ಕಲಬುರಗಿ: ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ಸಂಘಟನಾ, ಜಿಲ್ಲಾ ಕಾರ್ಯಕಾರಿ ಸಮಿತಿ ರಚನೆ ಹಾಗೂ ಮುಂಬರುವ ದಿನಗಳಲ್ಲಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ರೂಪರೇಷೆ ಕುರಿತು ಚರ್ಚಿಸಲು ನಾಳೆ ರವಿವಾರ ಮಧ್ಯಾಹ್ನ 3 ಗಂಟೆಗೆ ನಗರದ ಜೇವರ್ಗಿ ಕಾಲೋನಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವೇದಿಕೆ ಸಂಚಾಲಕರಾದ ವೀರೇಶ್ ಕುಲಕರ್ಣಿ ಅವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಪ್ರ ಸಮಾಜ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುದಾನ ಒದಗಿಸಲು ಸರ್ಕಾರವನ್ನು ಒತ್ತಾಯಿಸಲು ನಿರ್ಣಯವನ್ನು ಕೈಗೊಳ್ಳಲಾಗುವುದು, ಕಲಬುರಗಿ ನಗರದ ಪ್ರತಿಯೊಂದು ವಾರ್ಡುಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಹಾಗೂ ಜಿಲ್ಲೆಯ 25ಕ್ಕೂ ಹೆಚ್ಚು ವಿವಿಧ ವಿಪ್ರ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ.
ಸಭೆಯಲ್ಲಿ ಪ್ರಮುಖರಾದ ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ, ಉದ್ಯಮಿ ಕೃಷ್ಣ ಜಿ ಕುಲಕರ್ಣಿ, ಪಿ ಹೆಚ್ ಕುಲಕರ್ಣಿ ಬಿ.ವಿ ಮಾಡ್ಯಳಕರ್, ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಶ್ರೀನಿವಾಸ್ ಸಿರನೂರಕರ್, ಶೇಷಮೂರ್ತಿ ಅವಧಾನಿ,ರಾಜ್ಯ ಸಮಿತಿಯಿಂದ ಶ್ರೀಯುತ ವಿನುತ ಜೋಶಿ ರಾಜ್ಯ ಸಂಘಟನಾ ಕಾರ್ಯದರ್ಶಿಯವರು ಸೇರಿದಂತೆ ಹಲವಾರು ವಿಪ್ರ ಮುಖಂಡರು ಭಾಗವಹಿಸಲಿದ್ದಾರೆ ಕಲಬುರಗಿ ನಗರದ ಎಲ್ಲಾ ವಿಪ್ರಬಾಂಧವರು ರವಿವಾರ ನಡೆಯುವ ಸಭೆಗೆ ಆಗಮಿಸಬೇಕೆಂದು ಸಂಚಾಲಕರು ಮನವಿ ಮಾಡಿದ್ದಾರೆ.