ಭಾರತೀಯ ರೆಡ್ ಕ್ರಾಸ್ (ಪಿ.ಆರ್.ಎಸ್.ಸಿ) ಸಭೆ

0
99

ಕಲಲಬುರಗಿ: ಬೆಂಗಳೂರಿನ ರೆಡ್ ಕ್ರಾಸ್ ಕೇಂದ್ರ ಕಛೇರಿಯಲ್ಲಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ, ರಾಜ್ಯ ಘಟಕ ಸಭೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೇಂದ್ರ ಕಛೇರಿಯಲ್ಲಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ, ನಿರ್ದೇಶಕರಾದ ಡಿ.ಎಸ್.ಸಿದಣ್ಣ ರವರ ನೇತೃತ್ವದಲ್ಲಿ ಜರುಗಿತು.

ರೆಡ್ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಎಲ್ಲಾ 31 ಜಿಲ್ಲೆಗಳ ರೆಡ್ ಕ್ರಾಸ್ ಸೊಸೈಟಿಯ ಸೇವೆಗಳನ್ನು ಚುರುಕುಗೊಳಿಸಬೇಕು. ಈ ಹಿನ್ನಲೆಯಲ್ಲಿ ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಜೊತೆಯಲ್ಲಿ ನಿರಂತರವಾಗಿ ಸಂಪರ್ಕ ಹೊಂದುವ ಮೂಲಕ ರಾಜ್ಯಾದ್ಯಂತ ರೆಡ್ ಕ್ರಾಸ್ ಸೊಸೈಟಿಯ ಚಟುವಟಿಕೆ ಕುರಿತು ಮಾಹಿತಿ ನೀಡುವುದು ಪ್ರತಿ ಜಿಲ್ಲೆಯವರು ಕನಿಷ್ಟ 3 ತಿಂಗಳಿಗೊಮ್ಮೆ ಯಾದರು ಕೇಂದ್ರ ಕಛೇರಿ ತಮ್ಮ ಚಟುವಟಿಕೆ ಕುರಿತು ಮಾಹಿತಿ ಸಲ್ಲಿಸುವುದು. ಜಿನೆವಾ ದಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ಅಭಿವೃದ್ದಿ ನೋಡುವುದಕ್ಕಾಗಿ ಪಬ್ಲಿಕ್ ರಿಲೇಷನ್ ಸಬ್ಕಮಿಟಿ ಸದಸ್ಯರ ನಿಯೋಗವನ್ನು ಕೊಂಡಯಿವುದು. ಹಾಗೆಯೇ ಯಾವ ಯಾವ ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲವೋ ಸದರಿ ಸ್ಥಳದಲ್ಲಿ ಬ್ಲಡ್ ಬ್ಯಾಂಕ್ ತೆರೆಯುವ ವ್ಯವಸ್ಥೆ ಕಲ್ಪಿಸುವುದು ಈ ರೀತಿ ಹತ್ತು ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.

Contact Your\'s Advertisement; 9902492681

ಪ್ರಾರಂಭದಲ್ಲಿ ನಿರ್ದೇಶಕರಾದ.ಡಿ.ಎಸ್.ಸಿದಣ್ಣ (ದಾವಣಗೆರೆ ಜಿಲ್ಲೆ)ರವರ ನೇತೃತ್ವದಲ್ಲಿ ಸ್ವಗತಿಸಿ ಎಲ್ಲಾ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಜನರಲ್ ಸೆಕ್ರೆಟರಿಯಾದ ಹೆಚ್.ಎಸ್.ಬಾಲಸುಬ್ರಮಣ್ಯಂ ರವರು ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಮಂಡಿಸಿದರು, ಕೊನೆಯಲ್ಲಿ ಒಂದಿಸಿದರು.

ಸಬ್ಕಮಿಟಿಯ ಸದಸ್ಯರಾದ ಶಿವರಾಜ ಅಂಡಗಿ, (ಕಲಬುರಗಿ ಜಿಲ್ಲೆ), ಕೆ.ವಿರೇಶ (ಬಳ್ಳಾರಿ ಜಿಲ್ಲೆ) ಎ.ಎಂ.ಸುರೇಶ್ (ಶಿವಮೊಗ್ಗ ಜಿಲ್ಲೆ), ಹೆಚ್.ಎಸ್.ಬಾಲಸುಬ್ರಮಣ್ಯಂ, , ವಿಕಾಸ್ ಕಲಘಟಗಿ, (ಬೆಳಗಾವಿ ಜಿಲ್ಲೆ) ಇವರುಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here