ಅಕ್ಷರ ವೈಭವ

0
17

ಯುವಕವಿ ಸಂಗಮನಾಥ ಪಿ ಸಜ್ಜನ ರವರ ಚೊಚ್ಚಲ ಕವನ ಸಂಕಲನ ಅಕ್ಷರ ವೈಭವ ಇದು. ಕವಿಯ ಸ್ಪಂದನಾಶೀಲ ಮನಸ್ಸು ಇಲ್ಲಿನ ಕವನಗಳಲ್ಲಿ ಬದುಕು, ಅಕ್ಷರ, ದೇಶಭಕ್ತಿ, ನಾಡಭಕ್ತಿ, ತಾಯಿ ಪ್ರೇಮ, ಕಲ್ಯಾಣ ಕರ್ನಾಟಕದ ಜೀವನ, ಒಗ್ಗಟಿನ ಬದುಕನ್ನು ಪ್ರತಿಬಿಂಬಿಸುತ್ತವೆ. ಅಲ್ಲದೇ ಪುನೀತ್ ರಾಜಕುಮಾರ, ರವಿ ಬೆಳಗೆರೆ,ಬಸವಣ್ಣ ಮುಂತಾದ ವ್ಯಕ್ತಿಗಳ ಕುರಿತಾದ ಕವನಗಳು ಓದುಗರ ಮನ ಗೆಲ್ಲಲ್ಲಿವೆ.

ಕವಿಯ ನೂರಾರು ಭಾವನೆಗಳು ಸರಳ ಮತ್ತು ಸಾಮಾನ್ಯ ಭಾಷೆ ಯಲ್ಲಿ ವ್ಯಕ್ತವಾಗಿವೆ. ಆರದ ಹಣತೆ, ತೀರಿಸಲಾಗದ ಸಾಲ, ಆದದ್ದೆಲ್ಲಾ  ಒಳ್ಳೆಯದಕ್ಕೆ, ನಾ ಹ್ಯಾಂಗ ಮರಿಲ್ಲೆವ್ವ, ಕರುನಾಡ ಕುವರ, ಆಸೆಯೇ ಬಾಳು, ಎನ್ನೊಲುಮೆಯ ನಾಡು  ಮುಂತಾದ ಕವನಗಳ ಅಚ್ಚುಕಟ್ಟಾದ ಕವನ ಸಂಕಲನವಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶುಭ ಸಂದೇಶ ಬರೆದು ಹಾರೈಸಿದ್ದಾರೆ. ವಿಶೇಷವಾಗಿ ತಾಯಿಯೇ  ಈ ಕವನ ಸಂಕಲನಕ್ಕೆ ಬೆನ್ನುಡಿಯಲ್ಲಿ ಹರಸಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ಕವನ ಸಂಕಲನವಾಗಿದೆ.ಇದರ ಬೆಲೆ ೧೦೦ /- ಮಾತ್ರ. – ಶ್ರೀ ಶರಣು.ಬಿ.ಗದ್ದುಗೆ. ಕನ್ನಡ ಜಾಗ್ರತಿ ಮಾಜಿ ಸದಸ್ಯರು ಯಾದಗಿರಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here