ನಗರಸಭೆಯಲ್ಲಿ ಮನೆಯಂತೆ ಪರಿಸರವನ್ನೂ ಸ್ವಚ್ಛವಾಗಿಡಿ

0
22

ಶಹಾಬಾದ: ನಮ್ಮ ಪರಿಸರ ಶುದ್ದವಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅಂಥ ಶುದ್ದವಾದ ಪರಿಸರ ನಿರ್ಮಾಣ ಮಾಡುವುದೆ ವಿಶ್ವ ಪರಿಸರ ದಿನಾಚರಣೆ ಉದ್ದೇಶವಾಗಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಮುಜಾಮಿಲ್ ಅಲಂ ಹೇಳಿದರು.

ಅವರು ಸೋಮವಾರ ನಗರಸಭೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ನನ್ನ ಲೈಫ್ ನನ್ನ ಸ್ವಚ್ಛ ನಗರ, ಜನತಾ ಜೀವ ವೈವಿಧ್ಯಮಯ ಮಾಸಾಚರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಶುದ್ಧ ವಾತಾವರಣ ನಿರ್ಮಾಣವಾಗಬೇಕಾದರೆ ಸುತ್ತಲು ತಂಪು ನೀಡುವ, ಕಣ್ಣಿಗೆ ಮುದ ನೀಡುವ ಹಸಿರು ಗಿಡಗಳ ಸಾಲು ಇರಬೇಕು. ಗಿಡಗಳಿಂದ ವಾತಾವಣದಲ್ಲಿ ಶುದ್ದವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಮಕ್ಕಳಿಂದ ಗಿಡಗಳನ್ನು ನೆಡಸಬೇಕು. ಮಕ್ಕಳಿಂದಲೇ ಗಿಡಗಳನ್ನು ನೆಡೆಸಿದಾಗ, ನಾವು ನೆಟ್ಟ ಗಿಡವೆಂಬ ಅಭಿಮಾನದಿಂದ, ಪ್ರೀತಿ ಮೂಡಿ, ಅವುಗಳನ್ನು ಕಾಪಾಡುತ್ತಾರೆ.ಗಿಡಗಳೊಂದಿಗೆ ನಮ್ಮ ಸುತ್ತಲಿನ ಪ್ರದೇಶವನ್ನು ಕಸಕಡ್ಡಿಗಳಿಂದ ಮುಕ್ತವಾಗಿಸಬೇಕೆಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ್ ಮಾತನಾಡಿ, ಮನೆ, ಮನಸ್ಸಿನ ಕಸವನ್ನು ಹೊರ ಹಾಕಿ ಸ್ವಚ್ಛಗೊಳಿಸಿಕೊಳ್ಳುವಂತೆ ನಮ್ಮ ಪರಿಸರ ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಶುಚಿಯಾಗಿಟ್ಟುಕೊಂಡರೆ ನಿರ್ಮಲ ಭಾರತದ ಕನಸು ನನಸಾಗಲಿದೆ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನೂ ಮನಸ್ಸು ಮಾಡಬೇಕು ಎಂದರು.

ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಮಾತನಾಡಿ, ಸಾರ್ವಜನಿಕ ಪ್ರದೇಶಗಳನ್ನು ಸರಕಾರದ ವತಿಯಿಂದ ಮಾತ್ರ ಸ್ವಚ್ಛಗೊಳಿಸಬೇಕು ಎಂಬ ಮನೋಭಾವನೆ ಬಿಟ್ಟು ಇದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡಬೇಕು. ಬಯಲು ಶೌಚಾಲಯದ ಪದ್ಧತಿ, ಅನೈರ್ಮಲ್ಯ ದೂರವಾಗಿಸಿ ನಮ್ಮ ಪರಿಸರವನ್ನಾದರೂ ನಾವು ಶುಚಿಗೊಳಿಸಿ ಕೊಳ್ಳುವಂತಾಗಬೇಕು. ಮಲಿನಗೊಂಡ ಪರಿಸರದಲ್ಲಿ ವಾಸಿಸುವ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ಆರೋಗ್ಯ ನಿರೀಕ್ಷಕರಾದ ಮೋಹಿಯೋದ್ದಿನ್,ಶಿವರಾಜಕುಮಾರ, ಹುಣೇಶ ದೊಡ್ಡಮನಿ, ಈರಣ್ಣ ಕುರಿ, ಅನೀಲಕುಮಾರ ಹೊನಗುಂಟಿ, ಭೀಮು, ಪ್ರವೀಣ, ಜಾನ್,ನಿರಂಜನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here