ಕೆಂಬ್ರಿಡ್ಜ್ ಶಾಲೆಗಿಂತ ಕಮ್ಮಿಯಿಲ್ಲ ಈ ಸರಕಾರಿ ಶಾಲೆ

2
554
  • ಡಾ.ಅಶೋಕ ದೊಡ್ಮನಿ, ಜೇವರ್ಗಿ

ಯಾದಗಿರಿ: ಆಡಿ ಬಾ ನನ್ನ ಕಂದಾ ಅಂಗಾಲ ತೊಳದೇನ, ಬೆಳ್ಳಿ ಬಟ್ಟಲದಾಗ ತಿಳಿನೀರ ತೊಗೊಂಡುˌ ಬಂಗಾರದ ಮುಖವ ತೊಳೆದೇನ. ಈ ಹಾಡು ಅಕ್ಷರಶ: ಈ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಶಕ್ಷರೆ ತಮ್ಮ ಶಾಲಾ ಮಕ್ಕಳಿಗಾಗಿ ಹಾಡಿದಂತಿದೆ. ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಶಾಲೆಯನ್ನು ನಂದನವನ್ನಾಗಿ ಮಾಡಿದ್ದಾರೆ.

Contact Your\'s Advertisement; 9902492681

ಈ ಶಾಲೆಯ ನಿರ್ವಹಣೆಯ ಅನುದಾನˌ ಮುರುಕು ಬೆಂಚ್ ಗಳ ಟೆಂಡರ್ ಹಣˌ ದಾನಿಗಳ ನೆರವು ಮತ್ತು ಸದಸ್ಶರ ಹಣದ ಸಹಕಾರದಿಂದ ಶಾಲೆಯ ಆವರಣವನ್ನು ಸುಂದರವಾಗಿಸಿದ್ದಾರೆ. ಶಾಲೆಯ ಎಲ್ಲ ರೂಂಗಳಿಗೆ ಪೇಂಟಿಂಗ್ˌ ಉತ್ತಮ ಶೌಚಾಲಯˌ ಗಿಡಮರಗಳುˌ ಹೂ ಬಳ್ಳಿಗಳಿಂದ ಶಾಲಾವರಣ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗುಣಮಟ್ಟದ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದ್ದಾರೆ.

ಶಾಲಾ ಪರಿಸರವನ್ನು ಸುಂದರಗೊಳಿಸಲು ನನ್ನೊಬ್ಬನಿಂದಲೇ ಆಗಿಲ್ಲ. ಎಸ್.ಡಿ.ಎಂ.ಸಿ ಸದಸ್ಶರುˌ ದಾನಿಗಳು ಹಾಗೂ ಗ್ರಾಮಸ್ಥರು ಸಹಕರಿಸಿದ್ದರ ಫಲ ಈ ಶಾಲಾವರಣ. ನಮಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರವೂ ಇದ್ದುˌ ಉತ್ತಮವಾಗಿ ಸ್ಪಂದಿಸುತ್ತಾರೆ.

            – ಶಿವಶರಣ ಚಿಕ್ಕಮೇಟಿ, ಅಧ್ಶಕ್ಷರುˌಎಸ್.ಡಿ.ಎಮ್.ಸಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀರನೂರ

ಯಾವುದಪ್ಪ ಅಂತಹ ಶಾಲೆ? ಯಾರಪ್ಪ ಈಗಿನ ಕಾಲದಲ್ಲಿ ಅಂತಹ ಅಧ್ಶಕ್ಷ ಸಿಗೋದು ಅಂತಿರಾ! ಅದೇ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಬೀರನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

ಅಧ್ಶಕ್ಷರ ಹೆಸರು ಶಿವಶರಣ ಚಿಕ್ಕಮೇಟಿ. ಅವರ ಅವಿರತ ಶ್ರಮದಿಂದ ಶಾಲೆ ನಂದನವನವಾಗಿದೆ. ಬರೊಬ್ಬರಿ 390 ವಿದ್ಶಾರ್ಥಿಗಳಿರುವ ಶಾಲೆಯನ್ನು ಅಕ್ಷರಶ: ನಂದನವಾಗಿಸಿದ್ದಾರೆ. ಯಾವ ಕೆಂಬ್ರಿಡ್ಜ್ ಶಾಲೆಗಿಂತಲೂ ಕಡಿಮೆಯಿಲ್ಲ ಈ ಸರಕಾರಿ ಶಾಲೆ. ಕೇವಲ ಬೌತಿಕವಾಗಿ ಅಷ್ಟೇ ಅಲ್ಲˌ ಗುಣಮಟ್ಟದ ಶಿಕ್ಷಣದಲ್ಲೂ ಈ ಶಾಲೆ ಮುಂದಿದೆ.

ಎಂಟು ಜನ ಶಿಕ್ಷಕರುˌ ಇಬ್ಬರು ಅತಿಥಿ ಶಿಕ್ಷಕರನ್ನು ಹೊಂದಿರುವ ಈ ಶಾಲೆ ಹಲವರಿಗೆ ಪಾಠವಾಗಿದೆ. ಎಸ್.ಡಿ.ಎಮ್.ಸಿ ಅಧ್ಶಕ್ಷರು ಮತ್ತು ಸದಸ್ಶರು ಹೇಗಿರಬೇಕು ಮತ್ತು ಸರಕಾರ ಯಾವ ಉದ್ದೇಶ ಇಟ್ಟುಕೊಂಡು ಈ ಸಮಿತಿ ಇರಬೇಕೆಂದಿದೆ ಅನ್ನೋದು ಈ ಊರಿನವರಿಂದ ಕಲಿಯಬೇಕಾಗಿದೆ. ಗ್ರಾಮಸ್ಥರ ಸಹಕಾರದಿಂದ ಸರಕಾರಿ ಸೌಲಭ್ಶವನ್ನು ಶಾಲೆಗೆ ಹೇಗೆ ಬಳಸಿಕೊಳ್ಳಬೇಕು ಅನ್ನುವುದನ್ನು ಚಿಕ್ಕಮೇಟಿ ತೋರಿಸಿಕೊಟ್ಟಿದ್ದಾರೆ.

ನಮ್ಮ ಮಕ್ಕಳು ಸಹ ಇದೇ ಶಾಲೆಯಲ್ಲಿ ಓದುವುದರಿಂದ ಮಾಡಲೇಬೇಕಲ್ಲˌ ಗ್ರಾಮದ ಜನರಿಗೆ ಹೊಸದನ್ನು ಮಾಡಿ ತೋರಿಸಬೇಕು. ಮಕ್ಕಳಿಗೂ ಶಾಲೆಯ ಸೌಂದರ್ಯ ಆಕರ್ಷಕವಾಗಿರಬೇಕು. ಶಾಲೆಯ ಪರಿಸರ ಕಲಿಕೆಗೆ ತುಂಬಾ ಸಹಕಾರಿ ಅಂತಾರೆ ಅವರು.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here