ರೈತರ ಬದುಕು ನಿರೂಪಿಸಿದ ಕವಿಗಳು

0
284

ಕಲಬುರಗಿ: ಕೆಂಡಕಾರುವ ಬಿಸಿಲನ್ನು ಹೊರಹಾಕಿ ಅದೆ ತಾನೆ ಸೂರ್ಯ ಅಸ್ತವಾಗಿದ್ದ. ಬಿಸಿ ಮಿಶ್ರಿತ ಗಾಳಿ ಬೀಸುತ್ತಿತ್ತು. ಸುಂದರ ಸಂಜೆಯಲ್ಲಿ ಸಾಹಿತಿಗಳು ಮಳೆರಾಯನನ್ನು ಕರೆಯುವ ದೃಶ್ಯ ನೋಡುವುದೇ ಒಂದು ಸುಂದರ ಅನುಭವದಂತಿತ್ತು. ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಆಯೋಜಿಸಿದ್ದ ಕವಿಮೇಳ ಕಾವ್ಯಮಳೆ-2023 ಎಂಬ ಮುಂಗಾರು ಕವಿಗೋಷ್ಠಿಯಲ್ಲಿ ಕಂಡು ಬಂದ ದೃಶ್ಯಗಳಿವು. ಕವಿಗಳು ಮಳೆರಾಯನ ಕುರಿತು ಸ್ವ ರಚಿತ ಕವನ ವಾಚಿಸುವ ಮೂಲಕ ವರುಣದೇವನಲ್ಲಿ ಪ್ರಾರ್ಥಿಸಿದರು.

ಕವಿಗೋಷ್ಠಿಗೆ ಚಾಲನೆ ನೀಡಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ ್ಪ ಪಾಟೀಲ ಧಂಗಾಪುರ, ಸಾಹಿತಿಗಳು ಕೃಷಿ ಕ್ಷೇತ್ರದ ಸಮಸ್ಯೆಗಳ ಮೇಳೆ ಬೆಳಕು ಚೆಲ್ಲುವ ಸಾಹಿತ್ಯ ರಚಿಸಬೇಕಿದೆ. ಸಮಾಜ ಪರಿವರ್ತಿಸುವಲ್ಲಿ ಸಾಹಿತಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ರೈತÀರ ಬದುಕು, ಅವರು ಅನುಭವಿಸುತ್ತಿರುವ ಕಷ್ಟ, ರೈತರಿಗೆ ಸಿಗಬೇಕಿರುವ ಸೌಲಭ್ಯಗಳ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಕವನ, ಲೇಖನ, ಪುಸ್ತಕಗಳು ರಚಿಸುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

Contact Your\'s Advertisement; 9902492681

ರೈತ ಆತಂಕದಲ್ಲಿದ್ದಾನೆ. ರೈತರ ಸಮಸ್ಯೆಗಳ ಬಗ್ಗೆ ಯೋಚನೆ ಮಾಡುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ. ದೇಶಕ್ಕೆ ಅನ್ನ ನೀಡುವ ರೈತನ ಸ್ಥಿತಿ ಇಂದು ಚಿಂತಾಜನಕವಾಗಿದೆ. ಸರ್ಕಾರಗಳು ರೈತರ ನೆರವಿಗೆ ಬರುತ್ತಿಲ್ಲ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇಷ್ಟೆಲ್ಲ ನೋವು ಅನುಭವಿüಸುತ್ತಿರುವ ಕೃಷಿಕನ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಸಲ ಕೃಷಿ ಕುರಿತು ಕಾರ್ಯಕ್ರಮ ಆಯೋಜಿಸಿದೆ. ಪೊಲೀಸ್ ಸಾಹಿತಿಗಳ, ಪತ್ರಕರ್ತ ಸಾಹಿತಿಗಳ, ಶಿಕ್ಷಕ ಸಾಹಿತಿಗಳ ಸಮ್ಮೇಳನ ಮಾಡಿದಂತೆ ಮುಂಬರುವ ದಿನದಲ್ಲಿ ಜಿಲ್ಲಾ ಮಟ್ಟದ ಕೃಷಿ ಸಾಹಿತ್ಯ ಸಮ್ಮೇಳನವೊಂದನ್ನು ಆಯೋಜಿಸಿ ಕೃಷಿ ಕ್ಷೇತ್ರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಲಾಗುತ್ತದೆ ಎಂದ ಅವರು, ಪರಿಷತ್ತು ಸದಾ ಕ್ರಿಯಾಶೀಲವಾಗಿ ಕಾರ್ಯಕ್ರಮಗಳು ನಡೆಸಲು ಜಿಲ್ಲೆಯ ಜನತೆಯ ಸಹಕಾರ ತುಂಬಾನೆ ಸಿಗುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು.

