ಕಲಬುರಗಿ: ಕಸಾಪದಿಂದ ಮನೆ-ಮನೆಗೆ ಕನ್ನಡ ಸಾಹಿತ್ಯ ಪರಿಷತ್ತ್ ಅಭಿಯಾನಕ್ಕೆ ಚಾಲನೆ

0
170

ಕಲಬುರಗಿ: ಕಸಾಪದಿಂದ ಒಂದು ಕೋಟಿ ಸದಸ್ಯರ್ವದ ಗರಿ ಹೊತ್ತಿರುವ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಆಶಯದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಶನಿವಾರ ಸಾಹಿತ್ಯಾಸಕ್ತರನ್ನು ಪರಿಷತ್ತಿನ ಸದಸ್ಯರನ್ನಾಗಿ ನೋಂದಣಿ ಮಾಡಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಸೇರಿದಂತೆ ಈ ನೆಲದ ಅಸ್ಮಿತೆಗಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತನ್ನಾಗಿ ರೂಪಿಸುವ ಉದ್ದೇಶದಿಂದ `ಮನೆ-ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು’ ಎಂಬ ಮಹಾಘೋಷವಾಕ್ಯದೊಂದಿಗೆ ಅಭಿಮಾನದ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದರು.

Contact Your\'s Advertisement; 9902492681

18 ವರ್ಷ ಮೇಲ್ಪಟ್ಟ ಕನ್ನಡ ಓದು-ಬರಹ ಬರುವ ಎಲ್ಲಾ ವರ್ಗದ ಜನರು ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಪರಿಷತ್ತಿಗೆ ಮತ್ತಷ್ಟು ಬಲ ತುಂಬಬೇಕು ಎಂದು ಹೇಳಿದ ತೇಗಲತಿಪ್ಪಿ, ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನಾಗಿ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಹಾಗಾಗಿ ಇದಕ್ಕೆ ಸರ್ವರೂ ಕೈಜೋಡಿಸಬೇಕೆಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ವಿನೋದ ಜೇನವೇರಿ, ರಾಜೇಂದ್ರ ಮಾಡಬೂಳ, ಶಿಲ್ಪಾ ಜೋಶಿ, ಶಿವಶರಣ ಹಡಪದ, ಬಸ್ವಂತರಾಯ ಕೋಳಕೂರ, ಪ್ರಭವ ಪಟ್ಟಣಕರ್, ಪದ್ಮಾವತಿ ನಾಯಕ್, ವೀರೇಂದ್ರಕುಮಾರ ಕೊಲ್ಲೂರ, ನಾಗಪ್ಪ ಎಂ.ಸಜ್ಜನ್, ಗುರುಬಸಪ್ಪ ಎಸ್.ಸಜ್ಜನಶೆಟ್ಟಿ, ಅನೀಲ ಮುಗಳಿ, ಹೆಚ್.ಎಸ್.ಬರಗಾಲಿ, ಬಸವರಾಜ ಹೆಳವರ್, ಶಿವಲಿಂಗಪ್ಪ ಅಷ್ಟಗಿ, ಚಂದ್ರಶೇಖರ ಮ್ಯಾಳಗಿ, ಡಾ. ಮಹೇಂದ್ರಕರ್, ಈರಣ್ಣಾ ಸೋನಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here