ಕಲಬುರಗಿ ಜಿಲ್ಲೆಗೆ ಬರಗಾಲ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ

0
28

ಕಲಬುರಗಿ; ಬರಗಾಲ ಘೋಷಿಸಿ, ಬರಗಾಲ ಕಾಮಗಾರಿ ಪ್ರಾರಂಭಿಸಿ ಹಾಗೂ MGNREGA ಯೋಜನೆ ಅಡಿಯಲ್ಲಿ 200 ದಿನ ಮಾನವ ದಿನಗಳ ಸೃಜನೆಗಾಗಿ ಕೃಷಿ ಕೂಲಿಕಾರರ ಕೂಲಿ ಕನಿಷ್ಠ 600 ಕೂಲಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ನಗರದ ತಿಮ್ಮಾಪೂರಿ ಸರ್ಕಲ್ ದಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಜಿಲ್ಲಾ ಪಂಚಾಯಿತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಅಲೆಯುವಂತಾಗಿದೆ. ಪುನಾ ಮಹಾನಗರಗಳಿಗೆ ಕಾರ್ಮಿಕರು ಕೆಲಸ ಅರಿಸಿ ಗುಳೆ ಹೋಗುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಬವಾಗಿದೆ. ಆದ್ದರಿಂದ ಕಲಬುರಗಿ ಜಿಲ್ಲೆ ಬರಪಡಿತ ಪ್ರದೇಶ ಎಂದು ಘೋಷಣೆ ಮಾಡಿ ಬರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ ಒತ್ತಾಯಿಸಿದರು.

Contact Your\'s Advertisement; 9902492681

ಮನರೇಗಾ ಕಾರ್ಮಿಕರ ಗುಳೆ ತಪ್ಪಿಸುವುದಕ್ಕೆ ಮನರೇಗಾ ಯೋಜನೆಯಡಿ ಬರಕಾಮಗಾರಿಗಳನ್ನು ಆರಂಭಿಸಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡಬೇಕು. ಮನರೇಗಾದಲ್ಲಿ 200 ಮಾನವ ದಿನಗಳು ಸೃಜನ ಮಾಡಬೇಕು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಡಿಯೊ ನೇಮಕಾತಿ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಜಿಲ್ಲಾ ಪಂಚಾಯಿತಿಗೆ ಕೊಡಬೇಕು ಎಂದು ಮನವಿ ಮಾಡಿದರು.

ಸೇಡಂ ತಾಲೂಕಿನ ಆಡಕಿ, ಹುಡಾ ಹಾಗೂ ಬಟಗೆರಿ ಪಂಚಾಯಿತಿ ಭೋವಿ ಕಾರ್ಮಿಕರಿಗೆ ಪಂಚಾಯಿತಿಯಲ್ಲಿ ಹೋಸ ಜಾಬ್ ಕಾರ್ಡ್ ವಿತರಿಸಿಬೇಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಅಭಿವೃದ್ಧಿ ಅಧಿಕಾರಿಗಳು ಹುದ್ದೆಗಳು ಭರ್ತಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು ಕೆಲಸ ಕೊಡಲಾರದೆ ಇದ್ದ ಸಮಯದಲ್ಲಿ ಮೇಲ್ಮನವಿ ಸಲ್ಲಿಸಿದ ನಿರುದ್ಯೋಗ ಭತ್ಯೆಗೆ ಒಂಬಡ್ಸ್ ಮಾನ ಆದೇಶ ಮಾಡಿದೆ ಕೋಡ್ಲಿ ಗ್ರಾಮ ಪಂಚಾಯಿತಿ ಮತ್ತು ಟೆಂಗಳಿ ಗ್ರಾಮ ಪಂಚಾಯಿತಿ ಡೋಣ್ಣುರು ಕಾರ್ಮಿಕರ ನಿರುದ್ಯೋಗ ಭತ್ಯೆ ಹಣ ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ಭಿಮಶೇಟ್ಟಿ ಯಂಪಳಿ, ಸಾಯಿಬಣ್ಣ ಗುಡುಬಾ, ಮಲ್ಲಮ್ಮ ಮಗಿ, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಜಾವೇದ್ ಹುಸೈನ್, ಸುಭಾಷ್ ಹೋಸಮನಿ, ಸಿದ್ದು ಹರವಾಳ, ಕಾಶಿನಾಥ್ ಬಂಡಿ, ಗುರು ಕೋಣಿನ, ಹನಿಫಾಬೆಗಂ ಕೋಡದುರು, ಜಾಫರ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here