ನಂತರ ಕವಿಗಳಿಂದ ಮಳೆ, ರೈತರ ಸಮಸ್ಯೆ, ರೈತರ ಬದುಕು ಕುರಿತು ಕವನ ವಾಚಿಸಿದರು. ಧರೆಗೆ ಬಂದು ನೀರಿನ ಧಾಹ ತೀರಿಸು ಮಳೆರಾಯ, ರೈತ ಕಂಗಾಲಾಗಿದ್ದಾನೆ ನೀ ಬಂದು ಅವರ ಕೈ ಹಿಡಿ ಎಂದು ಕವಿಗಳು ಪ್ರಾರ್ಥನೆ ಮಾಡಿದರು.

ಹಿರಿಯ ಸಾಹಿತಿ ಸೂರ್ಯಕಾಂತ ಸೊನ್ನದ, ಹಿರಿಯ ಲೇಖಕ ನರಸಿಂಗರಾವ ಹೇಮನೂರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಆಳಂದ ತಾಲೂಕು ಕಸಾಪ ಅಧ್ಯಕ್ಷ ಹಣಮಂತ ಶೆÉೀರಿ, ಜೇವಗಿ ಅಧ್ಯಕ್ಷ ಎಸ್ ಕೆ ಬಿರಾದಾರ, ಕಲಬುರಗಿ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ , ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಮಲ್ಲಿನಾಥ ಸಂಗಶೆಟ್ಟಿ, ಶಿವಕುಮಾರ ಸಿ.ಎಚ್, ರಾಜೇಂದ್ರ ಮಾಡಬೂಳ, ಸಿದ್ದು ಹಂಚನಾಳ, ವೆಂಕಟರಾವ ದೇಶಪಾಂಡೆ, ಡಾ. ಕೆ.ಗಿರಿಮಲ್ಲ, ಹಣಮಂತರಾವ ಘಂಟೇಕರ್, ಗೋದಾವರಿ ಪಡಶೆಟ್ಟಿ, ಅಂಬುಜಾ ಮಳಖೇಡಕರ್, ಅಂಬಿಕಾ ಸಿಂಧೆ, ಬಾಬುರಾವ ಪಾಟೀಲ, ಗಂಗಮ್ಮಾ ನಾಲವಾರ, ವಿಶಾಲಾಕ್ಷಿ ಮಾಯಣ್ಣವರ್, ಪ್ರಸಾದ ಜೋಶಿ, ಎಸ್ ಎಂ ಪಟ್ಟಣಕರ್., ಸಿದ್ಧಾರಾಮ ಹಂಚನಾಳ ಸೇರಿದಂತೆ ಅನೇಕ ಕವಿಗಳು ಕವನ ವಾಚಿಸಿದರು.

ಪ್ರಮುಖರಾದ ವಿಶ್ವನಾಥ ತೊಟ್ನಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ರೇವಣಸಿದ್ದಪ್ಪಾ ಜೀವಣಗಿ, ಜ್ಯೋತಿ ಹಿರೇಮಠ, ಮಾಲಾ ದಣ್ಣೂರ, ವಿನೋದ ಜೇನವೇರಿ, ಬಸ್ವಂತರಾಯ ಕೋಳಕೂರ, ಶ್ರೀಕಾಂತ ಪಾಟೀಲ ದಿಕ್ಸಂಗಿ ಸೇರಿದಂತೆ ಅನೆಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here