ಸರಕಾರದ ಯೋಜನೆಗಳ ಪಡೆಯಲು ಕಟ್ಟಡ ಕಾರ್ಮಿಕರು ಸಂಘಟಿತರಾಗಿ

0
16
  • ರುಕ್ಮಾಪುರ ಜಿವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶ

ಸುರಪುರ: ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರಿಗಾಗಿ ಸರಕಾರ ಹೊರ ತಂದಿರುವ ಯೋಜನೆಗಳನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕರು ಸಂಘಟಿತರಾಗುವುದು ಮುಖ್ಯವಾಗಿದೆ ಎಂದು ಕಾರ್ಮಿಕ ನಿರೀಕ್ಷಕ ವಿಜೇಂದ್ರ ತಿಳಿಸಿದರು.

ತಾಲೂಕಿನ ರುಕ್ಮಾಪುರ ಗ್ರಾಮದ ಜಿವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ಸಂಯೋಜನೆಯ ಕಟ್ಟಡ ನಿರ್ಮಾಣ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರಥಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ,ಕಟ್ಟಡ ಕಾರ್ಮಿಕರಿಗೆ ಸರಕಾರ ನೀಡಿರುವ ಸೌಲಭ್ಯಗಳು ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯಬೇಕಿದೆ,ಆ ನಿಟ್ಟಿನಲ್ಲಿ ಯಾರಾದರೂ ಕಟ್ಟಡ ಕಾರ್ಮಿಕರಲ್ಲದವರು ಇಲಾಖೆಯ ಗುರುತಿನ ಚೀಟಿ ಪಡೆದಿದ್ದರೆ ಕೂಡಲೇ ಹಿಂದಿರುಗಿಸಿ, ಇಲ್ಲವಾದಲ್ಲಿ ನಕಲಿ ಕಾರ್ಮಿಕರು ಗುರತಿನ ಚೀಟಿ ಪಡೆದುಕೊಂಡಿದ್ದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು,ಅಲ್ಲದೆ ನೈಜ ಕಟ್ಟಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ತಪ್ಪದಂತೆ ತಲುಪಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ ತುಮಕೂರ ಮಾತನಾಡಿ,ಎಐಟಿಯುಸಿ ಸಂಘಟನೆ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1921 ರಲ್ಲಿ ಆರಂಭಗೊಂಡಿದ್ದು ಇಂದಿನವರೆಗೂ ದೇಶದಲ್ಲಿನ ಕಾರ್ಮಿಕರ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.ಇದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಆಗಿದ್ದು ಇದು ಯಾವುದೇ ಪಕ್ಷವಲ್ಲ ಇದೊಂದು ಕಾರ್ಮಿಕರ ಸಂಘಟನೆಯಾಗಿದೆ,ದೇಶದಲ್ಲಿ ಕಾರ್ಮಿಕರಿಗಾಗಿ ಕಾನೂನು ರೂಪಗೊಳ್ಳುವಲ್ಲಿ ಎಐಟಿಯುಸಿ ಕೊಡುಗೆ ದೊಡ್ಡದಿದೆ ಎಂದರು,ಅಲ್ಲದೆ ರಾಜ್ಯದಲ್ಲಿ 2006 ರಲ್ಲಿ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ದೊರೆಯಲು ಕಾನೂನು ಜಾರಿಗೊಳ್ಳಲು ಎಐಟಿಯುಸಿ ಶ್ರಮವಹಿಸಿದ್ದರಿಂದ ಇಂದು ಲಕ್ಷಾಂತರ ಕಾಮಿಕರು ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ,ಇಂದು ಪ್ರಥಮವಾಗಿ ಸಮಾವೇಶವನ್ನು ಹಮ್ಮಿಕೊಂಡು ಕಾರ್ಮಿಕರ ಜಾಗೃತಿ ಆರಂಭಿಸಲಾಗಿದ್ದು,ಮುಂಬರುವ ದಿನಗಳಲ್ಲಿ ತಾಲೂಕು ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲ ಕಾರ್ಮಿಕರನ್ನು ಒಂದಾಗಿಸುವ ಕಾರ್ಯ ಮಾಡಲಿದೆ ಎಂದರು.ಇದೇ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷಳಾದ ಕಲ್ಪನಾ ಗುರುಸುಣಗಿ,ಪಿಡಿಓ ಸಂಗೀತಾ ಸಜ್ಜನ್,ತಿಮ್ಮಣ್ಣ ಗಂಗಾವತಿ,ಹಣಮೆಗೌಡ ದಳಪತಿ ಸೇರಿದಂತೆ ಅನೇಕರು ಮಾತನಾಡಿದರು.

ಇದೇ ಸಂದರ್ಭದಲ್ಲಿ ರುಕ್ಮಾಪುರ ಹೋಬಳಿಯ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಅಲ್ಲದೆ ಅನೇಕ ಜನ ಕಾರ್ಮಿಕರಿಗೆ ಗುರುತಿನ ಚೀಟಿಗಳ ವಿತರಣೆ ನಡೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ ವಹಿಸಿದ್ದರು.

ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ಗುರಸುಣಗಿ,ತಿಮ್ಮಣ್ಣ ಆದೋನಿ ಗಂಗಾವತಿ,ಗ್ರಾ.ಪಂ ಅಧ್ಯಕ್ಷ ಶರಣಮ್ಮ ಕುದರಿ,ಉಪಾಧ್ಯಕ್ಷ ಯಂಕಪ್ಪ,ಗ್ರಾ.ಪಂ ಕಾರ್ಯದರ್ಶಿ ರಾಚಪ್ಪ,ತಿಮ್ಮಯ್ಯ ದೊರಿ ಡೊಣ್ಣಿಗೇರಿ,ಮಹಿಬೂಬಸಾಬ್ ರುಕ್ಮಾಪುರ,ಮರೆಪ್ಪ ಸತ್ಯಂಪೇಟೆ,ಭೀಮಣ್ಣ ಮೇದಾರ,ಮೌನೊದ್ದೀನ್ ಸಾಬ್, ಹುಸೇನಸಾಬ್, ರಾಜೇಸಾಬ್,ಶ್ರೀದೇವಿ ಹುಣಸಗಿ,ಬಸ್ಸಮ್ಮ ತಡಬಿಡಿ ಇದ್ದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು, ನಾರಾಯಣ ಗುತ್ತೆದಾರ ವಂದಿಸಿದರು.ನೂರಾರು ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here