ಸಸಿ ಹಂತದಲ್ಲಿಬೆಳಗಳ ರೋಗ ನಿರ್ವಹಣೆ

0
199

ಕಲಬುರಗಿ; ಜಿಲ್ಲೆಯ ಕಾಳಜಿ, ಕಮಲಾಪೂರ, ಚಿಂಚೋಳಿ ಭಾಗದಲ್ಲಿ ಈ ಹಿಂದೆ ಅಲ್ಪ ಮಳೆಯಾಗಿದ್ದು ಬಿತ್ತನೆಯಾದ ತೊಗರಿ ಸಸಿಗಳು 12-15 ದಿನಗಳ ಅವದಿಯಲ್ಲಿ ಸಸಿಗಳು ಅಲಲ್ಲಿ ಸೊರಗುತ್ತಿವೆ.

ಆರಂಭಿಕ ಹಂತದಲ್ಲಿ ಮುಂಗಾರು ಮಳೆ ಒಂದು ತಿಂಗಳ ಇಪ್ಪತ್ತು ದಿನ (50 ದಿವಸಗಳು) ತಡವಾಗಿದ್ದು, ಜುಲೈ 17ಕ್ಕೆ ತಲುಪಿದರೂ ತೇವಾಂಶದ ಕೊರತೆ ಕಪ್ಪು ಮಣ್ಣಿನಲ್ಲಿ ಕಂಡು ಬಂದಿದೆ. ಅಫಜಲಪೂರ, ಆಳಂದ, ಕಲಬುರಗಿ ಭಾಗದಲ್ಲಿ ಬೆಳೆದ ಕಬ್ಬು ಕೂಡಾ ಬಾವಿ ಮತ್ತು ಕೊಳವೆ ಬಾವಿಯಲ್ಲಿ ನೀರಿನ ಕೊರತೆಯಿಂದಾಗಿ ಅಲಲ್ಲಿ ಗರಿಗಳು ಒಣಗದಂತೆ ಒಣಗುತ್ತಿವೆ. ಇದ್ದ ಕಬ್ಬು ಸಂರಕ್ಷಣೆಗಾಗಿ ರೈತರು ಎರೆಜಲ, ನೀರಿನಲ್ಲಿ ಕರುಗುವ ಎನ್.ಪಿ.ಕೆ 5 ಮೀಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಿದ್ದಾರೆ. ಇತ್ತ ಆರಂಭಿಕ ಅಲ್ಪ ಮಳೆಗೆ ಶಂಕದ ಹುಳು, ಗೊಣ್ಣೆ ಹುಳು, ಎಲೆಕತ್ತರಿಸುವ ಹುಳಗಳ ಕಾಟವು ವಿವಿಧ ಬೆಳೆಗಳಲ್ಲಿ ಕಂಡು ಬಂದಿದೆ.

Contact Your\'s Advertisement; 9902492681

ನೆಟ ರೋಗ ಕಂಡು ಬಂದಲ್ಲಿ ಟ್ರೈಕೋಡರ್ಮಾ 5 ಗ್ರಾ ಅಥವಾ ಕಾರ್ಬನ್ ಡೈಜಿಂ 2 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡ ಮತ್ತು ಬೇರು ಭಾಗ ನೆನೆಯುವಂತೆ ಸಿಂಪಡಿಸಬೇಕು. ಗ್ರಾಮದಿಂದ ಗ್ರಾಮಕ್ಕೆ, ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾಗೂ ಒಚಿದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಟ್ಟ ಮೂಡ ವಿದ್ದರೂ ಮಳೆಯ, ಹವಾಮಾನ ಬದಲಾವಣೆ ವೈಪ್ಯರಿತ್ಯ ಹೆಚ್ಚಾಗಿ ಕಂಡು ಬಂದಿದೆ. ಬಂಜರು ಭೂಮಿ ಪ್ರದೇಶದಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದಲ್ಲಿ ಅರಣ್ಯ ಕೃಷಿ, ಹಣ್ಣಿನ ಗಿಡಗಳನ್ನು, ವನಮಹೋತ್ಸವ ಜಾಗೃತಿ ಜನತೆಯಲ್ಲಿ ಮೂಡಬೇಕಾಗಿದೆ.

ಟಮ್ಯಾಟೋ, ಬದನಿ, ಬೆಂಡೆಕಾಯಿ, ಮೇಣಸಿನಕಾಯಿ, ಚವಳಿಕಾಯಿ, ಸವತೆಕಾಯಿ, ಹೀರೆಕಾಯಿ ಬೆಳೆದ ನೀರಾವರಿ ರೈತರು ರಸ ಹೀರುವ ಕೀಟ ನಿಯಂತ್ರಣಕ್ಕೆ ಹಳದಿ ಮೋಹಕ ಅಂಟು ಬಲೆ ಎಕರೆಗೆ 10 ಅಳವಡಿಸಬೇಕು. ಬೇವಿನ ಎಣ್ಣೆ 2 ಮಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸದಲ್ಲಿ ಕೀಟಗಳಿಂದ ಪ್ರಸಾರವಾಗುವ ವೈರಸ್ಸ ರೋಗವನ್ನು ಕಡಿಮೆ ಮಾಡಬಹ್ಮದೆಂದು ಕೆವಿಕೆ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಹಾಗೂ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ರವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here