ಸಮಾಜ ಸೇವೆ ಗುರುವಿನ ಪೂಜೆಯಾಗಲಿ

0
43

ಕಲಬುರಗಿ: ಎತ್ತರದ ಸ್ಥಾನದಲ್ಲಿ ಕುಳಿತುಕೊಳ್ಳವುದು, ಧಾರ್ಮಿಕ ಲಾಂಛನ ವಸ್ತ್ರಗಳನ್ನು ಧರಿಸುವುದು, ಹುಟ್ಟಿದ ಜಾತಿ, ಧರ್ಮದಿಂದ ಗುರುವಿನ ಸ್ಥಾನ ಲಭ್ಯವಾಗುವುದಿಲ್ಲ. ಬದಲಿಗೆ ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅರಿವು, ಆಚಾರ, ವಿಚಾರ, ಅನುಭಾವ, ಉನ್ನತ ವ್ಯಕ್ತಿತ್ವವನ್ನು ಹೊಂದಿ, ಸಮಾಜಕ್ಕೆ ತನ್ನದೇ ಆದ ನಿರಂತರವಾದ ಕೊಡುಗೆಯನ್ನು ನೀಡುವ ಮೂಲಕ ಗುರುವಿನ ಸ್ಥಾನ ಲಭ್ಯವಾಗುತ್ತದೆ. ಸಮಾಜ ಸೇವೆಯೇ ಗುರುವಿನ ನಿಜವಾದ ಪೂಜೆಯಾಗಬೇಕಾಗಿದೆ ಎಂದು ಬಿದ್ದಾಪುರ ಕಾಲನಿಯ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಅಭಿಪ್ರಾಯಪಟ್ಟರು.

ನಗರದ ಬಿದ್ದಾಪುರ ಕಾಲನಿಯ ಅಕ್ಕಮಹಾದೇವಿ ಆಶ್ರಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸಂಜೆ ತಮಗೆ ಏರ್ಪಡಿಸಲಾಗಿದ್ದ ‘ಗುರುವಂದನಾ ಸಮಾರಂಭ’ದಲ್ಲಿ ಗೌರವ ಸ್ವೀಕರಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

Contact Your\'s Advertisement; 9902492681

ವ್ಯಕ್ತಿಯಲ್ಲಿರುವ ಅರಿವನ್ನು ಜಾಗೃತಗೊಳಿಸಿ, ವ್ಯಕ್ತಿಯನ್ನು ಶಕ್ತಿಯನಾಗಿಸುವ ಕಾರ್ಯ ಗುರುವಿನದಾಗಿದೆ. ‘ಗುರು’ ಎಂದು ಕರೆಸಿಕೊಳ್ಳಬೇಕಾದರೆ ಕೇವಲ ಎತ್ತರದ ಸ್ಥಾನದಲ್ಲಿ ಕುಳಿತರೇ ಸಾಲದು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ನೋವಿಗೆ ಸ್ಪಂದಿಸುವ, ದೀನ-ದಲಿತರ, ಶೋಷಿತ, ಬಡವರ ಕಣ್ಣಿರನ್ನು ಒರೆಸುವ ಗುಣ ಹೊಂದಿರಬೇಕು. ಮಹಿಳೆಗೆ ಗುರುವಿನ ಸ್ಥಾನವನ್ನು ಕಲ್ಪಿಸಿದ ಬಸವಾದಿ ಶರಣರ ಕೊಡುಗೆ ಮರೆಯುವಂತಿಲ್ಲ. ಜಗತ್ತಿನ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಮಹಾತ್ಮ ಬಸವೇಶ್ವರ ಅವರು ‘ವಿಶ್ವ ಗುರು’ವಾಗಿದ್ದಾರೆ ಎಂದರು.

ಸೇವಾ ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಪೂಜ್ಯ ಪ್ರಭುಶ್ರೀ ತಾಯಿಯವರು ಸಮಾಜದ ಬಗ್ಗೆ ನಿಜವಾಗಿಯೂ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಶರಣ ತತ್ವವನ್ನು ತಮ್ಮ ಉಸಿರಾಗಿಸಿಕೊಂಡು ಸಾಜದಲ್ಲಿ ಜಾಗೃತಿಯ ಕಾರ್ಯ ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕಾದ್ದು ಅಗತ್ಯವಾಗಿದೆ. ನಮ್ಮ ಬಳಗ ಬಸವ ತತ್ವವನ್ನು ಅಳವಡಿಸಿಕೊಂಡಿರುವುದರಿಂದ ಬೇಧ-ಭಾವ ಮಾಡದೆ, ಪುರುಷ ಗುರುವಾಗಿರಬಹುದು ಅಥವಾ ಮಹಿಳಾ ಗುರುವಾಗಿರಬಹುದು ಎಲ್ಲರಿಗೂ ಸಮಾನವಾದ ಗೌರವ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಡಾ.ಸುನೀಲಕುಮಾರ ಎಚ್.ವಂಟಿ, ಸಹ ಕಾರ್ಯದರ್ಶಿ ಸೋಮಶೇಖರ ಬಿ.ಮುಲಗೆ, ಸದಸ್ಯರಾದ ಬಸಯ್ಯಸ್ವಾಮಿ ಹೊದಲೂರ, ಪರಮೇಶ್ವರ ಬಿ.ದೇಸಾಯಿ, ಶಿವಯೋಗಪ್ಪ ಬಿರಾದಾರ, ಸುಜಯ್ ಎಸ್.ವಂಟಿ, ಉಪನ್ಯಾಸಕಿ ರಂಜಿತಾ ಠಾಕೂರ್ ಪ್ರಮುಖರಾದ ಸಿ.ಟಿ.ಗೊಬ್ಬೂರಕರ್, ಪರಮೇಶ್ವರ ಪಾಟೀಲ್, ಈರಣ್ಣ ಪಾಟೀಲ್, ಸರಸ್ವತಿ ಸಂಗಮ್ಮ, ಸುನಂದಾ ಕರಜಗಿ, ಪದ್ಮಾವತಿ ರೆಡ್ಡಿ, ಚಂದ್ರಮ್ಮ ಅಡಕಿಕರ್, ಶಾಂತಮ್ಮ ಪತ್ತಾರ, ಪ್ರಗತಿ, ಪ್ರತೀಕ್ಷಾ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here