ಬರಗಾಲ ಘೋಷಿಸಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೌಲಭ್ಯ ನೀಡಲು ಸಿಪಿಐಎಂ ಆಗ್ರಹ

0
36

ಕಲಬುರಗಿ; ಜಿಲ್ಲೆಯನ್ನು ಬರಗಾಲ ಘೋಷಣೆ, ಮನರೇಗಾ ಹೆಚ್ಚುವರಿ 100 ದಿನಗಳಿಗೆ ಆಗ್ರಹಿಸಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಸೌಲಭ್ಯಗಳಿಗಾಗಿ ಮತ್ತಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ಜಗತ್ ವೃತ್ತದಿಂದ ಜಿಲ್ಲಾ ಪಂಚಾಯತ ಕಚೇರಿಗೆ ಮೆರವಣಿಗೆ ನಡೆಸುವ ಮೂಲಕ ಆಗ್ರಹಿಸಿದರು.

ಈ ಬಾರಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಬಿಸಿಲು ಕೇಕೆ ಹಾಕುತ್ತಿದೆ. ‌ನೀರು ಬತ್ತಿ ಹೋಗಿದೆ. ಹೊಲಗಳಲ್ಲಿ ಬೀಜ ಬಿತ್ತಲಾಗದೆ ಬಿಕೊ ಎನ್ನುತ್ತಿವೆ. ರೈತರು, ಕೂಲಿಕಾರ್ಮಿಕರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶವಂತೂ ಇನ್ನಿಲ್ಲದಂತೆ ತಲ್ಲಣ, ಸಂಕಟ ಎದುರಿಸುತ್ತಿದೆ. ಜನ ಜಾನುವಾರು ಬರದ ಛಾಯೆಗೆ ನಲುಗಿ ಹೋಗುತ್ತಿದ್ದಾರೆ. ಬಾಳುವೆಯ ದಿನದ ಖರ್ಚಿಗೂ ಹಣವಿಲ್ಲದಾಗಿದೆ. ಗುಳೆ ಹೋಗುವ ಪ್ರಕ್ರಿಯೆ ಹೆಚ್ಚುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.

Contact Your\'s Advertisement; 9902492681

ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಆರಂಭಿಸಬೇಕು, ಎರಡುನೂರು (200) ದಿನಗಳಿಗೆ ಮನರೇಗಾ ಕೆಲಸದ ದಿನಗಳನ್ನು ವಿಸ್ತರಿಸಿ,  ಕೂಲಿಯನ್ನು ಏಳು ನೂರು ರೂಪಾಯಿಗೆ ಹೆಚ್ಚಿಸಬೇಕು. ನಗರದಲ್ಲಿಯೂ ಉದ್ಯೋಗ ಖಾತ್ರಿ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು, ತಕ್ಷಣಕ್ಕೆ ಕೂಲಿಗಾಗಿ ಕಾಳುವಿನಂತಹ ಯೋಜನೆ ರೂಪಿಸಿ ಉದ್ಯೋಗ ಸೃಷ್ಟಿಸಬೇಕು. ಜಾನುವಾರುಗಳಿಗೆ ಹುಲ್ಲು ನೀರಿನ ವ್ಯವಸ್ಥೆ ಮಾಡಬೇಕು.  ಕಾಯಕ ಬಂಧುಗಳ ಕೆಲಸದ ಹೆಚ್ಚುವರಿ ಕೂಲಿ ರೂ.4-ರೂ.5 ಅನ್ನು ಪಾವತಿ, ಮನರೇಗಾ ಕೆಲಸದ ಬಾಕಿಯನ್ನು ಕೂಡಲೆ ವಿತರಿಸಬೇಕು. ಮನರೇಗಾ ಕೆಲಸ ಕೊಡುವಲ್ಲಿ ವಿಳಂಬ ಮಾಡುತ್ತಿರುವ ಮತ್ತು ನಿರಾಕರಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಪಾಂಡುರಂಗ ಮಾವಿನಕರ್ ಒತ್ತಾಯಿಸಿದರು.

ಅನೇಕ ಗ್ಯಾರಂಟಿಗಳ ಕಾರಣದಿಂದ ಜನತೆಗೆ ತುಸು ನೆಮ್ಮದಿ ದೊರೆಯಲು ಸಾಧ್ಯವಿದ್ದು, ಆದಾಗ್ಯೂ ಜನರು ಬಡತನದಿಂದ ನರಳುತ್ತಿದ್ದಾರೆ.  ಮಕ್ಕಳ ಶಾಲಾ ಕಾಲೇಜು ಬದಲಿಗೆ ದುಡಿಮೆಗೆ ಹೋಗುವುದು ಅನಿವಾರ್ಯವಾಗುತ್ತಿದೆ. ಇದು ಹೆಚ್ಚು ನೋವು ತರುವ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿಯು ಆಸರೆಯಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ಮನರೇಗಾದಡಿ ಕೆಲಸ ಕೊಡುತ್ತಿಲ್ಲ. ಕೂಡಲೇ ಜಿಲ್ಲೆಯಾದ್ಯಂತ ಮನರೇಗಾ ಕಾಮಗಾರಿ ಆರಂಭಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತ್ ಸಿಇಓ ಮೂಲಕ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಸುಧಾಮ ಧನ್ನಿ, ಡಾ. ಪ್ರಭು ಖಾನಾಪುರೆ, ಪದ್ಮಿನಿ ಕಿರಣಗಿ, ಇಂದುಮತಿ ದೇಗಾಂವ, ಚಂದಮ್ಮ ಗೋಳಾ ಸೇರಿದಂತೆ ಹೋರಾಟ ನಿರತ ಸಂಘಟಕರು ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here