ಜಿಮ್ಸ್ ಆಸ್ಪತ್ರೆಯ ಗುತ್ತಿಗೆ ಆಧಾರದ ನೌಕರಿಗೆ ಇಎಸ್‍ಟಿ/ಇಪಿಎಫ್ ನೀಡದೆ ವಂಚನೆ: ಸಚಿವರಿಗೆ ಮನವಿ

0
28

ಕಲಬುರಗಿ: ಜಿಮ್ಸ್ ಆಸ್ಪತ್ರೆಯ 250 ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಇಎಸ್‍ಟಿ/ಇಪಿಎಫ್ ನೀಡದೆ ವಂಚಿಸಿರುವ ನಿರ್ದೇಶಕರ ವಿರುದ್ಧ ಕನ್ನಡಿಗರ ಸೇವಾದಳ ಕರ್ನಾಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಕುಮಾರ ಎಮ್. ಬಡಿಗೇರ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಮತ್ರ ಸಲ್ಲಿಸಿದರು.

ಜಿಲ್ಲೆಯ ಜೇಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಕವಿತಾ ಪಾಟೀಲ ರವರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ಟಾಫ್ ನರ್ಸ ಹಾಗೂ “ಡಿ” ಗ್ರೂಪ್ ನ ನೌಕರರಿಗೆ ಇಎಸ್‍ಟಿ/ಇಪಿಎಫ್ ನೀಡದೆ ವಂಚನೆ ಮಾಡಲಾಗಿರುವ ಸಂಗತಿ ತಾವೇ ಒಪ್ಪಿಕೊಂಡಿರುತ್ತಾರೆ.
09.12.2022 ರಂದು ನಮ್ಮ ಸಂಘಟನೆಯಿಂದ ದೂರು ಸಲ್ಲಿಸಿದ್ದು, ಈಗ ಮೇಲ್ನೋಟಕ್ಕೆ ಸಮಯ ಕಾಲಾವಕಾಶ ನೀಡಬೇಕೆಂದು ಮಾನ್ಯ ಆಯುಕ್ತರು ಆರೋಗ್ಯ ಸೌಧ ಬೆಂಗಳೂರು ರವರು ಮನವರಿಕೆ ನೀಡಿದ್ದಾರೆ.

Contact Your\'s Advertisement; 9902492681

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಇಎಸ್‍ಟಿ/ಇಪಿಎಫ್ ಸರಿಯಾಗೆ ಜಮೆ ಮಾಡಿದರೆ ಇಷ್ಟೊಂದು ಸಮಯ ಪಡೆಯಬೇಕಾಗಿರಲಿಲ್ಲ ಹಾಗೂ ನೌಕರರಿಗೂ ವಂಚಿಸುತ್ತಾ ಇರಲಿಲ್ಲ. ಕಾರ್ಮಿಕರ ಕಾನೂನು ಅಡಿಯಲ್ಲಿ ಹಾಗೂ ಭಾರತ ಸರ್ಕಾರದ ಅಧೀನದಲ್ಲಿ ಪಡೆದಿರುವ ಇಎಸ್‍ಟಿ/ಇಪಿಎಫ್ ನೀಡದೆ ವಂಚನೆ ಮಾಡಿರುವ ಡಾ. ಕವಿತಾ ಪಾಟೀಲ_ರವರಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ನಷ್ಠವಾಗಿದ್ದು, ಕೂಡಲೇ ಸದರಿಯವರನ್ನು ಅಮಾನತ್ತು ಗೊಳಿಸಬೇಕು. ಹಾಗೇಯೆ 250ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here