ಬೈಕ್ ಕಳ್ಳತನ ಆರೋಪಿ ಬಂಧನ; ಪೊಲೀಸ್ ಕಾರ್ಯಚರಣೆಗೆ ಎಸ್ಪಿ ಶ್ಲಾಘನೀಯ

0
31

ಕಲಬುರಗಿ: ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಾಡಿ-ಚಿತ್ತಾಪುರ ಪೆÇಲೀಸರು ಬಂಧಿಸಿದ್ದಾರೆ. ಕಳ್ಳತನ ಪ್ರಕರಣದಲ್ಲಿ ರಫೀಕ್ ಎನ್ನುವ ಮುಖ್ಯ ಆರೋಪಿಯನ್ನು ಬಂಧಿಸಲಾಗಿದ್ದ, ಮೂಲತ ಕಲಬುರಗಿ ಜಿಲ್ಲೆಯ ನಿವಾಸಿಯಾಗಿದ್ದಾನೆ ಎಂದು ಎಸ್ಪಿ ಇಶಾ ಪಂತ್ ಮಾಹಿತಿ ನೀಡಿದರು.

ಈ ಕುರಿತು ವಾಡಿ ಠಾಣೆಗೆ ಭೇಟಿ ನೀಡಿದ ಕಲಬುರ್ಗಿ ಎಸ್ಪಿ ಇಶಾ ಪಂತ್, ಯಾದಗಿರಿ ಜಿಲ್ಲೆಯ ವಿವಿಧಡೆ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುವುದನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದಾನೆ. ಆರೋಪಿಯಿಂದ ಒಟ್ಟು 30 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಹಿಂದೆ ಇರುವ ತಂಡವನ್ನು ಸಹ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಆಸ್ಪತ್ರೆ, ಬಸ್ ಸ್ಟ್ಯಾಂಡ್ ಹಾಗೂ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ತನ್ನ ನಕಲಿ ಕೀ ಬಳಸಿ ತೆಗೆದುಕೊಂಡು ಹೋಗುತ್ತಿದ್ದ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕೃಗೆತ್ತಿಕೊಂಡ ಸ್ಥಳೀಯ ಪೊಲೀಸ್ರು ಆರೋಪಿಯನ್ನು ಸೇರೆ ಹಿರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ್ ಈ ಭರ್ಜರಿ ಕಾರ್ಯಕ್ಕೆ ಎಸ್ಪಿ ಇಶಾ ಪಂತ್ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರು ಹಾಗೂ ವಾಡಿ ಪಿಎಸ್ಐ ಮಹಾಂತೇಶ ಪಾಟೀಲ ಅವರ ನೇತೃತ್ವದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

ವಾಡಿ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶಿವಕಾಂತ ಕಮಲಾಪುರ, ಇಎಸ್ಐ ಚನ್ನಮಲ್ಲಪ್ಪ ಪಾಟೀಲ, ವಿಶೇಷ ಪೇದೆ ಲಕ್ಷ್ಮಣ ತಳಕೇರಿ, ಶೇಖ ಮಹೆಬೂಬ್, ಕ್ರೈಂ ವಿಭಾಗದ ಪೇದೆಗಳಾದ ಕೊಟ್ರೇಶಿ, ವಿಶ್ವನಾಥ ಹೂಗಾರ, ಅಂಕುಶ ಕಾಶಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here