ಆಳಂದನಲ್ಲಿ ಕೇಸರಿ ಪಡೆಗೆ ತೀವ್ರ ಮುಖಭಂಗ; ಕ್ಷೇತ್ರದಲ್ಲೆಡೆ ಲಾಡ್ಲೆಮಶಾಕಿ ದೋಸ್ತಾರ ಹೋ ದಿನ್ ಎಂಬ ಘೋಷಣೆ

0
148
  • ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ,ರ ಭರ್ಜರಿ ಗೆಲವು 

ಕಲಬುರಗಿ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ,ರೂ ಗೆಲುವು ಸಾಧಿಸುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರರಿಗೆ ಸೋಲಿಸಿ ಬಿಜೆಪಿ ಮತ್ತದರ ಬೆಂಬಲಿತ ಕೇಸರಿ ಪಾಳೆಯಕ್ಕೆ ತೀವ್ರ ಮುಖಭಂಗಗೊಳಿಸಿದ್ದಾರೆ.

ಶನಿವಾರ ತಮ್ಮ ಸೌಹಾರ್ದ ನಾಯಕ ಬಿ.ಆರ್. ಪಾಟೀಲ,ರÀ ಗೆಲವು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ, ಸಂಭ್ರಮಾಚರಣೆ ನಡೆಸಿದರು. ಅಲ್ಲದೆ, ಪಾಟೀಲರಿಗೆ ಬೆಂಬಲಿತರು ಜೈ ಘೋಷ ಕೂಗಿದರು. ಮುಸ್ಲಿಂ ಕಾರ್ಯಕರ್ತರು ಲಾಡ್ಲೆಮಶಾಕಿ ದೋಸ್ತಾರ ಹೋ ದೀನ್, ಬಿ.ಆರ್. ಪಾಟೀಲಕಿ ಜೈ ಎಂಬ ಘೋಷಣೆ ಮೋಳಗಿಸಿದ್ದರು.

Contact Your\'s Advertisement; 9902492681

ಚುನಾವಣೆಯಲ್ಲಿ ಪ್ರಮುಖವಾಗಿ ಅಭಿವೃದ್ಧಿಪರ ಮಾತ್ತಿಗಿಂತ ಇಲ್ಲಿನ ರಾಘವ ಚೈತನ್ಯ ಲಿಂಗ ಹಾಗೂ ಹಿಂದೂತ್ವದ ಆಧಾರದ ಮೇಲೆ ಮತಯಾಚನೆ ನಡೆಸಿದ ಬಿಜೆಪಿ ಮತ್ತು ಅದರ ಕೇ¸ರಿ ಪಡೆಯೂ ತನ್ನ ಗೆಲವು ನಿಶ್ವಿತವೆಂದು ಹಾಕಿಕೊಂಡಿದ್ದದ ಲೆಕ್ಕಾಚಾರವೆಲ್ಲ ಈ ಚನಾವಣೆಯಲ್ಲಿ ಬುಡಮೇಲಾಯಿತು.

ಚುನಾವಣೆಯಲ್ಲಿ ಬಿ.ಆರ್. ಪಾಟೀಲರ ಮೇಲೆ ಕೇಸರಿ ಪಡೆ ಹೊರಿಸಿದ ಹಿಂದು ವಿರೋಧಿ ಆರೋಪವು ಕಿತ್ತೆಸೆದ ಮತದಾರರು ಪಾಟೀಲರ ಪರ ಗೆಲುವಿನ ತೀರ್ಪು ನೀಡಿದ್ದು ಅಲ್ಲದೆ, ಇದೇ ಮೊದಲು ಬಾರಿಗೆ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅದೇ ಪಕ್ಷದ ಅಭ್ಯರ್ಥಿಯನ್ನು ಸಹ ಆಯ್ಕೆ ಮಾಡಿದ್ದು ಒಂದು ಹೊಸ ಇತಿಹಾಸವೇ ಸೃಷ್ಟಸಿದ್ದಂತಾಗಿ, ಸೌಹಾರ್ದತೆಗೆ ಹೆಸರಾಗಿದ್ದ ಕ್ಷೇತ್ರದಲ್ಲಿ ಕದಡಿದ ಸೌಹಾರ್ದತೆಯನ್ನು ಮತದಾರರು ಪುÀನರÀಸ್ಥಾಪುಸುವಂತಾಗಲು ಮೇ 10ರಂದೆ ಐತಿಹಾಸಿಕ ದಾಖಲೆಗೆ ಮುನ್ನೂಡಿ ಬರೆದ್ದಾರೆ.

ಸುಭಾಷ ಗುತ್ತೇದಾರವರು ಅಧಿಕಾರ ಇರಲಿ ಇಲ್ಲದೆ ಇದ್ದಾಗಲೂ ತಾನಾಯಿತು, ಜನಪರ ಸೇವೆಯಾಯಿತು ಎಂದುಕೊಂಡಿದ್ದವರು ಇದೇ ಮೊದಲು ಬಾರಿಗೆ ತಮ್ಮ ರಾಜಕಾರಣದಲ್ಲಿ ಧರ್ಮರಾಜಕಾರಣಕ್ಕೆ ಮುಂದಾಗಿ ತಮಗಿದ್ದು ವೋಟ್‍ಬ್ಯಾಂಕ್‍ನ್ನೇ ನಷ್ಟಮಾಡಿಕೊಂಡಿದ್ದು ಅವರ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಕ್ಷೇತ್ರದಲ್ಲಿ ಧರ್ಮ ಮತ್ತು ಜಾತಿ, ಪಕ್ಷ ರಾಜಕಾರಣಕ್ಕೆ ಒತ್ತು ನೀಡದೆ ಬರುತ್ತಿದ್ದ ಮತದಾರರು, ಧರ್ಮಕಾರಣಕ್ಕೆ ಮುಂದಾದ ಗುತ್ತೇದಾರರ ಬಹುತೇಕ ಸಖ್ಯ ತೊರೆದು, ವ್ಯಕ್ತಿ ಮತ್ತು ಅಭಿವೃದ್ಧಿಗೆ ಬೆಂಬಲ ಎಂಬುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಕಳೆದೊಂದು ವರ್ಷದಿಂದ ಇಲ್ಲಿನ ಲಾಡ್ಲೆಮಾಶಕ ದರ್ಗಾದಲ್ಲಿನ ರಾಘವ ಚೈತನ್ಯ ಲಿಂಗದ ಪೂಜೆಯ ವಿವಾದ ಮೈಮೇಲೆಳೆದುಕೊಂಡಿದ್ದು ಸುಭಾಷ ಗುತ್ತೇದಾರಗೆ ಮತದಾದರು ಈ ಚುನಾವಣೆಯಲ್ಲಿ ಸೋಲಾಗಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆ ಬೇಕೆಂಬ ಸಂದೇಶವನ್ನು ರವಾನಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ರಾಘವ ಚೈತನ್ಯ ಲಿಂಗದ ಕುರಿತು ಮಾಡಿದ ಭಾಷಣಕ್ಕೆ ಇಲ್ಲಿನ ಮತದಾರರು ಕ್ಯಾರೆ ಎನ್ನದೆ ಎರಡು ದಶಕಗಳಿಮದಲೂ ನೆಲಕ್ಕಚ್ಚಿದ ಕಾಂಗ್ರೆಸ್ ಪಕ್ಷಕ್ಕೆ ಬಿ.ಆರ್. ಪಾಟೀಲರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಮೂಲಕ ಮತದಾರರು ಹೊಸ ದಾಖಲೆ ಬರೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here