ದಿ.ಚಂದ್ರಶೇಖರ ಪಾಟೀಲ ದೇಶಭಕ್ತಿ, ಹೋರಾಟ ಮನೋಭಾವ ಅಳವಡಿಸಿಕೊಳ್ಳಲು ಅಮರನಾಥ ಪಾಟೀಲ ಕರೆ

0
130

ಕಲಬುರಗಿ: ತಮ್ಮ ಸ್ವಾರ್ಥ ಜೀವನವನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿ ಮತ್ತು ವಿಮೋಚನಾ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ ದಿ.ಚಂದ್ರಶೇಖರ ಪಾಟೀಲ ಅವರ ದೇಶಭಕ್ತಿ ಮತ್ತು ನಿಸ್ವಾರ್ಥ ಹೋರಾಟ ಮನೋಭಾವ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಕರೆ ನೀಡಿದರು.

ಬುದುವಾರ ಕಮಲಾಪೂರ ತಾಲೂಕಿನ ಮಹಾಗಾಂವ ಕ್ರಾಸ್ ನ ಸಮೀಪ ಸಿದ್ದಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪೂರ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ ಇರಬೇಕು ಇಂಥವರು ಮಹಾಗಾಂವದ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಚಂದ್ರಶೇಖರ ಪಾಟೀಲ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ತರುಣ ಸಂಘ ರಚನೆ ಮಾಡಿ ಮಹಾಗಾಂವನಲ್ಲಿ ಓಂ ಧ್ವಜಾರೋಹಣ ಮಾಡಿ,ಹೋರಾಟಕ್ಕೆ ಅಣಿಯಾಗಿದ್ದರು. ಇವರ ನಿಸ್ವಾರ್ಥ ಸೇವೆ,ದೇಶ ಭಕ್ತಿಯ ಫಲವಾಗಿ ಸ್ಮರಣಾರ್ಥವಾಗಿ ರಚನೆಗೊಂಡಿರುವ ದಿ.ಚಂದ್ರಶೇಖರ ಪಾಟೀಲ ಮೆಮೊರಿಯಲ್ ಟ್ರಸ್ಟ್ ಗೆ ರಾಜ್ಯ ಗಣ್ಯ ನಾಯಕರಾದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರು ಸದಸ್ಯರಾಗಿದ್ದರು.ಕಲಬುರಗಿ ನಗರದಲ್ಲಿ ಇರುವ ಜಿಲ್ಲಾ ಕ್ರೀಡಾಂಗಣ ಮಹಾಗಾಂವ ಸಮೀಪ ಗಂಡೋರಿ ಜಲಾಶಯಕ್ಕೆ ಅವರ ಹೆಸರಿಡಲಾಗಿದೆ ಎಂದರು. ಗ್ರಾಮೀಣ ಕಾಂಗ್ರೆಸ್ ಮುಖಂಡ ಡಾ.ರವಿ ಚವ್ಹಾಣ ಮಾತನಾಡಿ,ಹೈದ್ರಾಬಾದ್ ನಿಜಾಮನ ದೌರ್ಜನ್ಯದ ವಿರುದ್ಧ ಚಂದ್ರಶೇಖರ ಪಾಟೀಲ ನಿರಂತರ ಹೋರಾಟ ಮಾಡಿ ಹೈಕವನ್ನು ವಿಮೋಚನಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮುಂಬರುವ ದಿನಗಳಲ್ಲಿ ಸರಕಾರ ಅವರ ಜೀವನ ಚರಿತ್ರೆ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು.ಈ ಕುರಿತು ಸರಕಾರದ ಮೇಲೆ ಒತ್ತಡ ಹೇರೋಣ ಎಂದರು.

ಸಿದ್ದಭಾರತಿ ವಿದ್ಯಾಮಂದಿರ ಶಾಲೆಯ ಕಾರ್ಯದರ್ಶಿ ಕಲ್ಯಾಣರಾವ ಬುರ್ಜಕೆ ಅಧ್ಯಕ್ಷತೆ ವಹಿಸಿದ್ದರು.ಕಸಾಪ ಕಮಲಾಪೂರ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಅವರು ಆಶಯ‌ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ಜಯಶ್ರೀ ಮತ್ತಿಮಡು,ಜಿಪಂ ಮಾಜಿ ಸದಸ್ಯ ಶಿವಶೆಟ್ಟಿ ಪಾಟೀಲ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರಾಜೇಂದ್ರ ಮಾಡಬೂಳ,ಗಣೇಶ ಚಿನ್ನಾಕಾರ,ತಾಲೂಕು ವೀರಶೈವ ಲಿಂಗಾಯತ ಧರ್ಮದ ಅಧ್ಯಕ್ಷ ಶಶಿಧರ ಮಾಕಾ, ಮಹಾಗಾಂವ ಕಸಾಪ ಅಧ್ಯಕ್ಷ ಅಂಬಾರಾಯ ಮಡ್ಡೆ, ಪ್ರಾಂಶುಪಾಲ ಚಂದನಸಿಂಗ,ಕೃಷ್ಣಪ್ಪ ಒಡೆಯರಾಜ, ಶಿವಪ್ಪ ಚಿಂಚೋಳಿ,ನಾಗೇಶ ದಮ್ಮೂರ,ವೈಜನಾಥ ಜಮಾದಾರ, ರಾಜೇಂದ್ರ, ಕೋಶಾದ್ಯಕ್ಷ ನಾಗಣ್ಣಾ ವಿಶ್ವಕರ್ಮ,ಸಂಘಟನಾ ಕಾರ್ಯದರ್ಶಿಗಳಾದ ಆನಂದ ವಾರಿಕ,ಚೇತನ ಡಬರಾಬಾದ,ಮಹಿಳಾ ಪ್ರತಿನಿಧಿ ಕಸ್ತೂರಿಬಾಯಿ ರಾಜೇಶ್ವರ,ಪರಿಶಿಷ್ಟ ಜಾತಿ ಪ್ರತಿನಿಧಿ ಮಲ್ಲಿನಾಥ ಅಂಬಲಗಿ,ಹಿಂದುಳಿದ ಪ್ರತಿನಿಧಿ ಸಂಜಯಕುಮಾರ ನಾಟೀಕಾರ,ಅಲ್ಪಸಂಖ್ಯಾತ ಪ್ರತಿನಿಧಿ ಫಯಾಜ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here