ್ಷದ ಯುವ ಅಭ್ಯರ್ಥಿ ಶರಣ ಐಟಿ ಅವರಿಗೆ ಕಲಬುರಗಿ ಉತ್ತರ ಮತಕ್ಷೇತ್ರದ ಜನ ಮತದಾನ ಮಾಡಬೇಕು ಎಂದು ವಿನಂತಿಸಿದರು. ಅಭ್ಯರ್ಥಿ ಶರಣು ಐಟಿ ಇತರರಿದ್ದರು.