ಸುರಪುರ: ಕರ್ನಾಟಕ ಜಾನಪದ ಪರಿಷತ್ತಿನ ಯಾದಗಿರಿ ತಾಲೂಕಾ ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಸಾಹಿತಿ, ಸಂಘಟಕ, ಉಪನ್ಯಾಸಕ ಗುರುಪ್ರಸಾದ ವೈಧ್ಯ ಅವರನ್ನು ನೇಮಕಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜಾನಪದ ತಜ್ಞ ಹೆಚ್,ಎಲ್ ನಾಗೇಗೌಡರು ಕಟ್ಟಿ ಬೆಳೆಸಿದ ಕರ್ನಾಟಕ ಜಾನಪದ ಪರಿಷತ್, ಜಾನಪದ ಕಲಾವಿಧರ ದಾಖಲಿಕರಣ, ಕಲೆಗಳ ಕ್ಷೇತ್ರ ಕಾರ್ಯ ಕಲಾವಿಧರಿಗೆ ಪ್ರೋತ್ಸಾಹ ಮತ್ತು ಸಹಕಾರ ನಿಡುತ್ತಾ ಬಂದಿದ್ದು ರಾಜ್ಯದ ತುಂಬಾ ಜಾನಪದದ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ. ಟಿ ತಿಮ್ಮೆಗೌಡರು ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಅವರ ಆದೇಶದ ಅನ್ವಯ ಎಲ್ಲಾ ತಾಲೂಕಾ ಘಟಕಗಳ ಪುನರಚನೆ ಹಾಗೂ ನೂತನ ತಾಲೂಕಾ ಘಟಕಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ನಡೆಯುತ್ತಿದ್ದು ಯಾದಗಿರಿಯ ತಾಲೂಕಿನ ಜವಬ್ದಾರಿಯನ್ನು ಗುರುಪ್ರಸಾದ ವೈಧ್ಯ ಅವರಿಗೆ ಕೇಂದ್ರಸಮಿತಿಯ ಆದೇಶಾನುಸಾರ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ಹೆಡಿಗಿನಾಳ, ನಿಂಗಣ್ಣ ತಡಿಬಿಡಿ, ಮೌನೇಶ ಐನಾಪೂರ ಸಶರಣು ಕಾಡಂಗೇರಿ, ಬಸವರಾಜ ಚನ್ನಪಟ್ನ ಸೇರಿದಂತೆ ಇತರರು ಇದ್ದರು.