ಕಲಬುರಗಿ : ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಮಲಾಪುರದಲ್ಲಿ ಭಾನುವಾರ ಚುನಾವಣಾ ಪ್ರಚಾರ ಮಾಡಲಾಯಿತು. ಮಲ್ಲಿಕಾರ್ಜುನ್ ಖರ್ಗೆ ಅವರು ರೇವುನಾಯಕ್ ಬೆಳಮಗಿ ಅವರಿಗೆ ಮತ ನೀಡಿದರೆ ನನಗೆ ಮತ ನೀಡಿದ ಹಾಗೇ ಎಂದು ಸಂದೇಶ ನೀಡಿದರು.
ಮುಖಂಡರಾದ ವಿಜಯಕುಮಾರ ಜಿ ರಾಮಕೃಷ್ಣ, ಶ್ರೀಧರ್ ಬಾಬು, ರಾಜೇಶ ರಾಠೋಡ, ವೈಜನಾಥ ತಡಕಲ, ಅಮರನಾಥ ತಡಕಲ, ರವಿ ಚವ್ಹಾಣ, ರವಿ ಬಿರಾದರ, ಡಾ. ರಶೀದ, ಮಲ್ಲಿನಾಥ ಪಾಟೀಲ, ಸಿ. ಎ. ಪಾಟೀಲ, ಸುಭಾಷ ಮುರುಡ ಬೆಳಮ್ಗಿ, ಶರಣಗೌಡ ಪಾಟೀಲ, ರಾಜು ಕಾಪನೂರ್, ಶುಭಾಶ ಕೋರೆ, ನೀಲಕಂಠ ಮುಲಗೆ, ನಿರ್ಮಲಾ ಬರಗಾಲಿ, ನಾರಾಯಣ ಪವಾರ, ಆನಂದ ಪಾಟೀಲ ಮತ್ತು ಇನ್ನಿತರ ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಜೊತೆಗೂಡಿ ರೇವುನಾಯಕ ಬೆಳಮಗಿ ಅವರಿಗೆ ಗೆಲ್ಲಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು. ಜನ ಬೆಂಬಲ ನೋಡಿ ಕಾಂಗ್ರೆಸ ಅಭ್ಯರ್ಥಿ ರೇವುನಾಯಕ ಬೆಳಮಗಿ ಗೆಲುವು ನಿಶ್ಚಿತ ಎಂದು ಹೇಳಬಹುದಾಗಿದೆ.