ಪ್ಲಾಸ್ಟಿಕ್ ಬಳಕೆ ಹಾನಿ ಕುರಿತು ಜಾಗೃತಿ

0
12

ಕಲಬುರಗಿ: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಹಾನಿ ಕುರಿತು ಹಾಗೂ ಪೇಪರ್ ಮತ್ತು ಬಟ್ಟೆಗಳಿಂದ ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ ಬ್ಯಾಗ್ (ಕೈಚೀಲ)ಗಳನ್ನು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ತರಿಗೆ ವಿತರಿಸುವದರ ಮೂಲಕ ಬಳಸುವಂತೆ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನು ಹಮ್ಮಿಕೊಂಡು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಭಿಯಾನಕ್ಕೆ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಹಸಿರು ನಿಶಾನೆ ತೋರುವದರ ಮೂಲಕ ಚಾಲನೆ ನೀಡಿದರು .ರಾ.ಸೇ.ಯೋ ಕಾರ್ಯಕ್ರಮಾಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ ,ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಲಾ ಪಾಟೀಲ,ಉಪನ್ಯಾಸಕರಾದ ಕುಮಾರಿ ಅರ್ಪೀತಾ,ಕುಮಾರಿ ವಾಸವಿ ಜೋಷಿ,ಹಾಗೂ ಸಿಬ್ಬಂದಿ ಮತ್ತು ರಾ.ಸೇ.ಯೋ ಸ್ವಯಂ ಸೇವಕರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here