ಎಸ್ ಬಿಐ ಬ್ಯಾಂಕ್ ನ 68ನೇ ಸಂಸ್ಥಾಪನಾ ದಿನಾಚರಣೆ

0
54

ವಾಡಿ: ಪಟ್ಟಣದ ಎಸ್‌ಬಿಐ ಬ್ಯಾಂಕ್ ನಲ್ಲಿ ಎಸ್ ಬಿಐ ಬ್ಯಾಂಕ್ ನ 68ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಅಥಿತಿ ಯಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ವೀರಣ್ಣ ಯಾರಿ ಎಸ್‌ಬಿಐ ಬ್ಯಾಂಕ್ ನಮ್ಮ ದೇಶದಲ್ಲೇ ಅತಿ ದೊಡ್ಡ ಶ್ರೀಮಂತ ಹಾಗು ನಮ್ಮ ಭರವಸೆಯ ಸರ್ಕಾರಿ ಬ್ಯಾಂಕ್ ಆಗಿದ್ದು, ಸುತ್ತಲಿನ ಗ್ರಾಮದ,ಮತ್ತು ನಮ್ಮ ವಾಡಿ ಪಟ್ಟಣದ ಜನರು ಹೆಚ್ಚಾಗಿ ಬ್ಯಾಂಕ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಬ್ಯಾಂಕ್ ಮೂಲಕ ಜನರು ತಮ್ಮ ವ್ಯಾಪಾರವನ್ನು, ಯುವಕರು, ಮಹಿಳೆಯರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ, ಅದರಲ್ಲಿ ನಾನು ಕೂಡ ಒಬ್ಬನು ಎಂದರು.

Contact Your\'s Advertisement; 9902492681

ಇಲ್ಲಿನ ಪ್ರಸಿದ್ಧ ಎಸಿಸಿ ಯ ಸಿಮೆಂಟ್ ಕಾರ್ಖಾನೆಯ ಹಾಗೂ ರೈಲ್ವೆ ಕಾರ್ಮಿಕರಿಗೆ ತುಂಬಾ ಅನೂಕಲವಾಗಿದೆ.
ಜನಸಾಮಾನ್ಯರ ಹೆಚ್ಚು ಹೆಚ್ಚಾಗಿ ಬ್ಯಾಂಕ್ ನ ಸವಲತ್ತುಗಳನ್ನು ಪಡೆದು ಉತ್ತಮ ಜೀವನ ಸಾಗಿಸಲು ಮುಂದಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಪಟ್ಟಣದ ವೈದ್ಯರಾದ ಡಾ ಇಂಗಳೇಶ್ವರ, ಡಾ ಗೊಂವಿದ್ ನಾಯಕ,ಡಿಎವಿ ಶಾಲೆಯ ಶಿಕ್ಷಕ ಶ್ಯಾಮ್ ಕಟ್ಟಾ,ವಿದ್ಯಾರ್ಥಿ ಮಹಮ್ಮದ್ ಮುಕ್ತಾದಿರ ಕೇಕ್ ಕತ್ತರಿಸುವ ಮೂಲಕ ಬ್ಯಾಂಕ್ ಡೇ ಆಚರಣೆಗೆ ಚಾಲನೆ ನೀಡಿದರು.

ನೂತನವಾಗಿ ಬ್ಯಾಂಕ್ ನ ವ್ಯವಸ್ಥೆಪಕರಾಗಿ ಆಗಮಿಸಿದ ಸ್ಥಳೀಯರಾದ ಅನಿಲ್ ದೊಡ್ಡಮನಿ ಅವರು ಮಾತನಾಡಿ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸದೃಢವಾಗಬೇಕಾದರೆ ಆ ಕುಟಂಬದ ಸದಸ್ಯರು ಬ್ಯಾಂಕು ಖಾತೆ ಹೊಂದಲೇ ಬೇಕು. ಇದರಿಂದ ಪ್ರತಿಯೊಬ್ಬರು ಜೀವನದಲ್ಲೂ ಆರ್ಥಿಕ ಶಿಸ್ತು ರೂಢಿಸಿಕೊಂಡಂತಾಗಿ ಹಣ ಉಳಿತಾಯವೂ ಸಾಧ್ಯವಾಗಿ, ಜೀವನದ ಮಟ್ಟ ಮೇಲಕ್ಕೇರುತ್ತದೆ. ಕೇಂದ್ರ ಸರ್ಕಾರ 2014ರ ಆಗಸ್ಟ್‌ 16ರಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ ಯೋಜನೆ ಇದಕ್ಕೆ ಪೂರಕ ವಾಗಿದೆ. ನಾವು ಕೂಡ ಜನರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಮತ್ತು ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದರು.

ಬ್ಯಾಂಕಿನ ಸಿಬ್ಬಂದಿಗಳಾದ ಶಿವಲೀಲಾ ಮೊಪಗಾರ, ಆಂಜನೇಯ , ಶಿವಕುಮಾರ ಪಾಟೀಲ,ಮೋನಿಕಾ, ಹರೀಶ್, ಕೆ ವಿಠಲ,ಪ್ರಕಾಶ ಚವ್ಹಾಣ,ಪ್ರಕಾಶ ಹುಗಾರ,ದತ್ತಾ ಸೂರ್ಯವಂಶಿ, ಪಟ್ಟಣದ ಪ್ರಮುಖರಾದ ಬಸವರಾಜ ಹಡಪದ, ರಾವುಲ ಸಿಂದಗಿ, ದೌಲತರಾವ ಚಿತ್ತಾಪುರಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here