ಯೋಗದಲ್ಲಿ ರೋಗ ನಿರೋಧಕ ಶಕ್ತಿ ಅಡಗಿದೆ: ಡಾ. ಹೊರಗಡೆ.

0
10

ಆಳಂದ: ಆಯುರ್ವೇದ ಔಷಧಿ ಉಪಚಾರದೊಂದಿಗೆ ಯೋಗದಲ್ಲಿ ರೋಗನಿರೋಧಕ ಶಕ್ತಿ ಅಡಗಿದೆ ಯೋಗವು ಆರೋಗ್ಯಕ್ಕೆ ಮದ್ದಾಗಿದ್ದು ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕಾರಣವಾಗಿದೆ ನಿತ್ಯ ಯೋಗಾಸನದಲ್ಲಿ ತೊಡಗುವುದು ಮುಖ್ಯವಾಗಿದೆ ಎಂದು ಆಯುಷ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಅಪ್ಪಾರಾವ್ ಅರಗಡೆ ಅವರು ಹೇಳಿದರು.

ಪಟ್ಟಣದ (ದ) ಬ್ರಿಜ್ ಆಂಗ್ಲಪ್ರೌಢ ಶಾಲೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಮನೆ ಅಂಗಳದಲ್ಲಿ ಯೋಗ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಒತ್ತಡದ ಬದುಕು ನಿವಾರಣೆಗಾಗಿ ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರು ಯೋಗವನ್ನು ರೂಡಿಸಿಕೊಳ್ಳಬೇಕು. ಅಂತರಾಷ್ಟ್ರೀಯ 9ನೇ ಯೋಗ ದಿನಾಚರಣೆಯ ಘೋಷವಾಕ್ಯದಂತೆ ಮನೆ ಅಂಗಳದಲ್ಲಿ ಯೋಗವನ್ನು ಅಡಿ ನಿರೋಗಿಯಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು ಅಲ್ಲದೆ ಆರೋಗ್ಯದ ಸದೃಢತೆಗೆ ಅನಾವಶ್ಯಕ ಮಾತ್ರೆ ಔಷಧಿಗಳನ್ನು ಸೇವಿಸದೆ ಆಯುರ್ವೇದ ಉಪಚಾರ ಮತ್ತು ಆಯುರ್ವೇದ ಔಷಧಿಗಳನ್ನು ಬಳಕೆಗೆ ಸೂಕ್ತವಾಗಿದೆ ಎಂದು ಹೇಳಿದರು.

ಪಟ್ಟಣದ ಹೈ ಪ್ಲೇಯರ್ ಇಲ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ದ. ಬ್ರಿಜ್ ಆಂಗ್ಲ ಪ್ರೌಢಶಾಲೆಯ ಅಧ್ಯಕ್ಷ ರಫೀಕಿ ನಾಮ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯೋಗವು ಮಾನಸಿಕ ಸದೃಢತೆಗೆ ಅನುಕೂಲವಾಗಿದೆ. ವೈದ್ಯರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಅಧ್ಯಯನದಲ್ಲಿ ಯೋಗ ಏಕಾಗ್ರತೆಯನ್ನು ತಂದುಕೊಡುತ್ತದೆ ಎಂದು ಅವರು ಹೇಳಿದರು.

ಯೋಗ ಶಿಕ್ಷಕ ದತ್ತಾತ್ರೇ ಬಿರಾದರ್ ಅವರು ಯೋಗದ ಪ್ರತ್ಯಕ್ಷತೆಯನ್ನು ತೋರಿಸಿ ಕೊಟ್ಟರು. ಗಣಿತ ಶಿಕ್ಷಕ ಪ್ರಶಾಂತ ರಾಥೋಡ್, ಶಿಕ್ಷಕಿ ಪ್ರತಿಭಾ ನಾಡ್ಕರ್, ರಬಾನ, ಆಯುಷ,್ಯ ಜ್ಯೋತಿ ಸೇರಿದಂತೆ ಮಕ್ಕಳು ಶಿಕ್ಷಕರು ಉಪಸಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here