58 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ/ ಎಚ್ಚರಿಕೆಗೂ ಕಿವಿಗೊಡದಿದ್ದರೆ ದಂಡ

0
20

ಶಹಾಬಾದ: ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ವಿರುದ್ಧ ದಂಡ ಪ್ರಯೋಗದ ಎಚ್ಚರಿಕೆ ನೀಡಿದ್ದ ಶಹಾಬಾದ ನಗರಸಭೆ ಇದೀಗ ಅಧಿಕೃತವಾಗಿ ಕಾರ್ಯಾಚರಣೆಯನ್ನೂ ಆರಂಭಿಸಿದೆ. ಈವರೆಗೆ ಮೊದಲ ಹಂತದ ಪ್ರಯತ್ನವಾಗಿ ನಿμÉೀಧಿತ ಪ್ಲಾಸ್ಟಿಕ್ ಬಳಸಬೇಡಿ, ಮಾರಾಟ ಮಾಡಬೇಡಿ ಎಂದು ಜನರು, ವರ್ತಕರಲ್ಲಿ ಜಾಗೃತಿ ಮೂಡಿಸುತ್ತಿದ್ದ ನಗರಸಭೆ ಅಧಿಕಾರಿಗಳು ದಾಳಿ ಮೂಲಕ ಕ್ರಮಕ್ಕೆ ಮುಂದಾಗಿದ್ದಾರೆ.

ಅದರಂತೆ ಈ ಹಿಂದೆ ಕರಪತ್ರಗಳ ವಿತರಣೆ, ಬ್ಯಾನರ್ ಅಳವಡಿಕೆ, ಆಟೋಗಳಲ್ಲಿ ಧ್ವನಿ ಪ್ರಚಾರದ ಮೂಲಕ ನಿμÉೀಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮತ್ತು ಮಾರಾಟ ಮಾಡದಂತೆ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಗರಸಭೆ ಮಾಡುತ್ತಿತ್ತು. ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನಗಳಲ್ಲೂ ಮೈಕ್‍ನಲ್ಲಿ ಪ್ಲಾಸ್ಟಿಕ್ ನಿμÉೀಧದ ಬಗ್ಗೆ ಮಾಹಿತಿ ಪ್ರಸಾರ ಮಾಡಲಾಗುತ್ತಿತ್ತು. ಆದಾಗ್ಯೂ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಯಂತ್ರಣಕ್ಕೆ ಬಂದಿರಲಿಲ್ಲ.

Contact Your\'s Advertisement; 9902492681

ಈ ಹಿನ್ನೆಲೆಯಲ್ಲಿ ನಿμÉೀಧಿತ ಪ್ಲಾಸ್ಟಿಕ್ ಕವರ್‍ಗಳನ್ನು ಮಾರಾಟ ಮಾಡುತ್ತಿದ್ದ ಹೋಲ್‍ಸೇಲ್ ಅಂಗಡಿಗಳು ಮತ್ತು ಪ್ರಾವಿಷನ್ ಸ್ಟೋರ್‍ಗಳ ಮೇಲೆ ನಗರಸಭೆ ಅಧಿಕಾರಿಗಳು ನಾಲ್ಕು ದಿನಗಳಿಂದ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ನಗರಸಭೆ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ನೇತೃತ್ವದಲ್ಲಿ ಸಿಬ್ಬಂದಿಯು ನಿμÉೀಧಿತ ಪ್ಲಾಸ್ಟಿಕ್ ಕವರ್‍ಗಳನ್ನು ಮಾರಾಟ ಮಾಡುತ್ತಿದ್ದ ನಗರದ ಅಂಗಡಿಗಳು, ಮೇಲೆ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಅಂಗಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ನಿμÉೀಧಿತ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಕವರ್‍ಗಳು, ಪ್ಲಾಸ್ಟಿಕ್ ಲೇಪನವಿರುವ ಪೇಪರ್ ಕಪ್‍ಗಳು, ಬ್ಯಾಗ್‍ಗಳು, ಪ್ಲಾಸ್ಟಿಕ್ ಕಪ್‍ಗಳು, ಲೋಟಗಳು, ಟೇಬಲ್ ಮೇಲೆ ಹಾಸುವ ಪ್ಲಾಸ್ಟಿಕ್ ಹಾಳೆಗಳನ್ನು ಸೇರಿ 58 ಕೆಜಿ ವಶಕ್ಕೆ ಪಡೆಯಲಾಯಿತು.

ಇದೊಂದು ಅವಕಾಶ ಕೊಡಿ. ಮುಂದೆ ಯಾವುದೇ ಕಾರಣಕ್ಕೂ ನಿμÉೀಧಿತ ಪ್ಲಾಸ್ಟಿಕ್ ಕವರ್‍ಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಂಗಡಿ ಮಾಲೀಕರು ಪೌರಾಯುಕ್ತರಿಗೆ ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಅಶೋಕ ಬಿಲಗುಂದಿ, ತಾವು ಮೊದಲ ಬಾರಿಗೆ ದಾಳಿ ನಡೆಸಿರುತ್ತಿರುವುದರಿಂದ ದಂಡದಿಂದ ವಿನಾಯಿತಿ ನೀಡುತ್ತೆನೆ. ಆದರೆ, ವಶಪಡಿಸಿಕೊಂಡಿರುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಆದರೆ, ಮುಂದೆ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ಮಾರಾಟ ಮಾಡಬೇಡಿ. ಮಾರಾಟ ಮಾಡಲು ಪ್ರಯತ್ನಿಸಿದರೆ ದಂಡ ಹಾಕಲಾಗುತ್ತದೆ. ಪರಿಸರ ಸಂರಕ್ಷಣಾ ಕಾಯಿದೆಯಡಿ ದಾವೆ ಹೂಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅನೀಲ ಹೊನಗುಂಟಿಕರ್,ಹುಣೇಶ ದೊಡ್ಡಮನಿ,ಜಾನ್, ಪ್ರವೀಣ, ನಿರಂಜನ್, ಬಲಬೀಮ, ಅರ್ಜುನ, ವಿಜಯಕುಮರ ಹಾಗೂ ಪೌರಕಾರ್ಮಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here